ದೀಪದ ಹಬ್ಬ ದೀಪಾವಳಿಯಲ್ಲಿ ಹಿಂದು ಬಾಂಧವರಿಗೆ ಮಹಾಲಕ್ಷ್ಮೀ ಪೂಜೆ
ದೀಪದ ಹಬ್ಬ ದೀಪಾವಳಿಯಲ್ಲಿ ಹಿಂದು ಬಾಂಧವರಿಗೆ ಮಹಾಲಕ್ಷ್ಮೀ ಪೂಜೆ
ಅಥಣಿ 07 : ಸರ್ವೇ ಸಾಮಾನ್ಯ ಆದರೆ ಇಲ್ಲೊಬ್ಬ ಅಪರೂಪದ ಮುಸ್ಲಿಂ ಉದ್ಯಮಿ, ಗುತ್ತಿಗೆದಾರ ಇಮಾಮಸಾಬ ಬಿರಾದಾರ ತಮ್ಮ ಮಾಲಿಕತ್ವದ ಬಿರಾದಾರ ಪೆಟ್ರೋಲಿಯಮ್ಸನಲ್ಲಿ ಮಹಾಲಕ್ಷ್ಮೀ ಪೂಜೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ಭಾವೈಕ್ಯ ಸಂದೇಶ ಸಾರಿದರು. ದೀಪಾವಳಿ ಹಬ್ಬದ ಕೊನೆಯ ದಿನ ಕಡೆ ಪಂಚಮಿಯ ದಿನದಂದು ಇಮಾಮ್ ಬಿರಾದಾರ ತಮ್ಮ ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಹಿಂದು ಬಾಂಧವರಿಗೆ ಹೊಸ ಬಟ್ಟೆ ಜೊತೆಗೆ ಮಹಾ ಪ್ರಸಾದ ಮಾಡಿಸುತ್ತಾರೆ ಅಲ್ಲದೆ ಪೂಜೆಯ ಸಮಯದಲ್ಲಿ ತಾನೂ ಭಾಗವಹಿಸಿ ಎಲ್ಲರಲ್ಲಿ ಒಂದಾಗುವ ಇವರ ಈ ಭಾವೈಕ್ಯದ ಭಾವ ದೇಶದ ಎಲ್ಲರಲ್ಲಿಯೂ ಮೂಡಿದಲ್ಲಿ ಭಾರತ ಭವ್ಯ ಮತ್ತು ಸಾಮರಸ್ಯದ ನಾಡಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಮಹಾಲಕ್ಷ್ಮೀ ಪೂಜೆ ನೆರವೇರಿಸಿ ಮಾತನಾಡಿದ ಉದ್ಯಮಿ ಇಮಾಮಸಾಬ ಬಿರಾದಾರ, ನಮ್ಮ ಮಾಲಿಕತ್ವದ ಸ್ಟೋನ್ ಕ್ರಷರ್, ಅಥಣಿ ಹಾಗೂ ತಿಕೋಟಾದಲ್ಲಿರುವ ಪೆಟ್ರೋಲ್ ಬಂಕಗಳಲ್ಲಿ ಪ್ರತಿ ವರ್ಷವೂ ಕೂಡ ದೀಪಾವಳಿ ಹಬ್ಬದ ಕೊನೆಯ ದಿನ ಕಡೆ ಪಂಚಮಿ ದಿನದಂದು ಸಂಪ್ರದಾಯ ಬದ್ಧವಾಗಿ ಮಹಾಲಕ್ಷ್ಮೀ ಪೂಜೆ ಭಯ, ಭಕ್ತಿಯಿಂದ ನೆರವೇರಿಸುತ್ತಿದ್ದೇವೆ ಎಂದ ಅವರು ಇದೇ ರೀತಿಯ ಭಾವ ನಮ್ಮ ದೇಶದ ಹಿಂದು, ಮುಸ್ಲಿಂ ಎನ್ನುವ ಭೇದ ಭಾವ ಇಲ್ಲದೆ ದೇಶದ ಏಕತೆಗೆ ಶ್ರಮಿಸಿದಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಸುಭಾಸ ಪೂಜಾರಿ, ಚಂದ್ರಕಾಂತ ಶೆಟ್ಟಿ, ಜುನೆದ ಮನಗೂಳಿ, ಆನಂದ ಕಾಂಬಳೆ, ಕಿರಣ ಚವ್ಹಾಣ, ಗಫೂರ ಮುಲ್ಲಾ, ಮೆಹಬೂಬ ಬಿರಾದಾರ, ಅಶೋಕ. ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.