ಕನ್ನಡ ಸಾಹಿತ್ಯ ಸಮೇಳನವನ್ನು ಅರ್ಥ ಪೂರ್ಣ ಆಚರಣೆಗೆ ಶಾಸಕ ನ್ಯಾಮಗೌಡ ಕರೆ
ಲೋಕದರ್ಶನ ವರದಿ,
ಜಮಖಂಡಿ 18: 8ನೇ ಕನ್ನಡ ಸಾಹಿತ್ಯ ಸಮೇಳನವನ್ನು ಡಿ,25 ರಂದು ಅದ್ದೂರಿಯಾಗಿ ಆಚರಿಸುವ ಜೊತೆಗೆ ಗೋಷ್ಠಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ, ಅರ್ಥ ಪೂರ್ಣವಾಗಿ ಆಚರಿಸಬೇಕೆಂದು ಶಾಸಕ ಆನಂದ ನ್ಯಾಮಗೌಡ ಕರೆಯನ್ನು ನೀಡಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಬಸವ ಭವನದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮೇಳವು ಶರಣ ಈಶ್ವರ ಮಂಟೂರ, ಮಲ್ಲಯ್ಯಾ ಸ್ವಾಮಿ ಮಧುರಖಂಡಿ ಇವರ ಹೆಸರಿನಲ್ಲಿ ಪ್ರಧಾನ ವೇದಿಕೆಯಾಗಿರುತ್ತದೆ. ಅಪ್ಪಾಲಾಲ ಅವರ ಹೆಸರಿನಲ್ಲಿ ಮಳಿಗೆಗಳು ಪ್ರಾರಂಭಗೊಳ್ಳುತ್ತವೆ. 7.15 ಕ್ಕೆ ಕನ್ನಡ ಧ್ವಜ, ರಾಷ್ಟ್ರ ಧ್ವಜವನ್ನು ಶಾಸಕ ಆನಂದ ನ್ಯಾಮಗೌಡ, ಶಿವಾನಮನದ ಶೆಲ್ಲಿಕೇರಿ ಅವರು ನೇರವರಿಸುವರು. ಬೆಳಗ್ಗೆ 8 ಗಂಟೆಗೆ ಕನ್ನಡ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯು ಹಳೇ ತಹಶೀಲದಾರ ಕಚೇರಿಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿ ಬಸವ ಭವನ ತಲುಪುವುದು ಎಂದರು.
ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯನ್ನು ಓಲೇಮಠದ ಡಾ, ಚನ್ನಬಸವ ಶ್ರೀಗಳು ಉದ್ಘಾಟಿಸುವರು. ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸುವರು. ಡಾ ಓಂಕಾರ ಕಾಕಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವರಿ ಸಚಿವ ಸಿ,ಸಿ,ಪಾಟೀಲ, ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಂಸದ ಪಿ, ಸಿ, ಗದ್ದಿಗೌಡರ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಳ್ಳುವರು. 12 ಗಂಟೆಗೆ ಕೃಷಿ ಮತ್ತು ಸಂವಿಧಾನ ಕುರಿತು ಮೊದಲನೆ ಗೋಷ್ಠಿಯನ್ನು ಪ್ರೋ ಬಸವರಾಜ ಕಡ್ಡಿ ಅವರು ನಡೆಸಲಿದ್ದು. ಸಾನಿಧ್ಯ ಕೊಣ್ಣೂರ ಮಠದ ಡಾ,ವಿಶ್ವಪ್ರಭು ಶ್ರಿಗಳು ವಹಿಸುವರು. ಉಪನ್ಯಾಸ ಮಲ್ಲಿಕಾರ್ಜುನ ಇಚಿಡಿ, ಬಸವರಾಜ ಗಿರಿಗಾಂವಿ, ಎನ್,ಎಸ್, ದೇವರವರ ನಡೆಸುವರು. 2.15ಕ್ಕೆ ಎರಡನೇದ್ದು ಕವಿಗೋಷ್ಠಿಯಲ್ಲಿ ಗೌರಿಶಂಕರ ಶ್ರೀಗಳು ಸಾನಿಧ್ಯ ವಹಿಸಿಕೊಳ್ಳುವರು. ಶಾರದಾ ಮುಳ್ಳೂರ ನಡೆಸುವರು. 3.15 ಕ್ಕೆ ಮೂರನೇ ಗೋಷ್ಠಿಯಲ್ಲಿ ರುದ್ರಾವಧೂತ ಮಠದ ಸಹಜಾನಂದ ಅವಧೂತರು ಸಾನಿಧ್ಯ ವಹಿಸಿವರು. ಡಾ,ಟಿ,ಪಿ,ಗಿರಡ್ಡಿ, ಸಂತೋಷ ತಳಕೇರಿ ಭಾಗವಹಿಸುವರು. ಸಂಜೆ 4.15 ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯುತ್ತದೆ. ಸಂಜೆ 6 ಕ್ಕೆ ಸಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತ ಶ್ರೀಗಳು ವಹಿಸುವರು. ಉಪವಿಭಾಗಾಧಿಕಾರಿ ಡಾ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ ಸದಾಶಿವ ಮಕ್ಕೋಜಿ ಭಾಗವಹಿಸುವರು. ವಿವಿಧ ಸಮಿತಿ ರಚನೆಯನ್ನು ಮಾಡಲಾಗಿದೆ. ಹಣಕಾಸು ಸಮಿತಿ, ಊಟ ಮತ್ತು ಉಪಹಾರ ಸಮಿತಿ, ಮೆರವಣಿಗೆ ಸಮಿತಿ, ಮಳಿಗೆ ಸಮಿತಿ, ಸಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ, ಪ್ರಚಾರ ಸಮಿತಿ ಹೀಗೆ ಹಲವಾರ ಸಮಿತಿಗಳನ್ನು ರಚನೆ ಮಾಡಲಾಗಿದೆ. ಮಾಹಾಪೋಷಕರಾಗಿ ಸಂಸದ ಪಿ,ಸಿ, ಗದ್ದಿಗೌಡರ, ಸಚಿವರಾದ ಸಿ, ಸಿ, ಪಾಟೀಲ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಪಿಎಚ್ ಪೂಜಾರ, ಹನುಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ, ಜಿ.ಎಸ್.ನ್ಯಾಮಗೌಡ, ಜಗದೀಶ ಗುಡಗುಂಟಿ, ಅರುಣಕುಮಾರ ಶಹಾ ಹಲವಾರು ಗಣ್ಯರನ್ನು ನೇಮಕ ಮಾಡಲಾಗಿದೆ. ಹೀಗೆ ಹಲವಾರ ಸಮಿತಿಗಳನ್ನು ನೇಮಕ ಮಾಡಲಾಗಿದೆ ಎಂದರು.
ನ್ಯಾಯವಾದಿ ಎನ್,ಎಸ್,ದೇವರವರ, ತಹಶೀಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿದರು. ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಪ್ರೋ,ಬಸವರಾಜ ಕಡ್ಡಿ, ಡಾ, ಟಿಪಿ.ಗಿರಡ್ಡಿ, ಸಿ.ಎಸ್.ಬಾಂಗಿ, ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ, ನರಸಿಂಹ ಕಲ್ಲೊಳ್ಳಿ, ಎಮ್.ಡಿ.ಸಂಕ, ರಾಮಪ್ಪಾ ರಾಮತಾಳ, ಶಂಕರ ಹನಗಂಡಿ, ವಿನೋದ ಲೋಣಿ, ಈರಪ್ಪಾ ಸುತಾರ, ಪ್ರಶಾಂತ ಕುಲಕರ್ಣಿ, ಬಸವರಾಜ ಹರಕಂಗಿ, ಕಿರಣ ಪಿಸಾಳ, ಸುನೀಲ ಸಿಂಧೆ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದರು.