ಜಮಖಂಡಿ

ಕುಡಿಯುವ ನೀರು ಸರಬರಾಜು ಕೇಂದ್ರಕ್ಕೆ ಶಾಸಕ ಗುಡಗುಂಟಿ ಭೇಟಿ

ಕುಡಿಯುವ ನೀರು ಸರಬರಾಜು ಕೇಂದ್ರಕ್ಕೆ ಶಾಸಕ ಗುಡಗುಂಟಿ ಭೇಟಿ

ಲೋಕದರ್ಶನ ವರದಿ,

ಜಮಖಂಡಿ 02: ನಗರದ ನಿವಾಸಿಗಳಿಗೆ ಶುದ್ದವಾದ ಕುಡಿಯುವ ನೀರು ನೀಡುವದೆ ನಮ್ಮ ಗುರಿಯಾಗಿದೆ. ನೀರಿನ ಶುದ್ಧೀಕರಣದ ಪ್ರತಿ ಹಂತದಲ್ಲಿಯೂ ಬದಲಾವಣೆ ಅವಶ್ಯವಾಗಿದೆ ಅದಕ್ಕಾಗಿ ಬೆಳಗಾವಿಯ ಟೆಕ್ಸಮ್ಯಾಟ್ಸ ಮಾರ್ಕೆಟಿಂಗ ಸೋಸೈಟಿಯ ತಂತ್ರಜ್ಞರನ್ನು ಕರೆಯಿಸಿ ಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಮುಂದಿನ ಕಾರ್ಯವನ್ನು ಮಾಡುತ್ತೇವೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ಶುದ್ಧೀಕರಣ ಕುಡಿಯುವ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಘಟಕದಲ್ಲಿ ಯಾವುದೆ ತರಹದ ತಂತ್ರಜ್ಞರು ಇಲ್ಲದಿರುವದು ಕಂಡು ಬರುತ್ತದೆ. ಕಳೆದ ಬಾರಿ ಇಲ್ಲಿಗೆ ಬಂದಾಗ ಹೇಗಿತ್ತೋ ಹಾಗೇ ಇದೆ ಅದಕ್ಕಾಗಿ ಇದರ ಸಂಪೂರ್ಣ ಬದಲಾವಣೆಯನ್ನು ಮಾಡುವದಕ್ಕಾಗಿ ತಂಡವನ್ನು ಕರೆಯಿಸಲಾಗಿದೆ. ಅವರು ಎಲ್ಲವನ್ನು ಪರಿಶೀಲನೆ ಮಾಡಿ ವರದಿಯನ್ನು ನೀಡುತ್ತಾರೆ. ಒಟ್ಟಾರೆಯಾಗಿ ಘಟಕದ ಎಲ್ಲ ಬದಲಾವಣೆಯನ್ನು ಶೀಘ್ರದಲ್ಲಿ ಮಾಡುತ್ತೇವೆ ಎಂದರು.

ನೀರು ಶುದ್ಧೀಕರಣ ಘಟಕದಲ್ಲಿ ಪ್ರತಿ ಹಂತದ ಶುದ್ದೀಕರಣದ ಮೇಲೆ ನಿಗಾವಹಿಸಲು ಓರ್ವ ತಂತ್ರಜ್ಞರ ಅವಶ್ಯಕತೆಯಿದೆ. ಆರೋಗ್ಯ ಇಲಾಖೆಯಿಂದ ಧೃಡೀಕರಿಸಿ ರಸಾಯನಿಕ ಉಪಯೋಗವನ್ನು ಮಾಡಲಾಗುತ್ತದೆ. ಯಾವ ಪ್ರಮಾಣದಲ್ಲಿ ಕ್ಲೋರಿನೇಶನ ಹಾಕಬೇಕು ಇದೆಲ್ಲವೂ ಅವರೇ ನಿರ್ವಹಿಸಬೇಕಾಗುತ್ತದೆ ಅದಕ್ಕಾಗಿ ಈ ತಂಡದ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ಬೆಳಗಾವಿಯ ಟೆಕ್ಸಮ್ಯಾಟ್ಸ ಮಾಕರ್ೆಟಿಂಗ ಸೋಸೈಟಿಯ ತಂತ್ರಜ್ಞರನ್ನು ತಂಡದ ಚಿದಾನಂದ ರೂಗೆ ಮಾತನಾಡಿದ ಅವರು, ಪ್ರಸ್ತುತ ಇಲ್ಲಿ ಸರಿಯಾದ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಪ್ರತಿಯೊಂದು ಹಂತದಲ್ಲಿ ನಿರ್ವಹಣೆಯನ್ನು ಇಲ್ಲಿಯ ನಿವರ್ಾಹಕರು ಮಾಡಿಲ್ಲವಾದರಿಂದ ಯಂತ್ರಗಳ ಕಾರ್ಯಕ್ಷಮತೆ ಕುಂಠಿತವಾಗುತ್ತದೆ ಅದಕ್ಕಾಗಿ ನಾವಿಂದು ನಮ್ಮ ತಂಡದೊಂದಿಗೆ ಇಲ್ಲಿಯ ಎಲ್ಲ ಮಾಹಿತಿಯನ್ನು ಕ್ರೋಢಿಕರಿಸಿ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ವರದಿಯನ್ನು ನೀಡುತ್ತೇವೆ ಎಂದರು.

ಇದು ಸುಮಾರು 23 ವರ್ಷದ ಹಳೆಯ ಶುದ್ದೀಕರಣ ಕೇಂದ್ರವಾಗಿದ್ದು. ನದಿಯ ನೀರನ್ನು ಮಾತ್ರ ಶುದ್ಧೀಕರಣಗೊಳಿಸುತ್ತದೆ. ಮೊದಲು ಯಾವ ಹಂತದಲ್ಲಿ ಶುದ್ದೀಕರಣ ಮಾಡಿಸಬೇಕು ಎಂದು ತಿಳಿಸಿ ಮುಂದಿನ ಕೆಲಸವನ್ನು ಮಾಡಲಾಗುತ್ತದೆ.  ನಮ್ಮ ತಂಡದಿಂದ ಮಾಹಿತಿಯ ಜೊತೆಗೆ ಶುದ್ದೀಕರಣವನ್ನು ಹೇಗೆ ಮಾಡಬೇಕು ಎಂದು ತಿಳಿಸಿಕೊಡುತ್ತೇವೆ ಎಂದರು.

ಎಸಿ, ಸಂತೋಷ ಕಾಮಗೊಂಡ, ತಹಶೀಲ್ದಾರ ಸದಾಶಿವ ಮಕ್ಕೋಜಿ, ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ನಗರಸಭೆ ಎಇಇ. ಟೆಕ್ಸಮ್ಯಾಟ್ಸ ಮಾಕರ್ೆಟಿಂಗ ತಂತ್ರಜ್ಞ ತಂಟದ ಮಹೇಶ ದೆಂಗೆ, ಕೇಶವ ಮಕಲಾಲ, ನಿಜಲಿಂಗ ಕೆ, ಸೇರಿದಂತೆ ಅನೇಕರು ಇದ್ದರು.



ಸುದ್ದಿ ಓದಿ