ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಗುಡಗುಂಟಿ ಭೇಟಿ
ಲೋಕದರ್ಶನ ವರದಿ
ಜಮಖಂಡಿ 27:ಜಮಖಂಡಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಹಿಂದುಳಿದ ವರ್ಗಗಳ ವಸತಿ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಜಗದೀಶ ಗುಡಗುಂಟಿ ಅವರು ಭೇಟಿ ನೀಡಿ. ಅಧಿಕಾರಿಗಳನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಸಾಕಷ್ಟು ಅರ್ಜಿ ಸಲಿಸಿದ್ದು. ಆದರೆ ಜಮಖಂಡಿ ತಾಲ್ಲೂಕಿನ ಮಕ್ಕಳಿಗೆ ವಸತಿ ನಿಲಯಕ್ಕೆ ಅವಕಾಶ ನೀಡದೆ. ಬೇರೆ ಜಿಲ್ಲೆ ಹಾಗೂ ಬೇರೆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕಾಲಾವಕಾಶವನ್ನು ಯಾಕೆ ನೀಡಿದಿರಿ ಎಂದು ವಾರ್ಡನಶಶಿಕಲಾ ಮಡಿವಾಳರ. ಹಿಂದುಳಿದ ವರ್ಗದ ವಸತಿ ನಿಲಯದ ಅಧಿಕಾರಿ ರಾಮಲಿಂಗ ಬೈರವಾಡಗಿ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ. ಮ್ಯಾನೇಜರ್ ಶಿದ್ರಾಮ ಗೋಲಾಯಿ ಅವರನ್ನು ಪ್ರಶ್ನಿಸಿದರು.ಜಮಖಂಡಿ ಮತಕ್ಷೇತ್ರದ ಮಕ್ಕಳು ಸರಕಾರಿ ಇಲಾಖೆಯಗಳ ವಸತಿ ನಿಲಯಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆ ಅವಕಾಶ ನೀಡಿಲ್ಲ. ಬಡ ಮಕ್ಕಳು ವಸತಿ ನಿಲಯವನ್ನು ಆಸರೆಯಾಗುತ್ತದೆಂದು ಅರಸಿ ಬಂದಿರುತ್ತಾರೆ. ಹೀಗಾದರೆ ಮಕ್ಕಳ ಭವಿಷ್ಯ ಏನು..? ಎಂದರು.ಸರಿಯಾದ ವ್ಯವಸ್ಥೆ ಮಾಡದಿದ್ದರೆ ಒಳ್ಳೆಯದು ಇಲ್ಲದೆ ಹೋದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.ಪ್ರತಿಯೊಂದು ಮಕ್ಕಳ ವಸತಿ ನಿಲಯಗಳಲ್ಲಿನ ಮಕ್ಕಳನ್ನು ವಿಚಾರಿಸಿದರು.ಇದೇ ಸಂದರ್ಭದಲ್ಲಿ ನಾಗಪ್ಪ ಸನದಿ. ಅಜೇಯ ಕಡಪಟ್ಟಿ. ಗಣೇಶ ಶಿರಗನ್ನವರ. ಆದರ್ಶ ರೂಗಿಮಠ. ಶ್ರೀಧರ ಕಂಬಿ. ವಿಶ್ವಾಸ ಪಾಟೀಲ ಸೇರಿದಂತೆ ಅನೇಕರು ಇದ್ದರು.