ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಅಥಣಿ 27: ಸಹಕಾರಿ ತತ್ವದ ಆಧಾರದ ಮೇಲೆ ಪ್ರಾರಂಭಗೊಂಡಿರುವ ದಿ. ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಸನ್ 2023-24 ನೇ ಸಾಲಿನಲ್ಲಿ ಕಬ್ಬು ಪೂರೈಸುವ ರೈತರಿಗೆ ಉಗಾರ, ರೇಣುಕಾ ಹಾಗೂ ಕೆಂಪವಾಡ ಸಕ್ಕರೆ ಕಾರ್ಖಾನೆಗಳು ಯಾವ ದರವನ್ನು ನೀಡುತ್ತವೆಯೋ ಆ ದರವನ್ನು ನಾವು ನೀಡಲು ಸಿದ್ದ ಎಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪಣ ಸವದಿ ಹೇಳಿದರು.
ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗುರುವಾರ ಸನ್ 2022-23 ನೇ ಸಾಲಿನ 22 ನೇ ಕಬ್ಬು ನುರಿಸುವ ಹಂಗಾಮಿಗೆ ಕ್ಯಾರಿಯರಗೆ ಕಬ್ಬು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಹಕಾರ ತತ್ವದ ಆಧಾರದ ಮೇಲೆ ಪ್ರಾರಂಗೊಂಡಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಇದು ರೈತರ ಕಾರ್ಖಾನೆಯಾಗಿದೆ. ನಾವು ಯಾವುದೇ ಉಪ ಉತ್ಪನ್ನಗಳನ್ನು ಉತ್ಪಾದಿಸದೇ ಕೇವಲ ಕಬ್ಬಿನಿಂದ ಸಕ್ಕರೆ ತಯಾರಿಸಿ ರೈತರಿಗೆ ಯೋಗ್ಯ ದರ ನೀಡುತ್ತಿದ್ದೇವೆ. ಬರುವ ದಿನಮಾನಗಳಲ್ಲಿ ಇಥೇನಾಲ್ ಘಟಕವನ್ನು ಪ್ರಾರಂಭಿಸುವುದರ ಜೊತೆಗೆ ಕೋ-ಜನ್ ಸಾಮಥ್ರ್ಯ ಹೆಚ್ಚಿಸುವ ಗುರಿ ಹೊಂದಲಾಗಿದೆ ಇದರಿಂದ ರೈತರಿಗೆ ಇನ್ನಷ್ಟು ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ. ರೈತ ಬಾಂದವರು ಉತ್ತಮ ಗುಣ ಮಟ್ಟದ ಕಬ್ಬನ್ನು ಪೂರೈಸುವಂತೆ ಪರಪ್ಪಣ್ಣ ಸವದಿ ರೈತರಲ್ಲಿ ಮನವಿ ಮಾಡಿದರು.
ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಿ.ಎಮ್. ಪಾಟೀಲ, ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಸೌರಭ ಪಾಟೀಲ, ಮಲ್ಲಿಕಾರ್ಜುನ ಗೊಠಕಿಂಡಿ, ಸಿದ್ರಾಯ ನಾಯಿಕ, ಹಣಮಂತ ಜಗದೇವ, ವಿಶ್ವನಾಥ ಪೊಲಿಸಪಾಟೀಲ, ಸುನಂದಾ ನಾಯಿಕ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಉಪಸ್ಥಿತರಿದ್ದರು. ಉದ್ಯಮಿ ಮಲ್ಲೇಶ ಸವದಿ, ಮುಖಂಡರಾದ ಶ್ರೀಶೈಲ ನಾಯಿಕ, ಜಡೆಪ್ಪ ಕುಂಬಾರ, ತಮ್ಮಣ್ಣಪ್ಪ ತೇಲಿ, ಶಿವಾನಂದ ಸವದಿ, ಶಿವು ನಾಯಿಕ, ಪ್ರಶಾಂತ ಅಕ್ಕೋಳ, ಪ್ರದೀಪ ನಂದಗಾಂವ, ಕಾರಖಾನೆ ಸಿಬ್ಬಂದಿಗಳು ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ಕಚೇರಿ ಅಧೀಕ್ಷಕ ಸುರೇಶ ಠಕ್ಕಣ್ಣವರ, ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಲೆಕ್ಕಾಧಿಕಾರಿ ಎ.ಸಿ.ರಾಚಪ್ಪನವರ ವಂದಿಸಿದರು