ಜಮಖಂಡಿ

ಕಂಕಣವಾಡಿ ಶ್ರೀ ಗುಹೇಶ್ವರ ಜ್ಯೋರ್ತಿಲಿಂಗ;. 18 ರಂದು ಲಿಂಗಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ

ಕಂಕಣವಾಡಿ ಶ್ರೀ ಗುಹೇಶ್ವರ ಜ್ಯೋರ್ತಿಲಿಂಗ;. 18 ರಂದು ಲಿಂಗಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ


ಜಮಖಂಡಿ 17: ತಾಲೂಕಿನ ಕಂಕಣವಾಡಿ ಗ್ರಾಮದ ಶ್ರೀ ಗುಹೇಶ್ವರ ಸುಕ್ಷೇತ್ರದ ಜಾತ್ರಾ ಮಹೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವ  ಕಾರ್ಯಕ್ರಮ ಜ, 18 ರಂದು ಜರುಗುವದು. ಬೆಳಿಗ್ಗೆ 7 ಗಂಟೆಗೆ ಶ್ರೀ ಗುಹೇಶ್ವರ ಜ್ಯೋರ್ತಿಲಿಂಗಕ್ಕೆ ವಚನ ಲಿಂಗಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, 10.30 ಗಂಟೆಗೆ ಕಂಕಣವಾಡಿ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ. 12 ಗಂಟೆಗೆ ವಚನ ಪಲ್ಲಕ್ಕಿ ಮಹೋತ್ಸವ ಹಾಗೂ ಮಹಾ ಪ್ರಸಾದ ಕಾರ್ಯಕ್ರಮ ಜರುಗುವದು. ಮದ್ಯಾಹ್ನ 2 ಗಂಟೆಗೆ ಕಂಕಣವಾಡಿ, ಸುಟ್ಟಟ್ಟಿ, ಚಿಕ್ಕಪಡಸಲಗಿ, ಮುತ್ತೂರ, ಸೇರಿದಂತೆ ವಿವಿಧ ಗ್ರಾಮಗಳ ಕಲಾವಿಧರಿಂದ ಕರಡಿವಾದನ, ಕಣಿವಾದನ, ಹಾಗೂ ಸಂಭಾಳವಾದನ ಜರುಗುವದು.  

ಸಂಜೆ 6 ಗಂಟೆಗೆ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವನಬಾಗೇವಾಡಿಯ ಹಿರೇಮಠದ  ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಮುಧೋಳ ಗವಿಮಠದ  ಬಸಲಿಂಗ ಶ್ರೀಗಳು, ಹಿರೇಆಸಂಗಿ ವಿರಕ್ತಮಠದ ವೀರಬಸವ ದೇವರು, ಐಗಳಿ ಕಮಡೊಳ್ಳಿ ಶ್ರೀಗುರು ಲೋಚನೇಶ್ವರ ವಿರಕ್ತಮಠದ ಅಭಿನವ ರಾಚೋಟೇಶ್ವರ ದೇವರು ವಹಿಸುವರು. ಓಲೇಮಠದ ಶ್ರೀ ಆನಂದ ದೇವರು ಅಧ್ಯಕ್ಷತೆ ವಹಿಸುವರು.  

ನಂಬಿ ಕರೆದೊಡೆ ಓ ಎನ್ನನೇ ಶಿವನು ಎಂಬ ವಿಷಯ ಕುರಿತು ಪೂಜ್ಯರು ಅನುಭಾವ ನೀಡುವರು. ರಾತ್ರಿ 10 ಗಂಟೆಗೆ  ಗುಹೇಶ್ವರ ಭಜನಾ ಮಂಡಳಿ ಕಂಕಣವಾಡಿ ಸಿದ್ದಾರೂಡ ಭಜನಾ ಮಂಡಳಿ ದೇವರ ಕಲ್ಲೋಳ್ಳಿ ಹಾಗೂ ಕುಳಲಿಯ ಲಕ್ಷ್ಮೀದೇವಿ ಭಜನಾ ಮಂಡಳ ಕಲಾವಿಧರಿಂದ ತತ್ವ ಪದಗಳು ಜರಗುವವು. ಜ, 19 ರಂದು ಮುಂಜಾನೆ 6 ಗಂಟೆಗೆ ಮಹಾ ಮಂಗಲ ಜರಗುವದು ಎಂದು ಕಂಕಣವಾಡಿ ಸದ್ಬಕ್ತ ಮಂಡಳಿ ಪ್ರಕಟೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ