ಜಮಖಂಡಿ ವಿಧಾನಸಭಾ ಉಪ ಚುನಾವಣೆ-2018 ಪ್ರತಿಶತ 77.17 ರಷ್ಟು ಶಾಂತಿಯುತ ಮತದಾನ
ಬಾಗಲಕೋಟೆ 03: ಜಮಖಂಡಿ ಮತಕ್ಷೇತ್ರಕ್ಕೆ ತೆರವಾದ ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ಶಾಂತಿಯುತವಾಗಿ ಮತದಾನ ನಡೆದ ವರದಿಯಾಗಿದೆ.
ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಯಾವುದೇ ತೊಂದರೆಯಿಲ್ಲದೇ ಶಾಂತಯುತವಾಗಿ ಮತದಾನ ಪ್ರಕ್ರಿಯೆ ಜರುಗಿದ್ದು, ಸಂಜೆ 6 ಗಂಟೆ ಸುಮಾರಿಗೆ ಅಂದಾಜು ಶೇ.77.17 ರಷ್ಟು ಮತದಾನವಾದ ವರದಿಯಾಗಿದೆ. ಪ್ರಾರಂಭದಲ್ಲಿ ಮತದಾನ ಮಂದಗತಿಯಲ್ಲಿ ನಡೆದರು ತದನಂತರ ಚುರುಕಾರಿ ನಡೆದಿದ್ದು ಕಂಡುಬಂದಿತು. ಬೆಳಿಗ್ಗೆ 9 ಗಂಟೆಗೆ ಶೇ.9 ರಷ್ಟು ಮತದಾನವಾದರೆ, 11 ಗಂಟೆ ಸುಮಾರಿಗೆ ಶೇ.22.30 ರಷ್ಟು ಮತದಾನವಾಗಿದೆ. ಮದ್ಯಾಹ್ನ 1 ಗಂಟೆಗೆ ಶೇ.43.50 ರಷ್ಟು ಮತದಾನವಾದರೆ 3 ಗಂಟೆಗೆ ಶೇ.58.82 ರಷ್ಟು ಮತದಾನಗಿದೆ. ಸಂಜೆ 5 ಗಂಟೆ ಸುಮಾರಿಗೆ ಅಂದಾಜು ಶೇ.74.41 ರಷ್ಟು ಮತದಾನವಾದ ವರದಿಯಾಗಿದ್ದು ಕಂಡುಬಂದಿತು.
ಉಪ ಚುನಾವಣೆಗೆ ಒಟ್ಟು 2 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಈ ಪೈಕಿ ಹುಲ್ಯಾಳ ಪಿಂಕ್ ಮತಗಟ್ಟೆಯಲ್ಲಿ ಸಿಬ್ಬಂದಿಯಿಂದ ಹಿಡಿದು ಎಲ್ಲವೂ ಪಿಂಕ್ ಬಣ್ಣದಿಂದ ಕೂಡಿದ್ದು, ಬಲೂನಗಳಿಂದ ಶೃಂಗಾರ ಮಾಡಲಾಗಿತ್ತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಜಿ.ಶಾಂತಾರಾಮ ಹಾಗೂ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ಸಿದ್ದಾಪೂರ ಗ್ರಾಮದಲ್ಲಿ ಪ್ರಾರಂಭದಲ್ಲಿ ಮಹಿಳಾ ಮತದಾರರು ಹೆಚ್ಚಿಗೆ ಮತದಾನ ಮಾಡಿದ್ದು ಕಂಡುಬಂದಿತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಮತಗಟ್ಟೆ ಸಂಖ್ಯೆ 194 ರಲ್ಲಿ ಚಲಾವಣೆಗೊಂಡ 184 ಮತದಾನದಲ್ಲಿ 85 ಪುರುಷರು ಮತ ಚಲಾಯಿಸಿದರೆ 99 ಮಹಿಳಾ ಮತದಾರರು ಚಲಾಯಿಸಿದ್ದು ಕಂಡಿಬಂದಿತು. ಅಲ್ಲದೆ 195 ಮತಗಟ್ಟೆಯಲ್ಲಿ 204 ಪೈಕಿ 95 ಪುರುಷ ಹಾಗು 112 ಮಹಿಳಾ ಮತದಾನ ಮಾಡಿದ್ದು ಕಂಡುಬಂದಿತು.
ಜಮಖಂಡಿ ನಗರದಲ್ಲಿ ಪ್ರಾರಂಭದಲ್ಲಿ ಮತದಾನ ಮಂದಗತಿಯಿಂದ ನಡೆದರು ನಂತರ ಚುರುಕಾರಿ ನಡೆಯಿತು. ಜಮಖಂಡಿ ನಗರದ 179 ಮತಗಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ 169, 178 ಮತಗಟ್ಟೆಯಲ್ಲಿ 301, 162 ಮತಗಟ್ಟೆಯಲ್ಲಿ 239 ಹಾಗೂ 161 ಮತಗಟ್ಟೆಯಲ್ಲಿ 254 ಮತದಾನವಾಗಿದ್ದು ಕಂಡುಬಂದಿತು. 11 ಗಂಟೆ ಸುಮಾರಿಗೆ ಸಾವಳಗಿಯ ಮಾದರಿ ಮತಗಟ್ಟೆ 15 ರಲ್ಲಿ 168, ಮತಗಟ್ಟೆ 13 ರಲ್ಲಿ 221, 12 ರಲ್ಲಿ 243, 14 ರಲ್ಲಿ 255 ಹಾಗೂ 16 ರಲ್ಲಿ 294 ಮತದಾನವಾಗಿತ್ತು.
ಕನ್ನೊಳ್ಳಿ ಗ್ರಾಮದಲ್ಲಿ 12 ಸುಮಾರಿಗೆ ಮತಗಟ್ಟೆ ಸಂಖ್ಯೆ 36 ರಲ್ಲಿ 599 ಮತಗಳ ಪೈಕಿ 172 ಆದರೆ ಮತಗಟ್ಟೆ 37 ರಲ್ಲಿ 977 ಮತದಾರರ ಪೈಕಿ 272, 38 ರಲ್ಲಿ 619 ಮತಗಳ ಪೈಕಿ 231 ಮತಗಳು ಚಲಾವಣೆಗೊಂಡಿದ್ದವು. ಗದ್ಯಾಳ ಗ್ರಾಮದಲ್ಲಿ ಮತಗಟ್ಟೆ ಸಂಖ್ಯೆ 33 ರಲ್ಲಿ 989 ಮತಗಳ ಪೈಕಿ 549, ಮತಗಟ್ಟೆ ಸಂಖ್ಯೆ 34 ರಲ್ಲಿ 714 ಮತಗಳ ಪೈಕಿ 416 ಮತಗಳು ಚಲಾವಣೆಗೊಂಡಿದ್ದವು. ಅದೇ ರೀತಿ ತೊದಲಬಾಗಿ ಗ್ರಾಮದ ಮತಗಟ್ಟೆ ಸಂಖ್ಯೆ 45 ರಲ್ಲಿ ಹೆಚ್ಚಿನ ಮತದಾನವಾದ ವರದಿಯಾಗಿದೆ. ಮದ್ಯಾಹ್ನದ ಸುಮಾರಿಗೆ ಒಟ್ಟು 1316 ಮತಗಳ ಪೈಕಿ 644 ಮತಗಳು ಚಲಾವಣೆಗೊಂಡು ಶೇ.48 ರಷ್ಟು ಮತದಾನವಾಗಿತ್ತು, ಈ ಮತಗಟ್ಟೆಯಲ್ಲಿ ಪುರುಷ ಹಾಗೂ ಮಹಿಳೆಯರು ಸಾಲು ಸಾಲಾಗಿ ನಿಂತಿದ್ದು ಕಂಡುಬಂದಿತು.
ಚುನಾವಣೆಗೆ ನೇಮಿಸಲಾದ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದು ಕಂಡುಬಂದಿತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ ವಿಕಲಚೇತನರ ಮತದಾರರಿಗೆ ಮತದಾನ ಕೇಂದ್ರಕ್ಕೆ ಕರೆತರದು ವಾಹನ ವ್ಯವಸ್ಥೆ ಮಾಡಲಾಗಿತ್ತು.