ಸ್ವಾಮೀಜಿಗಳು, ಮಠಾಧೀಶರನ್ನು ನಿಂದಿಸುವುದು ತಪ್ಪು : ಶಾಸಕ ಬಸವನಗೌಡ ಪಾಟೀಲ
It is wrong to insult Swamijis and Mathadhis: MLA Basavanagouda Patil
ಜಮಖಂಡಿ : 2-1 ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಯಾವುದೇ ಸಮಾಜ ಅಥವಾ ಸಮಾಜದ ಸ್ವಾಮೀಜಿಗಳನ್ನು ನಿಂದಿಸುವುದು ತಪ್ಪು. ಯಾರೇ ತಪ್ಪು ಮಾಡಿದ್ದರೆ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ದೇಶದ್ರೋಹಿಗಳಾದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆದರೆ ಇಡೀ ಸಮಾಜ ಗುರಿಯಾಗಿಸಿ ನಿಂದನೆ, ಅವಹೇಳನ ಮಾಡುವುದು ಸರಿಯಾದ ಕ್ರಮವಲ್ಲ. ಯತ್ನಾಳ ಅವರ ಮಾತನಾಡಿದಕ್ಕೂ ಹೊರತು ನನಗೂ ಅವರು ಪತ್ರಕರ್ತರೊಂದಿಗೆ ಮಾತನಾಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಕಾಂಗ್ರೆಸ್ ಮುಖಂಡ ಬಸವರಾಜ ಸಿಂಧೂರ ಸ್ಪಷ್ಟನೆ ನೀಡಿದರು.
ನಗರದ ಸಿಂಧೂರ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಶನಿವಾರ ನಮ್ಮ ಮನೆಗೆ ಭೇಟಿ ನೀಡಿ ಸಮಾಜದ ವಿಷಯಗಳನ್ನು ಚರ್ಚಿಸಿದರು. ಆದರೆ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲ ಸ್ವಾಮೀಜಿಗಳು, ಮಠಾಧೀಶರನ್ನು ನಿಂದಿಸಿದ್ದು ತಪ್ಪು ಎಂದರು. ಯತ್ನಾಳ ಅವರು ನಮ್ಮ ಮನೆಗೆ ಭೇಟಿ ನೀಡುವ ವಿಷಯ ನನಗೆ ತಿಳಿದಿರಲಿಲ್ಲ ನಾನೂ ಸಹ ಮನೆಯಲ್ಲಿರಲಿಲ್ಲ. ಅವರು ಬರುವ ಸುದ್ದಿ ತಿಳಿದು ಮನೆಗೆ ಆಗಮಿಸಿ ಪತ್ರಕರ್ತರು ಮಾತನಾಡಿಸಿದ್ದಾರೆ ಹೊರತು ನನಗೂ ಅವರು ಪತ್ರಕರ್ತರೊಂದಿಗೆ ಮಾತನಾಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಮ್ಮ ಮನೆಗೆ ಭೇಟಿ ನೀಡಿದ್ದರ ಹಿಂದೆ ಯಾವುದೇ ಉದ್ದೇಶವಿಲ್ಲ, ಅವರು ಪತ್ರಕರ್ತರೊಂದಿಗೆ ಮಾತನಾಡಿದ ಸುದ್ದಿಗಳು ಪ್ರಕಟವಾದ ನಂತರವೇ ನನಗೆ ಗೊತ್ತಾಗಿದೆ ಎಂದರು. ಬಿಜೆಪಿಯಲ್ಲಿ 20 ವರ್ಷಗಳ ಕಾಲ ಸೇವೆ ಮಾಡಿದ್ದೇನೆ. ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ದ್ವೇಷ ಭಾಷಣ, ಕೋಮು ಪ್ರಚೋದಿತ ಭಾಷಣ ಮಾಡಿಲ್ಲ. ಎಲ್ಲ ಸಮಾಜದವರೊಂದಿಗೆ ಉತ್ತಮ ಸಂಬಂದ ಹೊಂದಿದ್ದೇನೆ. ಶಾಸಕ ಯತ್ನಾಳ ಅವರ ಹೇಳಿಕೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಗಾಳಿ ಮಾತುಗಳಿಗೆ ಕಿವಿಗೊಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದರು
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 