ಜಮಖಂಡಿ

ತಂತ್ರಜ್ಞಾನದ ಅರಿತು ರೂಢಿಸಿಕೊಳ್ಳುವದು ಅವಶ್ಯಕ: ಗುಡಗಂಟಿ

ತಂತ್ರಜ್ಞಾನದ ಅರಿತು ರೂಢಿಸಿಕೊಳ್ಳುವದು ಅವಶ್ಯಕ:  ಗುಡಗಂಟಿ

ಲೋಕದರ್ಶನ ವರದಿ,

ಜಮಖಂಡಿ9: ವಿದ್ಯಾಥರ್ಿಗಳು ಗುಣಮಟ್ಟದ ಶಿಕ್ಷಣ ಪಡೆದು ದೇಶದ ಒಳ್ಳೆಯ ನಾಗರಿಕರಾಗಿ ಜೀವನ ಸಾಗಿಸಬೇಕು. ಪ್ರಪಂಚದಲ್ಲಿ ಎಲ್ಲವೂ ಆಧುನೀಕರಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಂತ್ರಜ್ಞಾನದ ಅರಿತು ರೂಢಿಸಿಕೊಳ್ಳುವದು ಅವಶ್ಯಕವಾಗಿದೆ ಎಂದು ಸಿದ್ದಾಪೂರ ಪ್ರಭುಲಿಂಗೇಶ್ವರ ಶುಗರ್ಸ್ ಮತ್ತು ಕೆಮಿಕಲ್ಸ್ ನಿರ್ದೇಶಕ ವಿರುಪಾಕ್ಷಯ್ಯಾ ಗುಡಗಂಟಿ ಹೇಳಿದರು.

ನಗರದ ಹೊರವಲಯದಲ್ಲಿರುವ ಜೈನ ಅನಾಥಶ್ರಮ ಮತ್ತು ವೃದ್ಧಾಶ್ರಮದಲ್ಲಿ ವಿರುಪಾಕ್ಷಯ್ಯಾ ಗುಡಗಂಟಿ ತಮ್ಮ 26ನೇ ವರ್ಷದ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಕೂಡ ನಮ್ಮ ತಂದೆ ಶಾಸಕ ಜಗದೀಶ ಗುಡಗುಂಟಿ ಅವರ ಮಾರ್ಗದರ್ಶನದಲ್ಲಿ ಅವರ ಧಾನ ಧರ್ಮದಲ್ಲಿ ಸಾಗಲು ನಿರ್ಧರಿಸಿದ್ದು, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಜೈನ ಅನಾಥಶ್ರಮದಲ್ಲಿರುವ ಮಕ್ಕಳಿಗೆ ಯಾವುದೇ ಅವಶ್ಯಕತೆಗಳು ಎದುರಾದಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತೇನೆ. ವಯೋವೃದ್ಧರು, ಅನಾಥ ಮಕ್ಕಳೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಖುಷಿಯಾಗಿದೆ. ಮಕ್ಕಳು, ವಯೋವೃದ್ದರು ಸೇರಿದಂತೆ ಅಂದಾಜು 50ಕ್ಕೂ ಹೆಚ್ಚು ಜನರು ಆಶ್ರಮದಲ್ಲಿ ಅಶ್ರಯ ಪಡೆಯುತ್ತಿದ್ದು, ಒಂದು ದಿನ ಮಟ್ಟಿಗಾದರೂ ಅವರೊಂದಿಗೆ ಸಮಯ ಕಳೆದಿದ್ದು ಖುಷಿ ತಂದಿದ್ದು, ನನ್ನ ಕೈಯಾರೆ ಅನ್ನ ಉಣಿಸುವ ಭಾಗ್ಯ ಲಭಿಸಿದ್ದು ನನ್ನ ಸೌಭಾಗ್ಯ ಎಂದರು.

ಅನ್ನಪೂರ್ಣ ಹೋಟೆಲ್ ಮಾಲೀಕ ಈರಯ್ಯ ಕಲ್ಯಾಣಿ, ಹಣಮಂತರಾಯ ಬಿರಾದಾರ, ಸುನೀಲ ಭೂವಿ, ನರೇಂದ್ರ ಮಾನೆ, ಮುತ್ತು ಆರಗಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.


ಸುದ್ದಿ ಓದಿ