ವಿದ್ಯಾರ್ಥಿಗಳಲ್ಲಿ ಅಧ್ಯಯನದ ಆಸಕ್ತಿ ಮೂಡಿಸಿ: ಕಾಂಬಳೆ
Instill interest in studies among students: Kambale
ಜಮಖಂಡಿ 08: ಪರಿಣಾಮಕಾರಿ ಬೋಧನೆ ವಿದ್ಯಾರ್ಥಿಗಳಲ್ಲಿ ಅಧ್ಯಯನದ ಆಸಕ್ತಿ ಮೂಡಿಸಿ ಪರೀಕ್ಷೆ ಫಲಿತಾಂಶದಲ್ಲಿ ಗಣನೀಯ ಸುಧಾರಣೆಗೆ ಕಾರಣವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ(ಪ.ಪೂ) ಜಿಲ್ಲಾ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಕುರಿತು ನಗರದ ಬಾಲಿಕೆಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಕೈಂಕರ್ಯದಲ್ಲಿ ಉಪನ್ಯಾಸಕರು ತೊಡಗಬೇಕು. ಪರಿಣಾಮಕಾರಿ ಬೋಧನೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಸ್ಪೂರ್ತಿಯನ್ನು ತುಂಬಬೇಕು. ಪರೀಕ್ಷಾ ಭಯ ನಿವಾರಿಸಬೇಕು.
ವಿದ್ಯಾರ್ಥಿಗಳ ಆತ್ಮಬಲ ಹೆಚ್ಚಿಸಬೇಕು. ಪಾಲಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಒಟ್ಟಾರೆಯಾಗಿ ಕಲಿಕಾ ವಾತಾವರಣ ಸೃಷ್ಟಿಸಿ ರಾಜ್ಯದಲ್ಲಿ ಜಿಲ್ಲೆಯನ್ನು ಗುರುತಿಸುವಂತಾಗಬೇಕು ಎಂದರು. ಫಲಿತಾಂಶ ಸುಧಾರಣೆ ಸಮಿತಿ ಅಧ್ಯಕ್ಷ ಎಂ.ಎಲ್. ಪಾಟೀಲ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಎಸ್.ಆರ್. ನಾಯಕೋಡಿ, ಶ್ರೀಶೈಲ ಮುಂಡಗನೂರ, ಎಂ.ಎಂ. ಪುಟ್ಟಣ್ಣವರ, ರಫೀಕ ಜಹಗೀರದಾರ, ಹನಮಂತ ಮಗದುಮ, ಶ್ರೀಮಂತ ಅಜನಾಳ, ಶ್ರೀಶೈಲ ನಿಂಬಾಳ, ಎಸ್.ಎಸ್. ಬೆಕ್ಕೇರಿ, ರವಿ ಚಿನಗುಂಡಿ ಇತರರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 