ರಸ್ತೆ ಕಾಮಗಾರಿಗೆ ಚಾಲನೆ ನೀಡಿ: ಚಿದಾನಂದ ಸವದಿ
ರಸ್ತೆ ಕಾಮಗಾರಿಗೆ ಚಾಲನೆ ನೀಡಿ: ಚಿದಾನಂದ ಸವದಿ
ಅಥಣಿ 05: ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕರಿಗೆ ಅವಶ್ಯವಾಗಿ ಬೇಕಾಗುವ ಎಲ್ಲ ಜನಪರ ಯೋಜನೆಗಳನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಹಂತ ಹಂತವಾಗಿ ಅನುಷ್ಠಾನ ಗೊಳಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಯುವ ಧುರೀಣ ಚಿದಾನಂದ ಸವದಿ ಹೇಳಿದರು. ಅವರು ಸ್ಥಳೀಯ ಎಚ್.ಬಿ.ಸಿ ರಸ್ತೆಯಲ್ಲಿ ಚರಂಡಿ ಮತ್ತು ಸ್ವಾಮಿ ಪ್ಲಾಟ್ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನ ಮತ್ತು ಮುಂದಾಲೋಚನೆ ಪರಿಣಾಮ ಅಥಣಿ ಪಟ್ಟಣದ ಜೋಡು ಕೆರೆಗಳ ಅಭಿವೃದ್ಧಿ, ಭಾಗೀರಥಿ ನಾಲಾ ಅಭಿವೃದ್ಧಿ ಸೇರಿದಂತೆ ಅನೇಕ ಪ್ರಮುಖ ಕಾಮಗಾರಿಗಳಿಗೆ ಯೋಜನೆ ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಖಲಿದೆ ಎಂದ ಅವರು ಪುರಸಭೆಯ ಎಲ್ಲ ಯೋಜನೆಗಳ ಅನುಷ್ಠಾನ ಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಾಜಶೇಖರ ಗುಡೋಡಗಿ, ಮಲ್ಲೇಶ ಹುದ್ದಾರ, ಮಲ್ಲಿಕಾರ್ಜುನ ಬುಟಾಳಿ, ತಿಪ್ಪಣ್ಣ ಭಜಂತ್ರಿ, ಧುರೀಣರಾದ ರಾಜು ಚೌಗಲಾ, ಶೇಖರ ಕೋಲಾರ, ವೃಷಭ ಪಾಟೀಲ, ಬೀರ್ಪ ಯಂಕಂಚಿ, ರಾಜು ಢಾಲೆ, ಜನಕರಾಜ ದುರ್ಗಣ್ಣವರ, ಗುತ್ತಿಗೆದಾರರಾದ ರಾಜು ಆಲಬಾಳ, ಶೇರಲಿ ಬಾರಗೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.