ನೂತನ ಪದಾಧಿಕಾರಿಗಳ ಸೇವಾದೀಕ್ಷಾ ಸಮಾರಂಭ
ಲೋಕದರ್ಶನ ವರದಿ,
ಜಮಖಂಡಿ: 14: ರೋಟರಿ ಸಂಸ್ಥೆ ರಾಮತೀರ್ಥ 2023-23ನೇ ಸಾಲಿನ ನೂತನ ಪದಾಧಿಕಾರಿಗಳ ಸೇವಾದೀಕ್ಷಾ ಸಮಾರಂಭ ನಗರದ ಬಸ ಭವನದಲ್ಲಿ ಜು.15ರಂದು ಸಂಜೆ 6 ಗಂಟೆಗೆ ಸಮಾರಂಭ ಜರಗಲಿದೆ ಎಂದು ರೋಟರಿ ಸಂಸ್ಥೆ ರಾಮತೀರ್ಥ ಅಧ್ಯಕ್ಷ ಸಿದ್ದರಾಮ ನಾವಿ ತಿಳಿಸಿದರು.
ನಗರದ ರಮಾನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006 ರಿಂದ ನಮ್ಮ ಸಂಸ್ಥೆಯು ಹಲವಾರು ಸಮಾಜಮುಖಿ ಕೆಲಸ, ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ವ್ಯವಸ್ಥಿತವಾದ ಸಂವಿಧಾನ ಬದ್ಧ, ಕಾನೂನು ರೀತಿಯಲ್ಲಿ ನಡೆದುಕೊಳ್ಳುವ ಸಂಸ್ಥೆ ನಮ್ಮದು.
ಪ್ರಸ್ತೂತ ಸಾಲಿನಲ್ಲಿ ಹಮ್ಮಿಕೊಂಡಿರುವ ಕೆಲವು ಕಾರ್ಯಕ್ರಮಗಳು ಹೀಗಿವೆ ಗ್ರಾಮೀಣ ಮಟ್ಟದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು. ಜನರ ಆರೋಗ್ಯದ ದೃಷ್ಟಿಯಿಂದ ಕ್ಯಾಂಪ್ಗಳನ್ನು ರಚಿಸಿ ಚಿಕಿತ್ಸೆ ನೀಡುವುದು ಜೊತೆಗೆ ಪಶು ಆರೋಗ್ಯ ಚಿಕಿತ್ಸಾ ಕ್ಯಾಂಪ್ ಹಮ್ಮಿಕೊಳ್ಳುವುದು. ಬಡ ಮಕ್ಕಳಿಗೆ ಶಿಕ್ಷಣ, ಪರಿಸರ ಸಂರಕ್ಷಣೆಗಾಗಿ 2000 ಗಿಡ ನೆಡುವುದು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವುದು. ಪ್ರವಾಹ ಮನ್ನೆಚರಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ನೆರವು, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು. ಹೆಣ್ಣು ಮಕ್ಕಳ ವಸತಿ ಶಾಲೆಗಳಿಗೆ ಭೇಟಿ ನೀಡಿ ಹೆಣ್ಣು ಮಕ್ಕಳ ಸ್ಯಾನಿಟರಿ ಪ್ಯಾಡ್ ವೆಡ್ಡಿಂಗ್ ಮಷೀನ್ ಮತ್ತು ಅವುಗಳ ಬನಿರ್ಂಗ್ ಮಷೀನ್ ಅನ್ನು ನೀಡುವ ಉದ್ದೇಶ ನಮ್ಮದಾಗಿದೆ ಎಂದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ರಾಜಶೇಖರ ವಾರದ, ಖಜಾಂಚಿ ಮಲ್ಲಿಕಾಜರ್ುನ ಜಿರಲಿ, ಅಶೋಕ ಜನಗೊಂಡ ನಿದರ್ೇಶಕ, ರುದ್ರಯ ಕರಡಿ, ಚಿದಾನಂದ ಸಿದ್ದಾಪುರಮಠ ಅನೇಕರು ಇದ್ದರು.