24 ರಿಂದ ಇಂಡಿ ಹುಸೇನ್ ಬಾಷಾ ದರ್ಗಾ ಜಾತ್ರೆ
Indi Hussain Basha Dargah Fair from 24th
ಲೋಕದರ್ಶನ ವರದಿ
ಇಂಡಿ 19 : ಹಿಂದೂ ಮುಸ್ಲಿಂರ ಭಾವೈಕ್ಯತೆಯ ಸಂಕೇತಿಕ ದೇವರಾದ ನಗರದ ಪ್ರಸಿದ್ಧ ಹುಸೇನ್ ಭಾಷಾ ದರ್ಗಾ ಜಾತ್ರೆಯು ಇದೆ ದಿನಾಂಕ 24-06-2026 ರಿಂದ 25-06-2026 ರವರಿಗೆ ಬಹಳ ವಿಜೃಂಭಣೆಯಿಂದ ಜರುಗಲಿದೆ. 24-06-2026 ಬುಧವಾರದಂದು ಆಟವಿ ಖತಾಲ್ ಇರುತ್ತದೆ 25-06-2026 ಗುರುವಾರ ದಂದು ನಸುಕಿನ ಜಾವ 4-00 ಗಂಟೆಗೆ ದರ್ಗಾದ ಧರ್ಮದರ್ಶಿಗಳು ಮತ್ತು ಊರಿನ ಗೌಡರಾದ ದಾದಾಗೌಡ ಬಾಬಾಗೌಡ ಪಾಟೀಲ್ ಅವರ ಮನೆತನದವರಿಂದ ದೇವರಿಗೆ ಗಂಧ ಗಲೀಪು ಮತ್ತು ಹೂವುಗಳನ್ನು ಅರ್ಿಸಿ ದೇವರುಗಳನ್ನು ಎಬ್ಬಿಸುತ್ತಾರೆ. ನಂತರ ದೇವರು ಹಳ್ಳದ ಓಣಿಯಿಂದ ಮಹಾವೀರ ಸರ್ಕಲ್, ಬಜಾರ್ ಓಣಿಯ ಮೂಲಕ ವಾದ್ಯ ವೈಭವದೊಂದಿಗೆ ಮೂಲ ಸ್ಥಾನ ದರ್ಗಾಕ್ಕೆ ಬಂದು ಕೂಡುತ್ತದೆ ಎಂದು ಧರ್ಮದರ್ಶಿ ಮನೆತನದ ಹಿರಿಯರಾದ ಭೀಮನಗೌಡ ಪಾಟೀಲ್ ಹಾಗೂ ಪ್ರಭುಗೌಡ ಪಾಟೀಲ್ ಜಂಟಿಯಾಗಿ ತಿಳಿಸಿದರು... ಈ ಸಂದರ್ಭದಲ್ಲಿ ಶ್ರೀಶೈಲ್ ಗೌಡ ಪಾಟೀಲ್ ಶರಣಗೌಡ ಪಾಟೀಲ್ ತುಕಾರಾಮ ವಾಲಿಕಾರ್ ಬಾಪುಗೌಡ್ ಪಾಟೀಲ್ ಆದಿಲ್ ಮಕಾಂದಾರ ಹುಮಾಯೂನ್ ಮಕಾಂದಾರ ರಫೀಕ್ ಮಕಾಂದಾರ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 