ಧಾರವಾಡ - ಹುಬ್ಬಳ್ಳಿ

ಪೀಠಿಕೆಯಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಹಿತರಕ್ಷಣೆ ಆಗುತ್ತದೆ: ಜಲ್ಲಾಧಿಕಾರಿ ದಿವ್ಯ ಪ್ರಭು

ಪೀಠಿಕೆಯಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಹಿತರಕ್ಷಣೆ ಆಗುತ್ತದೆ: ಜಲ್ಲಾಧಿಕಾರಿ ದಿವ್ಯ ಪ್ರಭು
If the values ​​in the preamble are adopted in life, the welfare of the individual, society and the

ಪೀಠಿಕೆಯಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಹಿತರಕ್ಷಣೆ ಆಗುತ್ತದೆ: ಜಲ್ಲಾಧಿಕಾರಿ ದಿವ್ಯ ಪ್ರಭು. 

ಧಾರವಾಡ 26 : ಭಾರತ ಸಂವಿಧಾನವನ್ನು ಶ್ರೇಷ್ಠವಾಗಿದ್ದು, ವ್ಯಕ್ತಿ ಹಿತದೊಂದಿಗೆ ಸಮಾಜದ ಸೌಖ್ಯವನ್ನು ಬಯಸುತ್ತದೆ. ಸಂವಿಧಾನ ಪೀಠಿಕೆಯಲ್ಲಿ ಅಳವಡಿಸಿರುವ ಸಹೋದರತ್ವ, ಭಾತೃತ್ವ, ಭಾವೈಕ್ಯತೆ, ವ್ಯಕ್ತಿಗೌರವ, ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಹಿತರಕ್ಷಣೆ ಹಾಗೂ ಅಭಿವೃದ್ಧಿ ಆಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರಧ್ವಜಾರೋಹಣ ನೇರವೆರಿಸಿ, ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದರು.  

ಸಂವಿಧಾನದ ಆಶಯಗಳನ್ನು ನಾವು ಅರ್ಥೈಯಿಸಿಕೊಂಡು ನಮ್ಮ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳು ಸರ್ವರ ಹಿತ ಮತ್ತು ಅಭಿವೃದ್ಧಿಗೆ ಸಂವಿಧಾನದ ನಿಯಮಗಳಡಿ ಇಂದಿನ ಸರ್ಕಾರಗಳು ರೂಪಿಸುವ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಪ್ರಭಾವ ಅಥವಾ ಒತ್ತಡಗಳಿಗೆ ಒಳಗಾಗಿ ಕರ್ತವ್ಯದಲ್ಲಿ ಲೋಪಗಳು, ಚುತಿಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರು ತಮಗೆ ವಹಿಸಿದ ಕಾರ್ಯಗಳನ್ನು ನಿಯಮಾನುಸಾರ ಮತ್ತು ಸಂತೋಷದಿಂದ ಮಾಡುವಂತಹ ವಾತಾವರಣವನ್ನು ನಮ್ಮ ಸಂವಿಧಾನ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.  

ಗಣರಾಜ್ಯೋತ್ಸವು ಭಾರತೀಯರ ರಾಷ್ಟ್ರೀಯ ಹಬ್ಬವಾಗಿದೆ. ಪ್ರತಿಯೊಬ್ಬ ಪ್ರಜೆಗೆ ಅಧಿಕಾರ ನೀಡಿದ ಮತ್ತು ತಾನು ಬಯಸಿದ ಜನಪ್ರತಿನಿಧಿ, ಸರ್ಕಾರ, ವ್ಯವಸ್ಥೆಗಳನ್ನು ಹೊಂದಲು ಮುಕ್ತ ಚುನಾವಣೆ, ಮತದಾನದಂತಹ ಅವಕಾಶಗಳನ್ನು ನೀಡಿದೆ. ಪರಸ್ಪರರು ತಮ್ಮ ಕರ್ತವ್ಯಗಳನ್ನು ಅರ್ಥೈಯಿಸಿಕೊಂಡು, ಅನ್ಯೊನ್ಯತೆಯಿಂದ ಬದುಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರು ವ್ಯಕ್ತಿಗೌರವ ಕಾಪಡಬೇಕು. ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಬೆಳಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿ ವ್ಯವಸ್ಥಾಪಕ ಶಿವಶಂಕರ ಹಿರೇಮಠ, ಶಿರಸ್ತೆದಾರರಾದ ಶಿವಕುಮಾರ ಮೇಟಿ, ಮಲ್ಲಿಕಾರ್ಜುನ ಸೊಲಗಿ, ಮಂಜುನಾಥ ಗೂಳಪ್ಪನವರ, ಕೆ. ಶ್ರೀಧರ, ಸಹಾಯಕ ನಿರ್ದೇಶಕ ರಾಜಶೇಕ ಕಂಟೆಪ್ಪಗೌಡರ, ಜಗದೇವಿ ಪಾಟೀಲ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ, ಆಹಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

(ಫೋಟೊ ಇವೆ) 


ಸುದ್ದಿ ಓದಿ