ಹಿರಿಯ ಚೇತನರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ31: ಸರಕಾರಿ ಸೇವೆಯಲ್ಲಿ ಬಹಳಷ್ಟು ಏರುಪೇರು ಕಂಡಿದ್ದು. ಜೀವನದ ಉದ್ದಕ್ಕೂ ಏರು ಪೇರು ಎದುರಿಸಿಕೊಂಡ ಮೇಲಾಧಿಕಾರಿ ಸಹಾಯ ಸಹಕಾರದಿಂದ ಸೇವೆಯನ್ನು ಸಲ್ಲಿಸಿ ಅನುಭಾವಿಗಳ ಜ್ಞಾನಿಗಳನ್ನು ಹೊಂದಿದ ನಿವೃತ ನೌಕರರು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ತಾಲೂಕಾ ನಿವೃತ್ತ ನೌಕರರ ಸಂಘಟನೆಯ ಸಹಯೋಗದಲ್ಲಿ 36 ನೇಯ ವಾರ್ಷಿಕ ಸಭೆ ಮತ್ತು 70 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಣದಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ ಆದರೆ ಸಂಘಟನೆಯಿಂದ ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡಬೇಕಾಗುತ್ತದೆ. ನನ್ನನು ಜಮಖಂಡಿ ಮತಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿಕೊದ್ದಿರಿ. ನಿಮ್ಮ ಸೇವೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸರಕಾರಿ ಸೇವೆ ಸಲಿಸುವ ಸಮಯದಲ್ಲಿನ ಹುಮ್ಮಸ್ಸು. ನಿವೃತ್ತ ಹೊಂದಿದ ನಂತರ ಹುಮ್ಮಸ್ಸು ಕಡಿಮೆಯಾಗುತ್ತದೆ. ಅದು ಆಗಬಾರದು ಎಂದರು.
ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಮಾತನಾಡಿದರು. ಏಳು ಕೋಟಿ ಜನರಲ್ಲಿ ಏಳು ಲಕ್ಷ ಜನರಿಗೆ ಮಾತ್ರ ಸರಕಾರ ನೌಕರರಿಗೆ ಸೌಲಭ್ಯ ದೊರೆಗಿರುತ್ತದೆ. ಇಂತಹ ಸೌಭಾಗ್ಯ ಸರಕಾರಿ ನೌಕರರಿಗೆ ಮಾತ್ರ ದೊರೆಯುತ್ತದೆ. ನಿವೃತ್ತ ಹೊಂದುವ ಸೇವೆವರೆಗೆ ನಗು.ನಗುತ ಸೇವೆ ಸಲಿಸಬೇಕು. ಸರಕಾರಿ ನೌಕರರು ಬಹಳ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿವೃತ್ತ ಹೊಂದಿದರು ಸಹ ನಗುಮುಖದಿಂದ ಇರಬೇಕು. ಇಂತಹ ಕಾರ್ಯಕ್ರಮದಿಂದ ಎಲ್ಲರೂ ಒಂದಾಗಿ ಕೂಡಿ ಒಳ್ಳೆಯ ಸಮಾಜ ಕಟ್ಟು ಕೆಲಸ ಮಾಡಬೇಕಾಗಿದೆ.ೆಲ್ಲರ ಬದುಕು ಹಸನಾಗಿರಬೇಕು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ನಿವೃತ್ತ ಹೊಂದಿವರು ಎಲ್ಲರೂ ಪ್ರಾಮಾಣಿಕ ಸೇವೆ ಸಲಿಸಿ. ಇವಾಗ ಇಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದರ್ಶನ ನೀಡುವಂತವರಾಗಬೇಕು ಎಂದರು.
ಸಂಗಮೇಶ ನಿರಾಣಿ ಮಾತನಾಡಿ, ಅರವತ್ತು ವಯಸ್ಸಿಗೆ ಅರಳು ಮರಳು ಅಂತಾರೆ. ಆದರೆ ಇವಾಗ ಎಲ್ಲರೂ ಎಲ್ಲರ ಮುಖ ಅರಳಿರುವುದು ಎಂಬ ಭಾವನೆ ಮೂಡಿದೆ. ನಿವೃತ್ತ ನೌಕರರ ಸಂಘಟನೆಯು ನಿರಾಣಿ ಮನೆತನಕ್ಕೂ ಅವಿನಾಭ ಸಂಬಂಧ ಹೊಂದಿದೆ. ಈ ಸಂಘಟನೆಯು ಒಂದು ಒಳ್ಳೆಯ ಮಾದರಿ ಸಂಘಟನೆಯಾಗಿದೆ. ದೇವರ ಶಕ್ತಿ ಹೊಂದಿದ ಸ್ಥಳ ಜಮಖಂಡಿಯಾಗಿದೆ. ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳ ಸ್ಥಳವಾಗಿದೆ. ಇಂದಿನ ಹಿರಿಯರ ಮಾರ್ಗದರ್ಶನ ಬಹಳ ಮುಕ್ಯವಾಗಿದೆ ಎಂದರು.
ಅಮರೇಶ ಮಡಿವಾಳರ ಉಪನ್ಯಾಸ ನೀಡಿದರು, ದಿವ್ಯ ಸಾನಿಧ್ಯ ವಹಿಸಿದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ನಿವೃತ್ತ ಹೊಂದಿದ ನೌಕರರಿಗೆ ಸನ್ಮಾನಿಸಲಾಯಿತು, ರುದ್ರಗೌಡ ಪಾಟೀಲ ಅವರ ರಚಿಸಿದ ಸೃಷ್ಟಿಕರ್ತ ಗುಡಸಾಬ ನದಾಫರ ಗೀತಗಳ ಪುಸ್ತಕ ಬಿಡುಗಡೆ ಮಾಡಲಾಯಿತು.
ನೌಕರರ ಸಂಘದ ಅಧ್ಯಕ್ಷ ಎಚ್.ಎಂ.ಶೆಟ್ಟರ, ಪಿ.ಎನ್.ಪಾಟೀಲ, ಎಸ್.ಪಿ.ಬಿರಾದರ, ಬಿ.ವಿ.ಗೋವಿಂದಪ್ಪ, ಯು.ಕೆ.ಗಸ್ತಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪ್ಪಸ್ಥಿತರಿದರು. ರಮೇಶ ಎನ್.ಮಡಿವಾಳರ ನಿರೂಪಿಸಿದರು, ಸಂಗಮೇಶ ಗಾಣಿಗೇರ ಸ್ವಾಗತಿಸಿದರು,