ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ
ಲೋಕದರ್ಶನ ವರದಿ,
ಜಮಖಂಡಿ 15: ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132 ನೇ ಜಯಂತ್ಯೋತ್ಸವನ್ನು ಅತೀ ಸರತೆಯಿಂದ ಆಚರಿಸಲಾಯಿತು.
ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಶಾಸಕ ಆನಂದ ನ್ಯಾಮಗೌಡ ಅವರು ಮಾಲಾರ್ಪಣೆ ಮಾಡಿ, ಪೂಜೆಯನ್ನು ಸಲ್ಲಿಸಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ. ದೇಶಕ್ಕೆ ಸಂವಿಧಾನವನ್ನು ನೀಡಿದ ಮಾಹಾನ ನಾಯಕರು. ಅವರ ಇಡೀ ಜೀವನವನ್ನು ನಾವುಗಳು ತಿಳಿದುಕೊಂಡರೆ ಮಾತ್ರ ನಾವುಗಳು ಹೇಗೆ ಜೀವದಲ್ಲಿ ಬದುಕಬೇಕು ಎಂಬುವದು ಅರ್ಥವಾಗುತ್ತದೆ. ಡಾ. ಬಾಬಾ ಸಾಹೇಬರು ದೊಡ್ಡ ಸಾಧನೆಯನ್ನು ಮಾಡಿ. ಇಡೀ ದೇಶದಲ್ಲಿ 135 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶಕ್ಕೆ. ಎಲ್ಲರೂ ಕೂಡಾ ಒಂದಾಗುವ ಸಂವಿಧಾನವನ್ನು ಕೊಟ್ಟದ್ದು ನಮ್ಮಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅವರ ಆದರ್ಶಗಳ ಮಾರ್ಗದರ್ಶನಗಳನ್ನು ಮುಂದೆ ಇಟ್ಟುಕೊಂಡು ನಾವುಗಳು ನಡೆದುಕೊಳ್ಳಬೇಕಾಗಿದೆ ಎಂದರು.
ತಾಲೂಕಾಡಳಿತ ಅಧಿಕಾರಿಗಳ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪೂಜೆಯನ್ನು ಸಲಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.