ಗೊಲ್ಲರ ಸಂಘದ ಸಾಮಾನ್ಯ ವಾಷರ್ಿಕ ಸಭೆ ಕಾರ್ಯಕ್ರಮ

ಗೊಲ್ಲರ ಸಂಘದ ಸಾಮಾನ್ಯ ವಾಷರ್ಿಕ ಸಭೆ ಕಾರ್ಯಕ್ರಮ

ಬಳ್ಳಾರಿ 25: ಇಂದು ನಡೆದ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಸಾಮಾನ್ಯ ವಾಷರ್ಿಕ ಸಭೆಯು ಅಧ್ಯಕ್ಷರಾದ ಪಿ.ತಿಮ್ಮಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದಶರ್ಿ ಕೆ.ಇ.ಚಿದಾನಂದಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಚಂದ್ರಾಯಿ ದೊಡ್ಡಬಸಪ್ಪ, ಉಪಾಧ್ಯಕ್ಷರಾದ ಆಶಾಲತಾ ಮತ್ತು ಸೋಮಪ್ಪ ಯಾದವ್ ಖಜಾಂಚಿ ಗೋವಿಂದರಾಜುಲು, ಉಪಕಾರ್ಯದಶರ್ಿ ಕೃಷ್ಣಮೂತರ್ಿ, ಕಾರ್ಯದಶರ್ಿ ಸಮಿತಿ ಸದಸ್ಯರಾದ ಡಾ. ಧನಂಜಯ, ರಂಗಪ್ಪ, ಜೆ.ಜೆ.ತಿಮ್ಮಣ್ಣ, ವೆಂಕಟೇಶ ಯಾಧವ್, ಕ್ರಿಷ್ಣ, ಬಸವರೆಡ್ಡಿ, ಸೋಮರೆಡ್ಡಿ, ಸುಂಕಪ್ಪ, ಹನುಮಯ್ಯ, ಶಾಂತಕುಮಾರ್, ಶಶಿಕಲಾ, ಬಿ.ಗೋಪಾಲ, ಸೆರೆಗಾರು ಗೋಪಾಲ್, ಕೋಟೆಪ್ಪ, ಕಾಟಣ್ಣನವರು ಮತ್ತು ಭಾನು ದಾಸ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕು ಹಚ್ಚೊಳ್ಳಿ ಗ್ರಾಮ ಫಂಚಾಯಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸಿದ್ದಲಿಂಗಪ್ಪ ಯಾದವ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಮಾಜದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಉದ್ದೇಶಗಳನ್ನು ವಿವರಿಸಿದರು. ಸಂಘದ ಸದಸ್ಯರಾಗಿರುವ ಎಲ್ಲರಿಗೂ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ್ದ ಸಂಘದ ಸದಸ್ಯರು ಹಾಜರಿದ್ದರು.



ಸುದ್ದಿ ಓದಿ