ಸೀತಾರಾಮ ಆಶ್ರಮದಲ್ಲಿ ಗಾಯತ್ರಿದೇವಿ ಅಲಂಕಾರ

ಸೀತಾರಾಮ ಆಶ್ರಮದಲ್ಲಿ ಗಾಯತ್ರಿದೇವಿ ಅಲಂಕಾರ

ಲೋಕದರ್ಶನ ವರದಿ

ಬಳ್ಳಾರಿ.ಅ.14: ನಗರದಲ್ಲಿರುವ, ಸಿರುಗುಪ್ಪರೋಡ್ ಅವ್ವಂಬಾವಿ ಕಾಲುವೆ ಹತ್ತಿರ ಇರುವ ಗುರುಶಾಂತಪ್ಪ ಲೇಔಟ್ ನಲ್ಲಿಯ ಸೀತಾರಾಮ ಆಶ್ರಮದಲ್ಲಿ ದಸರಾ ಹಬ್ಬದ ಐದನೇ ದಿನದ ಪ್ರಯುಕ್ತ ಭಾನುವಾರದಂದು ಗಾಯತ್ರಿದೇವಿಯ ಅಲಂಕಾರವನ್ನು ಮಾಡಿದ್ದರು. ಮಹಾಲಕ್ಷ್ಮೀ, ಮಹಾಕಾಳೀ, ಮಹಾಸರಸ್ವತಿ, ಪೂಜೆಗಳನ್ನು ಸಹ ನೇರವೇರಿಸಿದರು.

  ನವಗ್ರಹ ಪೂಜೆಗಳು, ರುದ್ರಾಭಿಷೇಕಗಳು, ಕುಂಕುಮಾರ್ಚನೆಗಳು, ಇತ್ಯಾದಿ ಕಾರ್ಯಕ್ರಮಗಳು ವಿಧಿವಿಧಾನಗಳಿಂದ ನಡೆದಿದ್ದವು. ಭಕ್ತಾದಿಗಳು ಅಮ್ಮನವರ ಅಲಂಕಾರಗಳನ್ನು ಕಂಡು ಭಕ್ತಿಶ್ರದ್ಧೆಯಿಂದ ಪೂಜೆಗಳನ್ನು ಮಾಡಿದರು.             ಈ ಕಾರ್ಯಕ್ರಮಗಳೆಲ್ಲವೂ ಚತುವರ್ೇದ ಪಂಡಿತರು, ಪ್ರಖ್ಯಾತ ವಾಸ್ತು ಜ್ಯೋತಿಷ್ಯ ಪಂಡಿತರು ಮತ್ತು ಸೀತಾರಾಮ ಆಶ್ರಮಮ್ನ ಅಧ್ಯಕ್ಷರು ಆದ ಶ್ರೀ ನೇತಿ ಸೀತಾರಾಮಯ್ಯ ಶರ್ಮ ಸಿದ್ಧಾಂತಿಯವರ ನೇತೃತ್ವದಲ್ಲಿ ನಡೆದಿವೆ. ಹೀಗೆಯೇ ಅ.19ರವರೆಗೆ ದಿನಕ್ಕೊಂದು ಅಲಂಕಾರ ಮತ್ತು ವಿಶೇಷ ಕಾರ್ಯಕ್ರಮಗಳು ನಡೆಯುತ್ತಾ ಇರುತ್ತವೆ ಎಂದು ನೇತಿ ಸೀತಾರಾಮಯ್ಯ ಶರ್ಮ ಸಿದ್ಧಾಂತಿಯವರು ತಿಳಿಸಿದರು.

ಸುದ್ದಿ ಓದಿ