ರುದ್ರ ಟ್ರಸ್ಟ್ನಿಂದ ಉಚಿತವಾಗಿ ಅನ್ನದಾಸೋಹ ಕಾರ್ಯಕ್ರಮ
ಲೋಕದರ್ಶನ ವರದಿ
ಬಳ್ಳಾರಿ19: ಸ್ಥಳೀಯ ನೆಹರು ಕಾಲೋನಿಯಲ್ಲಿ ರುದ್ರಟ್ರಸ್ಟ್ವತಿಯಿಂದ ಭಾನುವಾರಂದು ಬೆಳಿಗ್ಗೆ 11 ಗಂಟೆಗೆ ಸ್ಲಂ ಮಕ್ಕಳು ಹಾಘೂ ಅಂಧ, ಅಂಗವಿಕಲರಿಗೆ ಉಚಿತವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುದ್ರಟ್ರಸ್ಟ್ ಗುರುಗಳಾದ ರವಿಶಂಕರ ಗುರೂಜಿಯವರು, ಮಾತನಾಡುತ್ತ, `ಹಸಿವು ಮುಕ್ತ' ರಾಜ್ಯವನ್ನು ಮಾಡಲು ಮಾನವರಿಂದ ಸಾಧ್ಯ ಇದೆ. ಮನುಷ್ಯ ಇತರರೊಡನೆ ಮಾನವೀಯ, ಅನುಕಂಪಗಳು, ಸಹಾನುಭೂತಿಯನ್ನು ತೋರಿಸುವ ಮೂಲಕ ಆಶಕ್ತ, ದುರ್ಬಲರಿಗೆ ಸಹಾಯ ಮಾಡುವ ಮೂಲಕ ಅವರಿಗ ದಾರಿಯಾಗಬೇಕು ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರುದ್ರಟ್ರಸ್ಟ್ ಹಾಗೂ ಸ್ವಯಂ ಸೇವಕರಾದ ಮಂಜುನಾಥ, ರಾಜು, ಮೋಹನ್ಗೌಡ, ಅನಿಲ್, ಸುರೇಶ್, ಪ್ರಿಯಾಂಕ, ಕಾತರ್ಿಕ್, ನರಸಿಂಹನಾಯಕ ಇತರರು ಹಾಜರಿದ್ದರು.
ಟ್ರಸ್ಟ್ವತಿಯಿಂದ ಮುಂಬರುವ ದಿನಗಳಲ್ಲಿ ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗೆ, ಯುವಕರಿಗೆ, ಜಾಗೃತ, ಧ್ಯಾನ, ಯೋಗ ಮುಂತಾದ ಶಿಬಿರಗಳನ್ನು ಆಯೋಜಿಸುವ ಮೂಲಕ ನಾವು ಜನರ ಬಳಿಗೆ ಸೇವೆಯನ್ನು ಮಾಡಲಿದ್ದೇವೆ ಎಂದು ರುದ್ರಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದ್ದಾರೆ.