ಉಚಿತ ವೃತ್ತಿ ತರಬೇತಿ ಉದ್ಘಾಟನಾ ಕಾರ್ಯಕ್ರಮ

ಉಚಿತ ವೃತ್ತಿ ತರಬೇತಿ ಉದ್ಘಾಟನಾ ಕಾರ್ಯಕ್ರಮ

ಬಳ್ಳಾರಿ 04: ನಗರದ ಇನಫ್ಯಾಂಟ್ರಿ ರಸ್ತೆಯ ಬಿ.ಡಿ.ಡಿ.ಎಸ್ ಸಂಸ್ಥೆಯಲ್ಲಿ ಸ್ನೇಹ ಸಂಸ್ಥೆವತಿಯಿಂದ ವಿಶ್ವ ವಿಶೇಷ ಚೇತನರ ದಿನದ ಪ್ರಯುಕ್ತ ಯುವಕ ಯುವತಿಯರಿಗೆ ಚಾಲನ ತರಬೇತಿ ಮತ್ತು ಕಂಪ್ಯೂಟರ್ ಶಿಕ್ಷಣದ ಉಚಿತ ತರಬೇತಿಯನ್ನು ಹಮ್ಮಕಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹಂದ್ರಾಳ್ ರವರು ಮಾತನಾಡಿ, ಯುವಕ ಯುವತಿಯರು ಸಾಮಾನ್ಯ ಶಿಕ್ಷಣದ ಜೊತೆಗೆ ತಾಂತ್ರಿಕ ನಿಪುಣತೆಯ ಶಿಕ್ಷಣವನ್ನು ಪಡೆದು ಉದ್ಯೋಗಸ್ಥರಾಗಬೇಕು, ಸಕರ್ಾರಿ ನೌಕರಿಯನ್ನೇ ನಂಬಿಕೊಂಡು ಇರಬಾರದು ತಾಂತ್ರಿಕ ಶಿಕ್ಷಣವನ್ನು ಪಡೆದುಕೊಂಡಲ್ಲಿ ಖಾಸಗಿ ರಂಗದಲ್ಲಿ ಹಲವಾರು ಪ್ರತಿಷ್ಟಿತ ಉದ್ಯೋಗ ಅವಕಾಶಗಳು ತೆರೆದಿರುತ್ತವೆ. ಎಂದರು. ಸ್ನೇಹ ಸಂಸ್ಥೆಯ ಯೋಜನಾ ನಿದರ್ೇಶಕರಾದ ಟಿ.ರಾಮಾಂಜಿನೇಯ ನವರು ಮಾತನಾಡಿ, ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ, ಕುರುಗೋಡು ಮತ್ತು ಬಳ್ಳಾರಿ ಸೇರಿದಂತೆ ಸುಮಾರು 750 ಜನ ಯುವಕ ಯುವತಿಯರಿಗೆ ಉದ್ಯೋಗ ಲಭ್ಯತೆಯ ತಾಂತ್ರಿಕ ಶಿಕ್ಷಣವನ್ನು ಸಂಸ್ಥೆವತಿಯಿಂದ ನೀಡಲಾಗಿದೆ. ನಮ್ಮ ಸಂಸ್ಥೆ ಸುಮಾರು 25 ವರ್ಷಗಳ ಹಿಂದೆ ಪ್ರಾರಂಭವಾಗಿ ಇಲ್ಲಿಯವರೆಗೆ ಅನೇಕ ಜನಪರ ಮತ್ತು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ವಿ ವಲ್ಡರ್್ ಯೋಜನಾ ಸಹ ನಿದರ್ೇಶಕರಾದ ಕೀತರ್ಿರಾಜ್, ಬಿ.ಡಿ.ಡಿ.ಎಸ್ ಸಂಸ್ಥೆಯ ನಿದರ್ೇಶಕರಾದ ಜಾನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಂಕಲಯ್ಯ, ಸ್ನೇಹ ಸಂಸ್ಥೆಯ ಕೋ ಆಡರ್ಿನೇಟರ್ ಪ್ರತಿಭಾ, ಸುಕನ್ಯಾ ಇನ್ನೂ ಮುಂತಾದವರು ಸೇರಿದಂತೆ ನೂರಾರು ಯುವಕ ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸದ್ದರು. 

ಸುದ್ದಿ ಓದಿ