ಜಮಖಂಡಿ

ಪ್ಲಾಸ್ಟಿಕ್ ಬಳಕೆ ಬದಲು ಪೇಪರ ಬಳಕೆ ಕಾರ್ಯಕ್ರಮಕ್ಕೆ ಮಾಜಿ ಸದಸ್ಯ ಅಪರಂಜಿ ಚಾಲನೆ

ಪ್ಲಾಸ್ಟಿಕ್ ಬಳಕೆ ಬದಲು ಪೇಪರ ಬಳಕೆ ಕಾರ್ಯಕ್ರಮಕ್ಕೆ ಮಾಜಿ ಸದಸ್ಯ ಅಪರಂಜಿ ಚಾಲನೆ

ಲೋಕದರ್ಶನ ವರದಿ,

ಜಮಖಂಡಿ: : ಭಾರತದೇಶ ಸ್ವತಂತ್ರಗೊಂಡ ದಿನದಲ್ಲಿ ಶೇ.33ರಷ್ಟಿದ್ದ ಅರಣ್ಯಪ್ರದೇಶ ಇಂದು ಶೇ.16ರಷ್ಟು ತಲುಪಿದ ಹಿನ್ನಲೆಯಲ್ಲಿ ಜಾಗತಿಕ ತಾಪಮಾನದಲ್ಲಿ ಅಸಮತೋಲನ ಸೃಷ್ಟಿಯಾಗುತ್ತಿದೆ ಎಂದು ಸಂಸ್ಥೆ ಕಾರ್ಯದರ್ಶಿ, ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಅಪರಂಜಿ ಹೇಳಿದರು.

ನಗರದ ಹುಲ್ಯಾಳ ಕ್ರಾಸ ಬಳಿವಿರುವ ವಿದ್ಯಾಭವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಪರಿಸರ ದಿನಾಚಣೆ ನಿಮಿತ್ತ ಪ್ರಕೃತಿ ನಮ್ಮ ಮಗುವಿಗೊಂಡು ಮರ ನಮ್ಮದು ಮತ್ತು ಪ್ಲಾಸ್ಟಿಕ್ ಬಳಕೆ ಬದಲು ಪೇಪರ ಬಳಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ರಕ್ಷಣೆ ನಮ್ಮ ಕರ್ತವ್ಯವಾದರೇ ಮಾತ್ರ ಜಗತ್ತಿನಲ್ಲಿ ಪ್ರಾಣಿ, ಪಕ್ಷಿ, ಮನುಷ್ಯರು ಉತ್ತಮ ವಾತಾವರಣದಲ್ಲಿ ಬದಕಲು ಸಾಧ್ಯ. ಮನುಷ್ಯನ ದುರಾಸೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ದೇಶದಲ್ಲಿರುವ ಅಪಾರ ಅರಣ್ಯ ಸಂಪತ್ತು ಕಡಿಮೆಯಾಗಿ ಋತು, ವಸಂತಗಳಲ್ಲಿ ಬದಲಾವಣೆಗೊಂಡು ಬೇಸಿಗೆಯಲ್ಲಿ ಅನಾವೃಷ್ಠಿ, ಮಳೆಗಾಲದಲ್ಲಿ ಅತಿವೃಷ್ಟಿ ಸಹಿತ ಚಳಿಗಾಲದಲ್ಲಿ ಅತಿಯಾದ ಚಳಿಯಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯ ಅರಣ್ಯ ಸಂಪತ್ತು ರಕ್ಷಣೆ ಮಾಡದಿದ್ದಲ್ಲಿ ನಾವೆಲ್ಲರೂ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ವಿಶ್ವದ ಪ್ರತಿಯೊಬ್ಬರು ಮನೆಗೊಂದು ಮರ, ಪ್ರತಿ ಮಗುವಿಗೊಂದು ಮರ ನೆಟ್ಟಲ್ಲಿ ವಿಶ್ವದಲ್ಲಿ ಅರಣ್ಯ ಸಂಪತ್ತು ಹೆಚ್ಚಾಗುವ ಮೂಲಕ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.

ಸಂಸ್ಥೆ ಅಧ್ಯಕ್ಷ ಪ್ರಸಾದ ಆಪ್ಟೆ ಮಾತನಾಡಿದರು, ಪ್ರಾಚಾರ್ಯ ಅನು ಮುಲ್ಲಾ, ಆಪ್ತಸಮಾಲೋಚಕಿ ರಜನಿ ಬಿರಾದಾರ, ದೈಹಿಕ ಶಿಕ್ಷಕ ಬಸವರಾಜ ಬಿಳ್ಳೂರ, ಅನೀಲ ನಾಗರದಿನ್ನಿ, ಅಶ್ವಿನಿ ದೇಸಾಯಿ, ಆರ್.ಎಂ.ಅತ್ತಾರ, ಸವಿತಾ ವೆಲೆಪುಕರ, ಶಾಲಿನಿ ಹಿರೇಮಠ, ಸುಜಾತಾ ಹಿರೇಮಠ, ವೀನಾ ಮಲಾಬದಿ, ರೇಷ್ಮಾ ಪಠಾಣ, ಮಮತಾಜ ಬಾಗವಾನ, ಲಕ್ಷ್ಮೀ ಶಿವಣಗಿ, ಐಶ್ವಯರ್ಾ ಸಿಂಗದ, ಸಂಜಯ ಮುತಾಲಿಕದೇಸಾಯಿ, ಬಲ್ಲೇಶ ಮನಗೂಳಿ, ಅಜಯ ದಿಕ್ಷೀತ, ಆಶಾ ಗಸ್ತಿ, ಎಸ್.ಶಿವಕುಮಾರ, ಎ.ಎಸ್.ಅಶೋಕ ಸೇರಿದಂತೆ ಸಹಶಿಕ್ಷಕರು ಇದ್ದರು.

ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವಿದ್ಯಾಭವನ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಮುದ್ದು ವಿದ್ಯಾರ್ಥಿಗಳ ನೆನಪಿಗಾಗಿ 50ಕ್ಕೂ ವಿವಿಧ ರೀತಿಯ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.



ಸುದ್ದಿ ಓದಿ