ಮಾಜಿ ಶಾಸಕ ಎಂ.ಪಿ.ರವೀಂದ್ರ ವಿಧಿವಶ ಇಂದು ಹೂವಿನಹಡಗಲಿಯಲ್ಲಿ ಅಂತ್ಯಕ್ರಿಯೆ: ಸಂತಾಪ
ಲೋಕದರ್ಶನ ವರದಿ
ಹೂವಿನಹಡಗಲಿ 03: ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಶ್ ಅವರ ಏಕೈಕ ಪುತ್ರ , 2013ರಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ ಆಯ್ಕೆಯಾದ ರವೀಂದ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸಲು ಹಿಂದೇಟು ಹಾಕಿದ್ದರು.ಆದರೂ ಚುನಾವಣೆಯಲ್ಲಿ ಸ್ಪಧರ್ಿಸಿ ಸೋಲು ಕಂಡಿದ್ದರು.
ಈಚೆಗೆ ಹೊಸಪೇಟಿಯಲ್ಲಿ ಬಿಡಿಸಿಸಿ ಬ್ಯಾಂಕ್ನ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಈ ಬಾರಿ ಸಹ ಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.ಹೂವಿನಹಡಗಲಿಯಲ್ಲಿ ರಂಗಭಾರತಿ ಸಂಸ್ಥೆಯ ಮೂಲಕ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂನರ್ಿಮೆಂಟ್ ಸಂಘಟಿಸಿದ್ದರು.ಜತೆಗೆ ನಾಟಕಸ್ಪಧರ್ೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಣ್ಣರ ಮೇಳ, ಆರೋಗ್ಯ ಮೇಳ ಸೇರಿದಂತೆ ಹತ್ತುಹಲವಾರು ಕಾರ್ಯಕ್ರಮಗಳನ್ನು ಹಡಗಲಿ ಕ್ಷೇತ್ರದ ಜನರಿಗೆ ಮನೋರಂಜನೆ ನೀಡುತ್ತಿದ್ದರು.ರೈತರಿಗೆ ಬಿಡಿಸಿಸಿ ಬ್ಯಾಂಕ್, ತಮ್ಮದೇ ಆದ ಅರ್ಬನ್ ಬ್ಯಾಂಕ್ ಮೂಲಕ ರೈತರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದ್ದರು.ರವೀಂದ್ರ ಅವರ ಸಾವಿನ ಸುದ್ದಿ ಹರಪನಹಳ್ಳಿ, ಹೂವಿನಹಡಗಲಿ ಕ್ಷೇತ್ರದ ಅವರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಬೆಂಗಳೂರಿನಿ ಗಾಂಧಿಭವನ ಹತ್ತಿರ ವಲ್ಲಭ ನಿಕೇತನದಲ್ಲಿ ಶನಿವಾರ ಬೆಳಿಗ್ಗೆ 9-00 ಗಂಟೆಯಿಂದ 10-30 ಗಂಟೆವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಹರಪನಹಳ್ಳಿ ತೆರಳಿ ಮಧ್ಯಾಹ್ನ 3.00 ಗಂಟೆಯಿಂದ 6.00ಗಂಟೆವರೆಗೆ ಸ್ಥಳೀಯ ಎ.ಡಿ.ಬಿ.ಕಾಲೇಜು ಮೈದಾನದಲ್ಲಿ ಪಾಥರ್ೀವ ಶರೀರದ ಅಂತಿಮ ದರ್ಶನಕ್ಕೆ ಮಾಡಲಾಗಿದೆ. ಹೂವಿನಹಡಗಲಿಯಲ್ಲಿ ಭಾನುವಾರ ಬೆಳಿಗ್ಗೆ 11.00ಗಂಟೆವರೆಗೆ ಜಿಬಿಆರ್ ಕಾಲೇಜ್ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಪರಾಹ್ನ 12.00 ಗಂಟೆಗೆ ದಿ.ಎಂ.ಪಿ.ಪ್ರಕಾಶ್ ರವರ ಸಮಾಧಿ ಹತ್ತಿರ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ರುದ್ರಾಂಬ ಎಂ.ಪಿ.ಪ್ರಕಾಶ ಮತ್ತು ಕುಟುಂಬ ವರ್ಗ ತಿಳಿಸಿದೆ.
ಸಂತಾಪ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿ.ಎಂ.ಗಳಾದ ಸಿದ್ದರಾಮಯ್ಯ,ಜಗದೀಶ ಶೆಟ್ಟರ, ಯಡಿಯೂರಪ್ಪ ಸೇರಿದಂತೆ ಸಚಿವರು,ಶಾಸಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಂದ್ರನಾಯ್ಕ,ಸೊಪ್ಪಿನ ಬಾಳಪ್ಪ, ಪ್ರೊ. ಶಾಂತಮುತರ್ಿ ಕುಲಕಣರ್ಿ, ಐಗೋಳ ಚಿದಾನಂದ, ಅಟವಾಳಗಿ ಕೊಟ್ರೇಶ, ಕೆ.ಎಸ್.ಶಾಂತನಗೌಡ, ಮಲ್ಕಿಒಡೆಯರ್ ಮಲ್ಲಿಕಾಜರ್ುನ, ನಾಗಭೂಷಣ, ತಹಶೀಲ್ದಾರ ಕೆ.ರಾಘವೇಂದ್ರರಾವ್, ರಂಗಭಾರತಿ ಕಾರ್ಯದಶರ್ಿ, ದ್ವಾರಕೇಶ ರೆಡ್ಡಿ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಸ್ವಾಮೀಜಿ ಹರ-ಗುರು ಚರಮೂತರ್ಿಗಳು ಸೇರಿದಂತೆ ಜನಪ್ರತಿನಿಧಿಗಳು, ಅವರ ಅಭಿಮಾನಿ ಬಳಗವು ಅವರ ಸಾವು ಹಡಗಲಿ ಕ್ಷೇತ್ರದ ಜನತೆಗೆ ದು:ಖವನ್ನು ಉಂಟಾಮಾಡಿದೆ.