2 ಹಂಪಿ ಉತ್ಸವ ನಡೆಸುವಂತೆ ಒತ್ತಾಯ
ಬಳ್ಳಾರಿ 01: ಹಂಪಿ ಉತ್ಸವ ನಡೆಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸಾಹಿತಿಗಳು, ಕಲಾವಿದರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರದಲ್ಲಿ ತಿಳಿಸಿರುವಂತೆ ನಾಡಿನ ಹೆಮ್ಮೆಯ ಹಂಪಿ ಉತ್ಸವವನ್ನು ನಡೆಸಲು ಕಳೆದ ಆಗಷ್ಟ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಆದ್ದೂರಿಯಾಗಿ ನಡೆಸುವ ಬಗ್ಗೆ ಹೇಳಿ ಜಿಲ್ಲೆಯ ಕಲಾವಿದರ ಸಾಹಿತಿಗಳ ಸಲಹೆ ಪಡೆದಿದ್ದರು. ಆದರೆ ಬರಗಾಲ ಎಂಬ ನೆಪಮಾಡಿ ಈಗ ಉತ್ಸವ ರದ್ದು ಮಾಡಿರುವುದು ನಮಗೆ ನೋವುನ್ನು ಉಂಟುಮಾಡಿದೆ. ಎಲ್ಲಾ ಉತ್ಸವಗಳಂತೆ ಈ ಹಂಪಿ ಉತ್ಸವವು ಸಹ ಸರಳವಾಗಿಯೂ ಆದರು ನಡೆಸಬೇಕಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಪಾಲ್ಘೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಜನಪದ ಸಾಹಿತ್ಯ ಅಕಾಡಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ ಬಸವರಾಜ ನಾಡೋಜ ಪ್ರಶಸ್ತಿ ವಿಜೇತ ತೊಗಲುಗೊಂಬೆಯ ರೂವಾರಿ ಬೆಳಗಲ್ಲು ವೀರಣ್ಣ, ನಾಡೋಜ ಸುಭದ್ರಮ್ಮ ಮನ್ಸೂರು, ಅಭಿನಯ ಕಲಾಕೇಂದ್ರದ ಜಗದೀಶ, ಈ ಸಂದರ್ಭದಲ್ಲಿ ಮಾತನಾಡಿ ಹಂಪಿ ಉತ್ಸವ ನಡೆಸಲೇ ಬೇಕು. ಬೇರೆ ಜಿಲ್ಲೆಗಳ ಉತ್ಸವಗಳಿಗೆ ಆಸಕ್ತಿವಹಿಸುವ ನೀವು ಹಂಪಿ ಉತ್ಸವದ ಬಗ್ಗೆ ಏಕೆ ನಿರ್ಲಕ್ಷ? ಬರದ ನೆಪ ಬೇಡಿ ರದ್ದು ಮಾಡಿರುವುದು ಸರಿ ಅಲ್ಲ. ವಿಜಯನಗರ ಸಾಮ್ರಾಜ್ಯದ ಪ್ರತಿಕವಾದ ಹಂಪಿ ಉತ್ಸವ ಹಲವು ಕಾರಣಗಳಿಂದ ಹಲವು ಬಾರಿ ಆಚರಿಸದೇ ಇದೆ. ಇದು ಸರಿಯಾದ ಕ್ರಮವಲ್ಲ. ಬಯಲು ವಸ್ತು ಸಂಗ್ರಾಲಯದಂತಿರುವ ಹಂಪಿಯಲ್ಲಿ ಉತ್ಸವ ನಡೆಯುವ್ಯದರಿಂದ ಪ್ರವಾಸೋದ್ಯಮ ಅಭಿವೃದ್ದಿಯು ಆಗುತ್ತದೆ. ಸದಕ್ಕೆ ದುಂದುವೆಚ್ಚ ದುಬಾರಿ ಸಿನಿಮಾಕಲಾವಿದರನ್ನು ಬಿಟ್ಟು ಉತ್ಸವವನ್ನು ನಡೆಸಲೇ ಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ನೂರಾರು ಜನ ಸಾಹಿತಿಗಳು, ಕಲಾವಿದರು ಜೊತೆಗೆ ನಾಟಕ ಆಕಡಮಿ ಸದಸ್ಯೆ ಎನ್.ವರಲಕ್ಷ್ಮಿ, ರಮೇಶಗೌಡ ಪಾಟಿಲ್, ಆದೋನಿ ವೀನಾ, ರಮಣಪ್ಪ, ಪಿ.ಕೆ.ಗಂಗಾದರ ಪತ್ತಾರ, ರಜನೀಶ್ ಕುಲಕಣರ್ಿ, ಪಲ್ಲೆದ ನಾಗರಾಜ, ರಾಮಚಂದ್ರ, ವಿನೋದ, ಬಸವ, ಸೇರಿದಂತೆ ನೂರಾರು ಜನ ಕಲಾವಿದರ ಗುಂಪು ಇಂದು ಪತ್ರಿಭಟನೆ ನಡೆಸಿತು.