ಸೌಂದತ್ತಿ

ಪ್ರವಾಹ ನಿಯಂತ್ರಣ ತುರ್ತು ಸಭೆ

ಪ್ರವಾಹ ನಿಯಂತ್ರಣ ತುರ್ತು ಸಭೆ

ಲೋಕದರ್ಶನ ವರದಿ

ಸವದತ್ತಿ 21: ತಾಲೂಕಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ತಹಶೀಲ್ದಾರ ನೇತೃತ್ವದಲ್ಲಿ ಪ್ರವಾಹ ನಿಯಂತ್ರಣ ತುತರ್ು ಸಭೆ ಜರುಗಿತು.

ತಹಶೀಲ್ದಾರ ಪ್ರಶಾಂತ ಪಾಟೀಲ ಮಾತನಾಡಿ ತಾಲೂಕಿನಾದ್ಯಂತ 5 ಗ್ರಾಮ ಪಂಚಾಯತಿಗೊಬ್ಬರಂತೆ ಒಟ್ಟು 14 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗೋಶಾಲೆ, ಗಂಜಿ ಕೇಂದ್ರ ತೆರೆಯುವ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪುರಸಭೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ. ಗಂಜಿ ಕೇಂದ್ರ ತೆರೆದಲ್ಲಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಸಂಪರ್ಕದಲ್ಲಿದ್ದು ಆಚಾತುರ್ಯ ನಡೆಯದಂತೆ ಗಮನಹರಿಸಬೇಕಿದೆ.

ಪೊಲೀಸ್, ಅಗ್ನಿಶಾಮಕ ಸೇರಿ ತುತರ್ು ಸೇವೆಗಳ ಸಂಖ್ಯೆಗಳನ್ನು ಎಲ್ಲ ಅಧಿಕಾರಿಗಳು ಕಾಯ್ದಿರಿಸಿ. ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಅಲ್ಲಿನ ಪರಿಸ್ಥಿತಿ ಕುರಿತು ಕಚೇರಿಗೆ ಮಾಹಿತಿ ನೀಡಿ. ಪ್ರವಾಹ ನಿಯಂತ್ರಣ ಸಹಾಯವಾಣಿ ಕೇಂದ್ರ ತೆರೆದಿದ್ದು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ದೂರವಾಣಿ ಸಂಖ್ಯೆ 08330-222223 ಸಂಪಕರ್ಿಸಲು ತಿಳಿಸಿದ್ದಾರೆ 

ಸುದ್ದಿ ಓದಿ