ತೊಗಲುಗೊಂಬೆ ಜಾನಪದ ಕಲೆ ವಿಚಾರ ಸಂಕಿರಣ

ತೊಗಲುಗೊಂಬೆ ಜಾನಪದ ಕಲೆ  ವಿಚಾರ ಸಂಕಿರಣ

ಬಳ್ಳಾರಿ 29: ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ), ಬಳ್ಳಾರಿ ಮತ್ತು ಕನರ್ಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ಬಳ್ಳಾರಿ ಇವರ ಸಹಯೋಗದೊಂದಿಗೆ ಬಳ್ಳಾರಿಯ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ತೊಗಲುಗೊಂಬೆ ಜಾನಪದ ಕಲೆ ಬೆಳೆದು ಬಂದ ದಾರಿ ಎಂಬ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕನರ್ಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ್ ಅವರ ಉದ್ಘಾಟಿಸಿದರು. ಮುಂದುವರೆದು ಮಾತನಾಡಿದ ಅವರು ಜಾನಪದ ಕಲೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪನಿದರ್ೆಶಕರು ಬಳ್ಳಾರಿ ಹಾಗೂ ಕೂಡ್ಲಿಗಿ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜಪ್ಪ ಅವರು ಮಾತನಾಡಿ, ತೊಗಲುಗೊಂಬೆ ಅತೀ ಪ್ರಾಚೀನ ಕಲೆ, ಈ ಕಲೆಯು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿಯೇ ಸೀಮಿತವಾಗಿದ್ದು, ಇತ್ತೀಚಿನ ದಿನಮಾನಗಳಲ್ಲಿ ತೊಗಲುಗೊಂಬೆ ಎಲ್ಲಾ ಕಡೆ ವಿಸ್ತರಿಸಿದ್ದು, ಇದರ ಮೂಲಕ ಚಲನಚಿತ್ರಗಳು ತಯಾರಾದ ಬಗ್ಗೆ ಪುರಾವೆಗಳಿಗೆ ಎಂದು ತಿಳಿಸಿದರು. ಸಕರ್ಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ರೆಡ್ಡಿ ಅವರು ಮಾತನಾಡುತ್ತಾ, ತೊಗಲುಗೊಂಬೆ ಕಲೆ ಇತ್ತೀಚಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿಯೂ ಹರಡಿದ್ದು, ಇದಕ್ಕೆ ನಮ್ಮ ಜಿಲ್ಲೆಯ ಬೆಳಗಲ್ಲು ವೀರಣ್ಣನವರೇ ಕಾರಣ ಎಂದು ತಿಳಿಸಿದರು. ಬೆಳಗಲ್ಲು ವೀರಣ್ಣನವರ ತಂಡದಲ್ಲಿದ್ದಾಗ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಕೆ.ಹೊನ್ನೂರುಸ್ವಾಮಿ ಅವರೂ ಕೂಡಾ ದೇಶ ವಿದೇಶಗಳಲ್ಲಿ ಬೆಳಗಲ್ಲು ವೀರಣ್ಣನವರೊಂದಿಗೆ ಪ್ರದರ್ಶನ ಮಾಡಿರುವುದನ್ನು ನೆನಪಿಸಿಕೊಂಡರು. ಮುನಿಸಿಪಲ್ ಪ್ರೌಢಶಾಲೆಯ ಪ್ರಾಧ್ಯಾಪಕರಾದ ಶ್ರೀಮತಿ ಎ.ಎನ್.ಸಿದ್ದೇಶ್ವರಿ ಅವರು ಮಾತನಾಡುತ್ತಾ, ತೊಗಲುಗೊಂಬೆ ನಡೆದು ಬಂದ ಹಾಗೂ ಬೆಳೆದು ಬಂದ ದಾರಿಯ ಬಗ್ಗೆ ಅತೀ ವಿಸ್ತಾರವಾಗಿ ವಿವರಿಸಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದಶರ್ಿಗಳಾದ ಎನ್.ಬಸವರಾಜ್ ಅವರು ಜಾನಪದ ಹಾಡುಗಳೊಂದಿಗೆ ನೆರೆದವರ ಮನಸೂರೆಗೊಂಡರು. ಕು|| ಜೆ.ಎಂ.ಭೂಮಿಕ ಅವರು ಜಾನಪದ ನೃತ್ಯ ಪ್ರದಶರ್ಿಸಿದರು. ಪ್ರಾಸ್ತಾವಿಕ ನುಡಿಯನ್ನು ಕೆ.ಹೊನ್ನೂರುಸ್ವಾಮಿ ಅವರು ನೆರವೇರಿಸಿದರು. ಪ್ರಾರಂಭದಲ್ಲಿ ಕನ್ನಡ ಉಪಾಧ್ಯಾಯರಾದ ಹನುಮಂತಪ್ಪ ಅವರು ಸ್ವಾಗತಿಸಿದರೆ, ಕಾಶೀಂವಲಿ ಅವರು ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.

ಸುದ್ದಿ ಓದಿ