ಬಸ್-ಲಾರಿ ನಡುವೆ ಭೀಕರ ಅಪಘಾತ

ಬಸ್-ಲಾರಿ ನಡುವೆ ಭೀಕರ ಅಪಘಾತ

ಕಂಪ್ಲಿ:ನ.03. ತಾಲೂಕು ಸಮೀಪದ ದೇವಸಮುದ್ರ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿ-29ರಲ್ಲಿ ರಸ್ತೆ ಸಾರಿಗೆ ಬಸ್-ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಆಸ್ಪತ್ರೆಗೆ ತೆರಳುವ ರಸ್ತೆ ಮಾರ್ಗದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಗಂಭೀರ ಗಾಯಗಳಾದ ಇಬ್ಬರು ಪ್ರಯಾಣಿಕನ್ನು ಗಂಗಾವತಿಯ ಸಕರ್ಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

         ಈ ಅಪಘಾತದಲ್ಲಿ ನೆಲ್ಲೂಡಿ ಕೊಟ್ಟಾಲ್ ಗ್ರಾಮದ ನಿವಾಸಿ ಯರರ್ೆಪ್ಪ(45) ಮೃತಪಟ್ಟ ದುದರ್ೃವಿ. ಘಟನೆಯಲ್ಲಿ ಲಾರಿ ಚಾಲಕನ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ತೀವ್ರ ಗಾಯಗಳಾದ ಇಬ್ಬರ ಪ್ರಯಾಣಿಕರು ಗಂಗಾವತಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಂಪ್ಲಿ ಸಕರ್ಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸ್ ಡಿಕ್ಕಿಯಲ್ಲಿ ಕುದುರೆ ಉಸಿರು ಬಿಟ್ಟಿದೆ ಎಂದು ತಿಳಿದು ಬಂದಿದೆ. 

   ಬಳ್ಳಾರಿಯಿಂದ ಗಂಗಾವತಿಗೆ ಹೊರಡುವ ಸಂದರ್ಭದಲ್ಲಿ ದೇವಸಮುದ್ರ ಕ್ರಾಸ್ ಬಳಿ ಕುದುರೆಯೊಂದು ಅಡ್ಡ ಬಂದಿದ್ದು, ಕುದುರೆ ಜೀವ ಉಳಿಸಲು ಹೋಗಿ, ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯಿತು ಎಂದು ಬಸ್ ಚಾಲಕ ಜಿಲಾನ್ದಾಬ್ ತಿಳಿಸಿದ್ದಾರೆ. ಇಲ್ಲಿನ ಘಟನಾ ಸ್ಥಳಕ್ಕೆ ಸಿಪಿಐ ಎನ್.ನಂಜಪ್ಪ, ಪಿಎಸ್ಐ ಕೆ.ಬಿ.ವಾಸುಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಯಲ್ಲಿ ಬಸ್-ಲಾರಿ ನುಜ್ಜುಗುಜ್ಜಾಗಿದೆ. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸುದ್ದಿ ಓದಿ