ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬರು ಪಾಲಿಸಿ: ಚುನಾವಣಾಧಿಕಾರಿ ಸಂತೋಷ
ಲೋಕದರ್ಶನ ವರದಿ,
ಜಮಖಂಡಿ 04: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಅವಶ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬರು ಪಾಲಿಸಬೇಕು ಎಂದು ಚುನಾವಣಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.
ನಗರದ ಮಿನಿವಿಧಾನ ಸೌಧ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ 232 ಮತಗಟ್ಟೆಗಳಿವೆ. 208419 ಮತದಾರರಿದ್ದು, ಅದರಲ್ಲಿ 104149 ಪುರುಷರು, 104265 ಮಹಿಳಾ ಹಾಗೂ 5 ಇತರೆ ಮತದಾರರಿದ್ದಾರೆ ಎಂದರು.
20 ಸೆಕ್ಟರ್ ಅಧಿಕಾರಿಗಳು, 1 ಸಹಾಯಕ ವೆಚ್ಚ ವೀಕ್ಷಕರು, 3 ವಿರಿಯೋ ಕಣ್ಗಾವಲು ತಂಡ, 1 ವಿಡಿಯೋ ವೀಕ್ಷಣಾ ತಂಡ, 6 ಕ್ಷಿಪ್ರ ಸಂಚಾರಿ ದಳ, 9 ಸ್ಥಾಯಿ ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ, ಹುಲ್ಯಾಳ ಕ್ರಾಸ್, ಹುನ್ನೂರ, ಚಿಕ್ಕಲಕಿ ಕ್ರಾಸ್ ಮೂರು ಕಡೆ ಚಕ್ ಪೋಸ್ಟ್ ತೇರೆಯಲಾಗಿದೆ.
ಉಪವಿಭಾಗದ ಜಮಖಂಡಿ 3, ರಬಕವಿ-ಬನಹಟ್ಟಿ 1, ಬೀಳಗಿ 1, ಮುಧೋಳ 4 ಜನರನ್ನು ಪೊಲೀಸ್ ಕಾಯ್ದೆ ಪ್ರಕಾರ ಒಟ್ಟು 9 ಜನರನ್ನು ಗಡಿಪಾರು ಮಾಡಲಾಗಿದೆ.
ಚುಣಾವಣೆ ನಡೆಯುವ ಅರ್ದದಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಲೈವ ಟೆಲಿಕಾಸ್ಟ್ ಮಾಡಲಾಗುವದು ಎಂದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಲೋಕೇಶನ್ ಸಹಿತ ವಿಡಿಯೊ,ಫೋಟೊ ಸಮೇತ ಮಾಹಿತಿಯನ್ನು ಸಿ-ವಿಜಿಲ್ ಆಫ್ಗೆ ಅಪ್ಲೋಡ್ ಮಾಡಿದರೆ ನಾವು ನೂರು ನಿಮಿಷದಲ್ಲಿ ಪ್ರಕ್ರಿಯೆಯನ್ನು ಮುಗಿಸಿ ಅಂತವರ ಮೇಲೆ ಕ್ರಮ ತೆಗೆದುಕೊಳ್ಳುತ್ತೆವೆ, ತಾಲೂಕು ಆಡಳಿತ ಸೌಧದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದ್ದು, ದೂರು ನಿರ್ವಹಣಾ ಕೇಂದ್ರದ ದೂ. ಸಂಖ್ಯೆ 08353-220023 ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದರು.
ಮನೆಯಿಂದಲೇ ಮತಮಾಡುವವರು ಚುನಾವಣಾ ಅಧಿಕಾರಿಗಳು ನೀಡುವ ಅರ್ಜಿ ತುಂಬಿ ಕೊಡಬೇಕು. ನಂತರ ಅವರ ಮನೆಗಳಿಗೆ ಅಧಿಕಾರಿಗಳು ಬಂದು ಮತಪತ್ರ ನೀಡಿ, ಮತದಾನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಎಂಟು ಸಾವಿರ ಅರ್ಜಿ ನೀಡಿದ್ದೆವೆ ಇಗಾಗಲೇ ಐದು ನೂರು ಜನ ತುಂಬಿ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮಗಳ ಆಯೋಜನೆ, ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿದ್ದರೂ, ಸಂಬಂಧಿಸಿದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳದಿದ್ದರೆ ಕಾನೂನು ಕ್ರಮ ಜರುಗಿಸುತ್ತೆವೆ ಎಂದರು.
ಬಾರ್ ಮಾಲಿಕರ, ಪ್ರಿಂಟಿಂಗ್ ಪ್ರೆಸ್, ಶಾಮಿಯಾನ್ ಮಾಲಿಕರ್ ಸಭೆಗಳನ್ನು ಮಾಡಿ ನೀತಿ ಸಂಹಿತೆಗೆ ಅನುಗುಣವಾಗಿ ವ್ಯಾಪಾರ ಮಾಡಲು ಸೂಚಿಸಿದ್ದೆವೆ ಎಂದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.