ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿಯಾಗಬೇಕು: ಸಿದ್ದಲಿಂಗಪ್ಪ
ಲೋಕದರ್ಶನ ವರದಿ
ಬಳ್ಳಾರಿ 01: ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ ಗುರುತಿಪ್ಪೇರುದ್ರ ಪದವಿ ಮಹಾವಿದ್ಯಾಲಯದ ವತಿಯಿಂದ ಚೇಳ್ಳಗುಕರ್ಿ ಗ್ರಾಮದ ಆವಧೂತ ಎರ್ರಿತಾತನವರ ದೇವಸ್ಥಾನದ ಶ್ರೀ.ತಿಕ್ಕಯ್ಯ ಸಭಾಂಗಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ನೆರವೇರಿಸಿ, ರಾಷ್ಟ್ರೀಯ ಸೇವಾಯೋಜನೆಯು ಮಹಾತ್ಮ ಗಾಂಧೀಜಿಯವರ ಸಂಕಲ್ಪದ ಕಾರ್ಯವಾಗಿದೆ. ಪ್ರಜಾಪ್ರಭುತ್ವದ ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿಯಾಗಬೇಕು, ಸ್ವಾಭಿಮಾನ ಹೊಂದಿರಬೇಕು, ಸ್ವದೇಶಾಭಿಮಾನದಿಂದ ಜೀವನ ಸಾಗಿಸಬೇಕು. ಈ ಹಿನ್ನೆಲೆಯಲ್ಲಿ ಇಂದಿನ ಯುವಕರು ವಿದ್ಯಾಭ್ಯಾಸ ಕೇವಲ ಉದ್ಯೋಗಕ್ಕಾಗಿ ಎಂಬ ಕಲ್ಪನೆಯನ್ನು ಹೊಂದಿದ್ದು, ತಮ್ಮ ಬೆಳವಣಿಗೆಗೆ ಕಾರಣವಾದ ಸಮಾಜವನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಇಂದಿನ ಭಯೋತ್ಪಾದನೆ, ಸಾಮಾಜಿಕ ಸಂಘರ್ಷಗಳು ಏರ್ಪಡುತ್ತಿವೆ. ಇವುಗಳನ್ನು ನಿವಾರಿಸಲು ಶಾಲಾ ಕಾಲೇಜಿನ ಯುವಕರು ನಿಧರ್ಿಷ್ಟ ಪ್ರದೇಶದಲ್ಲಿ ಸೇವಾಕಾರ್ಯವನ್ನು ಮಾಡುವುದರ ಮೂಲಕ ಜನಜೀವನವನ್ನು ಅರ್ಥಮಾಡಿಕೊಳ್ಳುವುದು, ಕಲಿತ ವಿದ್ಯೆ ಕೇವಲ ದುಡಿಮೆಗಾಗಿ ಅಲ್ಲ ಜೀವನದ ಸುಖ ಸೌಖ್ಯಕ್ಕಾಗಿ ಎಂಬುದನ್ನು ಅರಿತುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್ ಎನ್ ರುದ್ರಪ್ಪ ವಹಿಸಿದ್ದರು. ಮಾತನಾಡುತ್ತಾ ವಿದ್ಯಾಥರ್ಿಗಳು ರಾಷ್ಟ್ರದ ಭವಿಷ್ಯತ್ತಾಗಿದ್ದಾರೆ, ಇವರಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸುವುದು ಇಂದು ಅಗತ್ಯವಾಗಿದೆ. ಈ ದಿಸೆಯಲ್ಲಿ ವಿದ್ಯಾಥರ್ಿಗಳು ಮನಪೂರ್ವಕವಾಗಿ ಏಳು ದಿನಗಳ ಕಾಲ ಸೇವಾಶಿಬಿರದಲ್ಲಿ ಭಾಗಿಗಳಾಗಬೇಕು ಎಂದು ಶಿಬಿರಾಥರ್ಿಗಳಿಗೆ ಮಾರ್ಗದರ್ಶನ ಮಾಡಿದರು.
ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದಶರ್ಿ ಜಿ.ನಾಗರಾಜ್ ರಾಷ್ಟ್ರೀಯ ಸೇವಾಯೋಜನೆಯ ರೂಪುರೇಷೆಗಳನ್ನು ವಿದ್ಯಾಥರ್ಿಗಳಿಗೆ ವಿವರಿಸಿ ಕಾರ್ಯಕ್ರಮದ ಯಶಸ್ಸು ತಮ್ಮೆಲ್ಲ ಕಾರ್ಯದಿಂದಲೇ ನಿಂತಿದೆ ಎಂದು ಶಿಬಿರಾಥರ್ಿಗಳನ್ನು ಉದ್ದೇಶಿಸಿ ಪ್ರಸ್ತಾವಿಕ ನುಡಿಗಳನ್ನಾಡುತ್ತಾ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಅತಿಥಿಗಳಾಗಿ ತಿಪ್ಪೇರುದ್ರ ಪಪೂ ಕಾಲೇಜಿನ ಉಪನ್ಯಾಸಕರಾಗ ಮಹಾದೇವಗೌಡ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಶಿಬಿರದ 'ಎ' ಘಟಕದ ನಿದರ್ೇಶಕ ಕನ್ನಡ ಉಪನ್ಯಾಸಕ ಎ.ಮಲ್ಲಿಕಾಜರ್ುನ, 'ಬಿ' ಘಟಕದ ನಿದರ್ೇಶಕ ಸಂಖ್ಯಾಶಾಸ್ತ್ರ ಉಪನ್ಯಾಸಕ ಜಿ.ಮನೋಹರ್ ಬಾಬು, ವಾಣಿಜ್ಯ ವಿಭಾಗದ ಉಪನ್ಯಾಸಕ ಸಿಎ.ದೇವರೆಡ್ಡಿ ಹಾಜರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸೌಮ್ಯ ಪ್ರಾರ್ಥನೆ ಮಾಡಿದರು. ಸೌಂದರ್ಯ ಸ್ವಾಗತ ಕೋರಿದರು. ಉಪನ್ಯಾಸಕ ಜಿ.ಮನೋಹರ್ಬಾಬು ವಂದನಾರ್ಪಣೆ ಮಾಡಿದರು.