ಕೌಶಲ್ಯತೆಯನ್ನು ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಐಲಿ

ಕೌಶಲ್ಯತೆಯನ್ನು ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಐಲಿ

ಬಳ್ಳಾರಿ 04:ನೋಂದಾಯಿತ ಕಟ್ಟಡ ಕಾಮರ್ಿಕರು ವೃತ್ತಿ ಕೌಶಲ್ಯ ಕುರಿತು ಅತ್ಯಂತ ಸಮರ್ಪಕವಾಗಿ ತರಬೇತಿ ಪಡೆದುಕೊಂಡು ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು, ತಾವು ಸೇವೆಯಲ್ಲಿದ್ದಾಗ  ಜೀವ ಸುರಕ್ಷತೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಕಾಮರ್ಿಕ ಅಧಿಕಾರಿ ಚಂದ್ರಶೇಖರ.ಎನ್.ಐಲಿ ಅವರು ಕರೆ ನೀಡಿದರು. 

   ಜಿಲ್ಲಾ ಕಾಮರ್ಿಕ ಇಲಾಖೆ ಮತ್ತು ನಿಮರ್ಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಗರದ ನಿಮರ್ಿತಿ ಕೇಂದ್ರದ ಕಚೇರಿ ಆವರಣದಲ್ಲಿ ಶುಕ್ರವಾರ ಶ್ರಮ ಸಾಮಥ್ರ್ಯ ಯೋಜನೆ ಅಡಿ "ಟ್ರೈನಿಂಗ್ ಕಂ ಟೂಲ್ ಕಿಟ್ ಕಾರ್ಯಕ್ರಮ ಮತ್ತು ಎಲೆಕ್ಟ್ರಲ್ ವೃತ್ತಿ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

   ಕಟ್ಟಡ ಕಾಮರ್ಿಕರು ಹಾಗೂ ನೋಂದಾಯಿತ ಕಾಮರ್ಿಕರಿಗಾಗಿ ಸರಕಾರದಿಂದ ವಿವಿಧ ಸೌಲಭ್ಯಗಳಿದ್ದು, ಅವುಗಳ ಬಗ್ಗೆ ತಿಳಿದುಕೊಂಡು ಸೌಲಭ್ಯ ಪಡೆಯಲು ಮುಂದಾಗಬೇಕು ಎಂದು ಹೇಳಿದ ಜಿಲ್ಲಾ ಕಾಮರ್ಿಕ ಅಧಿಕಾರಿ ಚಂದ್ರಶೇಖರ.ಎನ್.ಐಲಿ ಅವರು ಎಲೆಕ್ಟ್ರಲ್ ತರಬೇತಿ ಪಡೆದ ನೊಂದಾಯಿತ ಕಾಮರ್ಿಕರು ತಾವು ಕೆಲಸ ಮಾಡುವ ಸಂದರ್ಭದಲ್ಲಿ ಜೀವ ಸುರಕ್ಷತೆಗೆ ಆದ್ಯತೆ ನೀಡಿ ಎಂದರು.

  ಕಾಮರ್ಿಕ ನಿರೀಕ್ಷಕ ರವಿದಾಸ್ ಅವರು ಕಾಮರ್ಿಕ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು. 

 ನಿಮರ್ಿತಿ ಕೇಂದ್ರದ ಅಧಿಕಾರಿ ಮಂಜುಳಾ.ಡಿ.ವಿ ಅವರು ಮಾತನಾಡಿದರು.   ಜಿಲ್ಲಾ ಕಾಮರ್ಿಕ ಇಲಾಖೆಯ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ ನಿರೂಪಿಸಿ ವಂದಿಸಿದರು. ಮಿತಿಲಾ ರೆಡ್ಡಿ, ನಡ್ಲಿಕೇರಿ ನಾಗರಾಜ, ಶ್ರೀಧರ್, ಯಶವಂತ್  ಸೇರಿದಂತೆ ನೋಂದಾಯಿತ ಕಟ್ಟಡ ಕಾಮರ್ಿಕರು ಇದ್ದರು. 

ಈ ಸಂದರ್ಭದಲ್ಲಿ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಪರಿಕರಗಳನ್ನು ವಿತರಿಸಲಾಯಿತು.


ಸುದ್ದಿ ಓದಿ