ವಿದ್ಯಾಥರ್ಿಗಳು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಹಟ್ಟೆಪ್ಪ

ವಿದ್ಯಾಥರ್ಿಗಳು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಹಟ್ಟೆಪ್ಪ

ಬಳ್ಳಾರಿ 31:ಸಕರ್ಾರವು ವಿವಿಧ ಯೋಜನೆಗಳ ಮೂಲಕ ರಾಜ್ಯದಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿದ್ದು, ಅದರ ಅಂಗವಾಗಿ ಉದ್ಯೋಗ ಮೇಳಗಳನ್ನು ನಡೆಸುತ್ತಿದೆ. ಆದ್ದರಿಂದ  ವಿದ್ಯಾಥರ್ಿಗಳು ತಮಗೆ ಲಭ್ಯವಾದ ಉದ್ಯೋಗಾವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಆ ಮೂಲಕ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟೆಪ್ಪ ತಿಳಿಸಿದರು. 

ಸರಳಾದೇವಿ ಸತೀಶ್ಚಶಂದ್ರ ಅಗರ್ವಾಲ್ ಸಕರ್ಾರಿ ಪ್ರಥಮ ದಜರ್ೆ ಸ್ವಾಯತ್ತ ಕಾಲೇಜಿನಲ್ಲಿಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ( ಡೇ ನಲ್ಮ್ ಯೋಜನೆ) ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಭಾರತವು ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಅದನ್ನು ನಿವಾರಿಸಲು ಭಾರತ ಸಕರ್ಾರ ಮತ್ತು ಕನರ್ಾಟಕ ಸಕರ್ಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲಿ ಕೇವಲ ಶೇ3ರಷ್ಟು ಮಾತ್ರ ಸಕರ್ಾರಿ ಉದ್ಯೋಗಗಳಿವೆ. ಇನ್ನುಳಿದಂತೆ ಶೇ70 ರಷ್ಟು ಖಾಸಗಿ ವಲಯದಲ್ಲಿ ಉದ್ಯೋಗಗಳಿವೆ. ಶೇ.30ರಷ್ಟು ಬ್ಯಾಂಕ್ ಮತ್ತು ರೈಲ್ವೆ ಇಲಾಖೆಗಳಲ್ಲಿ ಬೃಹತ್ ಮಟ್ಟದಲ್ಲಿ ಉದ್ಯೋಗಗಳು ಇವೆ. ಆದ್ದರಿಂದ ವಿದ್ಯಾಥರ್ಿಗಳು ಕಾಲೇಜು ಮಟ್ಟದಲ್ಲಿಯೇ ಉದ್ಯೋಗ ಗಳಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಅದಕ್ಕೆ ಬೇಕಾದ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಇಂದಿನ ಉದ್ಯೋಗ ಮೇಳದಲ್ಲಿ 35ಕ್ಕೂ ಅಧಿಕ ಉದ್ಯೋಗದಾತ ಕಂಪನಿಗಳು ಬಂದಿದ್ದು, ತಮಗೆ ಬೇಕಾದ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಅದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕೆಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಯು.ಅಬ್ದುಲ್ ಮುತಾಲಿಬ್ ಅವರು ಮಾತನಾಡಿ, ಉದ್ಯೋಗ ಮಾಡುವ ಕೈಗಳಿಗೆ ಯಾವಗಲೂ ಕೆಲಸವಿರುತ್ತದೆ. ಹಾಗಾಗಿ ವಿದ್ಯಾಥರ್ಿಗಳು ಅದಕ್ಕೆ ತಕ್ಕಂತೆ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಕೇವಲ ಅಂಕಪಟ್ಟಿ ಇದ್ದರೆ ಸಾಲದು ಕೆಲಸ ಮಾಡುವ ಕೌಶಲ್ಯವಿರಬೇಕೆಂದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಡೇ ನಲ್ಮ್ ಯೋಜನೆಯ ಸಿಇಓ ಗಾದಿಲಿಂಗನಗೌಡ, ಕೌಶಲ್ಯಾಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ಪ್ರಾಣೇಶ್ ಮಾತನಾಡಿದರು. ಪ್ಲೇಸ್ ಮೆಂಟ್ ಸೆಲ್ನ ಸಂಚಾಲಕ ಡಾ.ಹನುಮೇಶ್ ವೈದ್ಯ ಅವರು ಸ್ವಾಗತಿಸಿದರು. ಕೊನೆಯಲ್ಲಿ ಡಾ.ತಾಯಪ್ಪ ವಂದಿಸಿದರು. ಉದ್ಯೋಗ ಮೇಳದಲ್ಲಿ 3000ಕ್ಕೂ ಅಧಿಕ ಅಭ್ಯಥರ್ಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ