ಬಯಲಾಟ ಖ್ಯಾತಿ ಪಡೆಯಲು ವಿದ್ಯಾವಂತರ ಸಹಕಾರ ಅಗತ್ಯ
ಲೋಕದರ್ಶನ ವರದಿ
ಬಳ್ಳಾರಿ 07: ಯಕ್ಷಗಾನ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ. ಬಯಲಾಟವೂ ಹೆಸರುವಾಸಿಯಾಗಲು ವಿದ್ಯಾವಂತರು, ಬುದ್ಧಿ ಜೀವಿಗಳು ಸಹಕಾರ ನೀಡಬೇಕು ಎಂದು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಂಗ್ಲೆ ಮಲ್ಲಿಕಾಜರ್ುನ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಿನ್ನೆ ಸಂಜೆ ಶ್ರೀ ರಾಮ ತೊಗಲು ಗೊಂಬೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಪ್ರಾಯೋಜಕತ್ವದಡಿಯಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ದಿಂದ ಹಮ್ಮಿಕೊಂಡಿದ್ದ ರಾಮಾಯಣ ಬಯಲಾಟ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾವಂತರು ಮತ್ತು ಬುದ್ದಿಜೀವಿಗಳು ಅದರಲ್ಲಿ ತೊಡಗಿಸಿಕೊಳ್ಳುವುದರಿಂದ ಯಕ್ಷಗಾನ ಹೆಸರುವಾಸಿಯಾಗಿದೆ, ಅದೇ ರೀತಿ ಬಯಲಾಟದಲ್ಲೂ ಸಹ ಗ್ರಾಮೀಣ ಪ್ರದೇಶದ ಅನಕ್ಷರಸ್ಥರು ಮಾತ್ರ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಬಯಲಾಟ ವ್ಯಾಪಕವಾಗಿ ಹರಡುತ್ತಿಲ್ಲ. ಬಯಲಾಟದಲ್ಲೂ ಸಹ ವಿದ್ಯಾವಂತರು ತೊಡಗಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಮಾತಾನಾಡಿ, ಪ್ರಸ್ತುತ ದಿನಗಳಲ್ಲಿ ಬಯಲಾಟ ಪ್ರದಶರ್ಿಸಬೇಕಾದರೆ, ಅದರ ಖಚರ್ು ವೆಚ್ಚ ದುಭಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದಿಂದ ಬಯಲಾಟಕ್ಕೆ ನೀಡುವ ಅನುದಾನವನ್ನು ಇನ್ನೂ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಯಲಾಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದರಂತೆ ನಗರ ಪ್ರದೇಶಗಳಲ್ಲೂ ಸಹ ಆದ್ಯತೆ ನೀಡಬೇಕು. ಅಂದಾಗ ಮಾತ್ರ ಬಯಲಾಟ ಉಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷೆ ರಂಗಭೂಮಿ ಕಲಾವಿದೆ ಸುಜಾತಮ್ಮ, ಕಾರ್ಯದಶರ್ಿ ಲಕ್ಷ್ಮೀ ನಾರಾಯಣ, ಎರ್ರೆಮ್ಮ, ಜೆ. ದೊಡಬಸವನಗೌಡ, ಜೆ.ವಿ.ಬಸವರಾಜಗೌಡ, ಡಿ. ಉಮಾಪತಿಗೌಡ, ಗದ್ದೆ ಮಲ್ಲಿಕಾಜರ್ುನಗೌಡ, ಎಸ್. ರುದ್ರಗೌಡ, ಮುಷ್ಟಗಟ್ಟಿ ಹನುಮಂತಪ್ಪ, ಮುಷ್ಟಗಟ್ಟಿ ಗ್ರಾಪಂ ಉಪಾಧ್ಯಕ್ಷ ದೊಡ್ಡಬಸಪ್ಪ, ಜಾಲಿಬೆಂಚಿ ಉಂತಕಲ್ಲು ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಾಮನ ಪಾತ್ರದಲ್ಲಿ ವೀರಬಸಪ್ಪಗೌಡ ಎಂ.ಗೋನಾಳ್, ಲಕ್ಷ್ಮಣ: ಬೊಮ್ಮನಹಾಳ್ ಕೇಶವರೆಡ್ಡಿ, ರಾವಣ: ಬೊಮ್ಮನಹಾಳ್ ಸಗರಂ ಬಸವನಗೌಡ, ಸೀತೆ ಪಾತ್ರದಲ್ಲಿ ವಿರುಪಾಪುರ ಶಾರದಾ, ಮಾಯಸ್ತ್ರೀ-ಮಂಡೋದರಿಯಾಗಿ ವಿರುಪಾಪುರ ಲಕ್ಷ್ಮೀ, ಸಾರಥಿ: ಪಂಪಾಪತಿ ಅವರು ಅಭಿನಯಿಸಿದರು.
ಬಂಡಿಗಟ್ಟಿಯ ಹನುಮಾವ ಧೂತ ಹಾರ್ಮೋನಿಯಂ ಮತ್ತು ವೀರೇಶ್ ತಬಲಾ ಸಾಥ್ ನೀಡಿದರು.ವದ್ದಟ್ಟಿ ಕರಿಬಸಪ್ಪ ಮುಮ್ಮೇಳ ಮತ್ತು ಗೋನಾಳ್ ಸಿದ್ದಪ್ಪ ಹಿಮ್ಮೇಳ ನೀಡಿದರು.