ಅ.30ರಂದು ಇ-ರಕ್ಷಾ ಸ್ಪರ್ಧೆ
ಲೋಕದರ್ಶನ ವರದಿ,
ಜಮಖಂಡಿ 22: ಎನ್ಈಪಿ-2020 ರಲ್ಲಿ ಶಾಲಾ ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಒತ್ತು ನೀಡಲಾಗಿದ್ದು, ಪ್ರಸ್ತುತ ಆನ್ಲೈನ್ ಡಿಜಿಟಲ್ ಕಲಿಕೆಯನ್ನು ಶಾಲೆಗಳಲ್ಲಿಯೂ ವಿಸ್ತರಿಸಿರುವುದರಿಂದ ಸೈಬರ್ ಸುರಕ್ಷತೆ ಬಗ್ಗೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ CIET, NCERT ವತಿಯಿಂದ eRaksha ಸ್ಪರ್ಧೆ -2023 ಅನ್ನು CyberPeace Foundation ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಸ್ಪರ್ಧೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು https://www.eraksha.net/competitions/ ಜಾಲತಾಣದಲ್ಲಿ ಪಡೆಯಬಹುದಾಗಿರುತ್ತದೆ.
eRaksha ಸ್ಪರ್ಧೆ -2023 ಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಪೋಷಕರು ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಲು 2023 ಅ.30ರಂದು ಕೊನೆ ದಿನಾಂಕವಾಗಿದ್ದು, ಎಲ್ಲ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕೆಂದು ಬಿಈಓ ಅಶೋಕ ಬಸಣ್ಣವರ ಪ್ರಕಟಣೆಗೆ ತಿಳಿಸಿದ್ದಾರೆ.