ರಾಣೆಬೆನ್ನೂರ

ಶನೇಶ್ವರ ಸ್ವಾಮಿ ಬಯಲು ಆಲಯದ ದ್ವಾದಶ ಪ್ರತಿಷ್ಠಾ ಮಹೋತ್ಸವ

ಶನೇಶ್ವರ ಸ್ವಾಮಿ ಬಯಲು ಆಲಯದ ದ್ವಾದಶ ಪ್ರತಿಷ್ಠಾ ಮಹೋತ್ಸವ

ರಾಣೆಬೆನ್ನೂರು 27:  ಪ್ರತಿನಿತ್ಯ ದುರ್ಗಾ  ಆರಾಧನೆಯನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಿದರೆ ಮನುಜನಲ್ಲಿನ ದುರ್ಗತಿಗಳು ದೂರವಾಗಿ ಅಂತರಂಗದಲ್ಲಿ ಜಾಗೃತಿ ಮೂಡಿಸಿ ಹೊಸ ಚೈತನ್ಯ ತರುತ್ತದೆ ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.     

      ನಗರದ ಹೊರವಲಯದಲ್ಲರುವ ರಾಷ್ಟ್ರದ ಎರಡನೇಯ ಹಾಗೂ ರಾಜ್ಯದ ಮೊದಲನೆಯ ಹಿರೇಮಠ ಶನೈಶ್ಚರಮಂದಿರದಲ್ಲಿ ರವಿವಾರದಂದು  ಏರ್ಪಡಿಸಿದ್ದ  ಶನೇಶ್ವರ ಸ್ವಾಮಿ ಬಯಲು ಆಲಯದ ದ್ವಾದಶ ಪ್ರತಿಷ್ಠಾ ಮಹೋತ್ಸವ, ಬ್ರಹ್ಮ ಕಲಶೋತ್ಸವ, ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಿರಂತರ ಮೂರು ಮಹಾಮಂಡಲಗಳ 593 ದಿನಗಳ ಕಾಲ ನಿರಂತರ ಜರುಗುವ ಧರ್ಮ ಮಹಾಯಜ್ಞದ ದ್ವಿತೀಯ ಮಂಡಲೋತ್ಸವ, ಮಹಾಸಂಕಲ್ಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.   

      ಇಂದು ಬಹುತೇಕ ಜನರಲ್ಲಿ ಧರ್ಮದ ಬಗ್ಗೆ  ಅಭಿಮಾನ, ಗೌರವ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇದರಿಂದ ಧರ್ಮದ ಅವನತಿ ಸೇರಿದಂತೆ ಮನುಜನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮ ಜೀವನವನ್ನು ಸದಾ ಸಂತುಷ್ಟಗೊಳಿಸುತ್ತದೆ ಎಂದರು. 

        ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಸರಕಾರದ  ಆದಾಯ ತೆರಿಗೆಯ ಆಯುಕ್ತ (ಆಯ್ ಆರ್ ಎಸ್)  ಶ್ರೀನಿವಾಸ ಬಿದರಿ ಮಾತನಾಡಿ ಸ್ಥಳೀಯ ಹಿರೇಮಠ ಶನೇಶ್ಚರ ಮಂದಿರದಲ್ಲಿ ಈ ಭರತ ಖಂಡ ಸೇರಿದಂತೆ ಇಡೀ ಲೋಕಕಲ್ಯಾಣಾರ್ಥವಾಗಿ ಸುಮಾರು 593 ದಿನಗಳ ಕಾಲ ನಿರಂತರವಾಗಿ  ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಹೆಮ್ಮೆ ತರುವಂತಹ ಕಾರ್ಯವಾಗಿದೆ.  

        ಈ ಕಾರ್ಯ ನಿಜಕ್ಕೂ ನನ್ನ ಜೀವನದಲ್ಲಿ ಒಂದು ಹೊಸ ಮನ್ವಂತರವಾಗಿದೆ. ಎಂತಹ ಸಾಮಾಜಿಕ ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆದರೆ ಸಮಾಜವು ಆರೋಗ್ಯವಾಗಿ ಸಾಗಲು ಸಾಧ್ಯ ಎಂದವರು ಶ್ರೀಮಠದ ಧಾರ್ಮಿಕ  ಕಾರ್ಯವನ್ನು ಶ್ಲಾಘಿಸಿ ಅಭಿಪ್ರಾಯಿಸಿದರು.  

ವಿಶ್ವರಾಧ್ಯ ಹಿರೇಮಠ್ ರವರು ಧರ್ಮದ ಕುರಿತು ಉಪನ್ಯಾಸ ನೀಡಿದರು.  ಶ್ರೀನಿವಾಸ ಕುಲಕರ್ಣಿ , ರವೀಂದ್ರಗೌಡ ಪಾಟೀಲ,  ರಾಮಣ್ಣ ಬ್ಯಾಟಪ್ಪನವರ ಸೇರಿದಂತೆ ಭಕ್ತರು, ಶ್ರೀಮಠದ ಒಟುಗಳು, ಶಾಸ್ತ್ರಿಗಳು ಮತ್ತಿತರರು ಇದ್ದರು. ಅಮರೇಶ ಕೊಂಡಗಳ್ಳಿ, ಬಸವರಾಜ ಹೂಗಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು 

ಸುದ್ದಿ ಓದಿ