ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಅಥಣಿ 08: ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಪ್ರಸಕ್ತ ಹಂಗಾಮಿನಲ್ಲಿ ಒಳ್ಳೆಯ ಗುಣಮಟ್ಟದ ಕಬ್ಬು ಪೂರೈಕೆ ಮಾಡುವ ಮೂಲಕ ಸಹಕಾರಿ ಸಕ್ಕರೆ ಕಾರಖಾನೆಗೆ ಬಲ ತುಂಬಬೇಕು ಎಂದು ಕಬ್ಬು ಬೆಳೆಗಾರರಲ್ಲಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರ್ಪ ಸವದಿ ಮನವಿ ಮಾಡಿದರು. ಅವರು 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅಥಣಿ ತಾಲೂಕಿನ ಸುತ್ತಮುತ್ತ ಅನೇಕ ದೊಡ್ಡ ದೊಡ್ಡ ಖಾಸಗಿ ಕಾರಖಾನೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಆದರೆ ಈ ಖಾಸಗಿ ಕಾರಖಾನೆಗಳು ರೈತರ ಅಭಿವೃದ್ಧಿಗೆ ಶ್ರಮಿಸುವುದಿಲ್ಲ ಇವುಗಳ ಮಧ್ಯೆ ಸಹಕಾರ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ರೈತರು ಕಬ್ಬು ಪೂರೈಕೆ ಮಾಡದೇ ಇದ್ದುದರಿಂದ ಪ್ರತಿ ಹಂಗಾಮಿನಲ್ಲಿಯೂ ನಮ್ಮ ಕಾರಖಾನೆ ಕಬ್ಬು ನುರಿಸುವ ಹಂಗಾಮನ್ನು ಇತರೆ ಕಾರಖಾನೆಗಳಿಗಿಂತ ಮೊದಲೇ ಮುಕ್ತಾಯಗೊಳಿಸುತ್ತಿದ್ದೇವೆ ಎಂದ ಅವರು ನಮ್ಮ ತಾಲೂಕಿನ ಇತರ ಕಾರಖಾನೆಗಳ ಹಂಗಾಮು ಬಂದಾದ ನಂತರ ಕನಿಷ್ಠ ಒಂದು ತಿಂಗಳಾದರೂ ನಮ್ಮ ಕಾರಖಾನೆ ನಡೆಯಬೇಕು ಆಗ ಮಾತ್ರ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಲಾಭವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಸಹಕಾರ ತತ್ವದ ಆಧಾರದ ಮೇಲೆ ಪ್ರಾರಂಭಗೊಂಡ ಹಲವಾರು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ದುರಾಡಳಿತದಿಂದ ಅದೋಗತಿಗೆ ಹೋಗಿವೆ. ಆದರೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ಇತರ ಸಕ್ಕರೆ ಕಾರ್ಖಾನೆಗಳಿಗಿಂತ ಹೆಚ್ಚಿನ ದರವನ್ನು ಕೋಡುವ ಮೂಲಕ ಈ ಕಾರ್ಖಾನೆ ರಾಜ್ಯದ ಕೆಲವೇ ಕೆಲವು ಸಹಕಾರಿ ಸಕ್ಕರೆ ಕಾರಖಾನೆಗಳಲ್ಲಿ ಒಂದಾಗಿದೆ ಎಂದರು. ಇಂಚಲದ ಡಾಕ್ಟರ್ ಶಿವಾನಂದ ಭಾರತಿ ಸ್ವಾಮಿಗಳು ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು..ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್. ಪಾಟೀಲ, ಉಪಾದ್ಯಕ್ಷ ಶಂಕರ ವಾಘಮೊಡೆ, ನಿರ್ದೇಶಕರಾದ ಗುರಬಸು ತೇವರಮನಿ, ಶಾಂತಿನಾಥ ನಂದೇಶ್ವರ, ಗುಳಪ್ಪ ಜತ್ತಿ, ಸೌರಭ ಪಾಟೀಲ, ವಿಶ್ವನಾಥ ಪೋಲಿಸ್ಪಾಟೀಲ, ರಮೇಶ ಪಟ್ಟಣ, ಮಲ್ಲಿಕಾರ್ಜುನ ಗೋಟಖಿಂಡಿ, ಎಸ್.ಎಚ್ ನಾಯಿಕ, ಎಚ್. ಆಯ್ ಜಗದೇವ, ಶ್ರೀಮತಿ ಸುನಂದಾ ಶ್ರೀಶೈಲ ನಾಯಿಕ, ರುಕ್ಮೀಣಿ ಕುಲಕರ್ಣಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗುಳಪ್ಪ ಜತ್ತಿ ಸ್ವಾಗತಿಸಿದರು, ಕಛೇರಿ ಅಧಿಕ್ಷಕ ಸುರೇಶ. ಠಕ್ಕಣ್ಣವರ ನಿರೂಪಿಸಿದರು. ಎ. ಸಿ ರಾಚಪ್ಪನವರ, ಸಿ.ಬಿ.ಪಾಶ್ಚಾಪೂರೆ, ಸಂತೋಷ ಮನಗೂಳಿ, ಮುಖಂಡರಾದ ಮಲ್ಲೇಶ ಸವದಿ, ಶಿವಾನಂದ ಗೊಲಬಾವಿ, ರಾಮಗೌಡ ಗುಮತಾಜ , ಬಾಳೇಶ ಸವದಿ, ರಮೇಶ ಸವದಿ,ಮಹಾದೇವ ಬಿಳಿಕುರಿ, ಅಕ್ಷಯ ಸವದಿ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.