ಎಪಿಎಂಸಿಯಲ್ಲಿ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ

ಎಪಿಎಂಸಿಯಲ್ಲಿ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ

ಬಳ್ಳಾರಿ 04: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಸೋಮವಾರರಂದು ಕೇಂದ್ರ ಸಕರ್ಾರದ ಕನಿಷ್ಟ ಬೆಂಬಲ ಬೆಲೆ ಯೊಜನೆಯಡಿಯಲ್ಲಿ ಭಾರತೀಯ ಹತ್ತಿ ನಿಗಮದ ವತಿಯಿಂದ ರೈತರು ಹಿತಕ್ಕಾಗಿ ಹತ್ತಿ ಖರೀದಿ ಕೇಂದ್ರವನ್ನು ನಗರ ಶಾಸಕ ಜಿ.ಸೋಮಶೇಖರ ರಡ್ಡಿ ಅವರು ಚಾಲನೆ ನೀಡಿದರು.  

   ಕೇಂದ್ರವನ್ನು ಚಾಲನೆ ನೀಡಿ ಮಾತನಾಡಿದ ಅವರು ರೈತರು ಕೇಂದ್ರ ಸಕರ್ಾರದ ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಭಾರತೀಯ ಹತ್ತಿ ನಿಗಮವು ರೈತರಿಂದ ನೆರವಾಗಿ ಹತ್ತಿಯನ್ನು ಖರೀದಿ ಮಾಡಿ ಅದರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದ ಅವರು ಖರೀದಿ ಸಮಯದಲ್ಲಿ ತಮ್ಮ ಪಹಣೆ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾಡರ್್ ಪ್ರತಿಯನ್ನು ಸಲ್ಲಿಸಬೇಕು. ಈ ಯೋಜನೆಯನ್ನು ರೈತರು ಸದುಪಯೋಗ ಪಡೆದು ಕೊಳ್ಳಬೇಕು ಎಂದರು. 

   ಖರೀದಿ ಕೇಂದ್ರದ ಮೇಲ್ವಿಚಾರಕ ಶ್ರೀರಾಮ್ ಪ್ರಸಾದ್ ಹರಿದಾಸ ಮಾತನಾಡಿ, ಹತ್ತಿಯ ತೇವಾಂಶವು ಶೇ.8 ರಿಂದ ಶೇ.12ರವರೆಗೆ ಇರುವ ಹತ್ತಿಯನ್ನು ಖರೀದಿ ಮಾಡಲಾಗುವುದು ಶೇ.12ಕ್ಕಿಂತ ಹೆಚ್ಚು ಅಧಿಕ ತೇವಾಂಶವಿರುವ ಹತ್ತಿಯನ್ನು ಖರೀದಿ ಮಾಡಲಾಗುವುದಿಲ್ಲ. ರೈತರು ಹತ್ತಿಯನ್ನು ಖುಲ್ಲಾ ರೂಪದಲ್ಲೇ ತರಬೇಕು. ಸಮಿತಿಯಲ್ಲಿ ವೇಬ್ರಿಡ್ಜ್ ಇಲ್ಲದ ಕಾರಣ ಹತ್ತಿಯನ್ನು ಮುಂಡರಗಿ ಏರಿಯಾದ 3ನೇ ಹಂತದಲ್ಲಿರುವ ಬಲರಾಮ ಕೃಷ್ಣ ಕಾಟನ್ ಜಿನ್ನಿಂಗ್ ಫ್ಯಾಕ್ಟರಿ ಮತ್ತು ಆಂಧ್ರಾಳ್ ರಸ್ತೆಯಲ್ಲಿರುವ ಅಂಜನಾ ತುಂಗಭದ್ರ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯಲ್ಲಿ ವೇಬ್ರಿಡ್ಜ್ಗಳಲ್ಲಿ ತೂಕ ಮಾಡಿಸಬೇಕು ಎಂದು ಮನವಿ ಮಾಡಿದರು. ಭಾರತೀಯ ಹತ್ತಿ ನಿಗಮದ ಕೇಂದ್ರದ ಸಿಬ್ಬಂದಿಯವರು, ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.

 

ಸುದ್ದಿ ಓದಿ