ನಾಟಕ ಪ್ರದರ್ಶನ ಕಾರ್ಯಕ್ರಮ
ಬಳ್ಳಾರಿ 01: ಶ್ರೇಷ್ಟ ನಟ, ನಿಧರ್ೇಶಕ, ನಾಟಕಕಾರ ಪಿ.ಬಿ.ಧುತ್ತರಗಿ ಜೀವನದುದ್ದಕ್ಕೂ ಕಲೆಯನ್ನೆ ನಂಬಿ ಬದುಕಿದ ಹಲವು ಸಂಕಷ್ಟಗಳ ನಡುವೆ ತಮ್ಮ ಜೀವನದ ಅಂತಿಮ ದಿನಗಳವರೆಗೆ ಕಲಾಸೇವೆಯನ್ನು ಮಾಡಿದ್ದರು. ಎಂದು ನಾಟಕ ಆಕಡಮಿ ಮಾಜಿ ಸದಸ್ಯೆ ಎಸ್.ಎನ್.ಹೆಚ್ ಸುಮತಿಶ್ರೀ ಹೇಳಿದರು. ಈ ಕುರಿತು ತಾಲೂಕಿನ ಗಡಿಭಾಗದ ಚೇಳ್ಳಗುಕರ್ಿ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಿ.ಬಿ.ಧುತ್ತರಗಿ ಟ್ರಷ್ಟ್ ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ಮರಣೋತ್ಸವ 2018 ಆಂಧ್ರ, ಕನರ್ಾಟಕ ಗಡಿನಾಡಿನಲ್ಲಿ ಎರಡು ದಿನಗಳ ವಿಚಾರ ಸಂಕಿರ್ಣ, ರಂಗಗೀತೆ, ಮತ್ತು ನಾಟಕ ಪ್ರದರ್ಶನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಧುತ್ತರಗಿ ಅವರು ನಾಡಿನ ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಯರಿಸ್ವಾಮಿ ಜೀವಸಮಾದಿ ಕ್ಷೇತ್ರದ ಟ್ರಷ್ಟ್ ಕಮಿಟಿಯ ಅಧ್ಯಕ್ಷ ಹೆಚ್.ಬಾಳನಗೌಡ, ಖಜಾಂಚಿ ಪಾಟಿಲ ವೀರುಪಾಕ್ಷಪ್ಪ ಗೌಡ, ಸ್ಥಳಿಯ ಗ್ರಾಮಪಂಚಾಯಿತಿಯ ಅಧ್ಯಕ್ಷ ಎನ್.ಹನುಮಂತಪ್ಪ, ಹಿರಿಯ ಕಲಾವಿದ ರಮೇಶಗೌಡ ಪಾಟಿಲ್, ಹಿರಿಯ ರಂಗನಿಧರ್ೇಶಕ ವರವಿ ಪಕ್ಕಿರಪ್ಪ, ಉಮಾ ಬಾರಿಗಿಡದ ಇನ್ನೂ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಡಿನಾಡು ರಂಗಭೂಮಿ ಕಲಾವಿದರಾದ ಆದೋನಿ ವೀಣಾಕುಮಾರಿ, ಭೀಮಣ್ಣ ಬದನೆಹಾಳ, ಅವರನ್ನು ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದ ಹಾಗೂ ಚಾಯಗ್ರಾಹಕ ಪುರುಷೋತ್ತಮ ಹಂದ್ಯಾಳ ಪ್ರಾಸ್ತವಿಕ ಮತ್ತು ಸ್ವಾಗತ ಬಾಷಣ ನಡೆಸಿದರು. ಅಣ್ಣಾಜೀ ಕೃಷ್ಣಾರೆಡ್ಡಿ ಕಾರ್ಯಕ್ರಮದ ವಿವರಣೆಯನ್ನು ನಿರೂಪಿಸಿದರು. ನಂತರ ಹನುಮಪ್ಪ ಆರೇರ್ ಮತ್ತು ತಂಡ ವೀಣಾ ಆದೋನಿ, ಅಣ್ಣಾಜೀ ಕೃಷ್ನಾರೆಡ್ಡಿ, ಸಾಯಿಶೃತಿ ಇವರಿಂದ ರಂಗಗೀತೆಗಳ ಗಾಯನ ನಡೆಯಿತು. ಅಲ್ಲದೇ ಧುತ್ತರಗಿ ಅವರು ರಚಿಸಿದ ಪ್ಮರಂದರದಾಸರು ಎಂಬ ಭಕ್ತಿಪ್ರಧಾನ ನಾಟಕವನ್ನು ಇಳಕಲ್ಲಿನ ನಾಟ್ಯರಾಣಿ ಕಲಾಸಂಘದಿಂದ ಪ್ರದಶರ್ಿಸಿದರು. ಗ್ರಾಮದಲ್ಲಿ ಒಂದು ರೀತಿಯ ಹಬ್ಬದ ವಾತವರಣವನ್ನು ಸೃಷ್ಟಿ ಮಾಡಿ ಜನರನ್ನು ರಂಜಿಸಿದರು.