ಡಾ.ತೋಂಟದ ಸಿದ್ದಲಿಂಗ ಶ್ರೀಗಳ ಲಿಂಗೈಕ್ಯ
ಲೋಕದರ್ಶನ ವರದಿ
ಬಳ್ಳಾರಿ 20: ಗದಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿಗಳು ವಿಧಿವಶರಾಗಿದ್ದು, ಧಾಮರ್ಿಕ ಕ್ಷೇತ್ರಕ್ಕೆ, ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಠ ಉಂಟಾಗಿದ್ದು, ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಪರವಾಗಿ ಸಂಘದ ಅಧ್ಯಕ್ಷರು, ಕಾರ್ಯದಶರ್ಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಭಗವಂತನಲ್ಲಿ ಪ್ರಾಥರ್ಿಸುತ್ತಾ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಮಾಜದ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂದು ನಂಬಿ ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು, ತುಳಿತಕ್ಕೆ ಒಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅವಿರತ ಶ್ರಮಿಸಿದ್ದರು. ಸಮಾಜದಲ್ಲಿ ಸಾಮರಸ್ಯ ತರಲು ಪ್ರಯತ್ನಿಸಿದ ಅವರು ಕನರ್ಾಟಕದ ಪರಿಸರ, ನೆಲ, ಜಲಗಳಿಗೆ ಧಕ್ಕೆ ಉಂಟಾದಾಗ ಪ್ರತಿಭಟಿಸಿದರು. ವಾಗ್ಮಿಗಳು, ಶ್ರೇಷ್ಠ ವಿದ್ವಾಂಸರು, ಸಮಾಜ ಮುಖಿ ಚಿಂತಕರಾಗಿದ್ದ ಶ್ರೀಗಳ ನಿಧನ ಸಮಾಜ, ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಠವಾಗಿದೆ. ಅವರು ನೀಡಿದ ಮಾರ್ಗದರ್ಶನ ಎಲ್ಲರಿಗೂ ದಾರಿದೀಪವಾಗಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾಥರ್ಿಸಿದರು.