ಶಿಗ್ಗಾವ್

ಡಾ.ಶಿವಕುಮಾರಶ್ರೀ ವಿಶ್ವಕ್ಕೆ ಬೆಳಕು ನೀಡಿದ ಜ್ಯೋತಿ: ಗುರು ಸಂಗನಬಸವ

ಡಾ.ಶಿವಕುಮಾರಶ್ರೀ ವಿಶ್ವಕ್ಕೆ ಬೆಳಕು ನೀಡಿದ ಜ್ಯೋತಿ: ಗುರು ಸಂಗನಬಸವ

ಲೋಕದರ್ಶನ ವರದಿ

ಶಿಗ್ಗಾವಿ 22ಃ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ವಿಶ್ವಕ್ಕೆ ಬೆಳಕು ನೀಡಿದ ಜ್ಯೋತಿಯಾಗಿದ್ದಾರೆ, ಜೊತೆಗೆ ಶತಮಾನದ ಮಹಾಯೋಗಿ, ಮಾತೃ ಹೃದಯಿ, ಭಕ್ತಿ ತತ್ವದ ಮಹಾನ್ ಚೇತನ ಎಂದು ಯರನಾಳದ ಗುರು ಸಂಗನಬಸವ ಮಹಾ ಸ್ವಾಮಿಗಳು ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ವಿರಕ್ತಮಠ ಶಿಗ್ಗಾವಿ ಹಾಗೂ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತವಾಗಿ ಹಮ್ಮಿಕೊಂಡ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳ ಭಕ್ತಿಪೂರ್ವಕ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು.

ನಂತರ ಮಾತನಾಡಿದ ಅವರು ಶ್ರೀಗಳು ಆಧ್ಯಾತ್ಮದ ತುದಿಯನ್ನು ಮುಟ್ಟಿದ ಮಹಾನ್ ಪೂಜಾ ಸಾಧಕರು, ಬಸವಣ್ಣನವರ ನುಡಿಯನ್ನು ನಡೆಯಲ್ಲಿ ರೂಢಿಸಿಕೊಂಡವರು, ಇವರು ಕೇವಲ ಭಾರತ ರತ್ನ ಅಲ್ಲ, ವಿಶ್ವದ ರತ್ನ, ಜೊತೆಗೆ ವಿಶ್ವ ಗುರುಗಳಾಗಿದ್ದವರಾಗಿದ್ದಾರೆ, ಬಡ ಮಕ್ಕಳ ಬಾಳಿಗೆ ಬೆಳಕಾಗಿ ವಿದ್ಯಾದಾನಿಗಳಾದವರು, ವಿದ್ಯಾಸಂಸ್ಥೆ ಮತ್ತು ಮಕ್ಕಳಲ್ಲಿ ದೇವರನ್ನು ಕಂಡವರು, ಬಸವಣ್ಣನವರ ನಿಜ ಅನುಯಾಯಿಗಳಾದರು ಇದ್ದರು ಅದು ತುಮಕೂರಿನ ಸಿದ್ದಗಂಗಾ ಶ್ರೀಗಳು ಎಂದರು.

ಹಳೆ ಇಟಗಿ ವಿರಕ್ತಮಠದ ಗುರು ಮಡಿವಾಳ ಮಹಾಸ್ವಾಮಿಗಳು ಮಾತನಾಡಿ ಶ್ರೀಗಳು ಅವತಾರ ಪುರುಷರು ಇವರಿಗೆ ವಿಶ್ವರತ್ನ ಕೊಟ್ಟರು ಕಡಿಮೆಯೇ ಮಾನವ ಕುಲದ ಶ್ರೇಷ್ಟ ಮಹಾತ್ಮರು, ಸಮಾಜ ಸೇವೆ ಜೊತೆಗೆ ಬಡ ಮಕ್ಕಳಿಗೆ ಅನ್ನದ ಜೊತೆ ಜ್ಞಾನ ದಾನ ಮಾಡಿದ ದಾನವಂತರು ಎಂದರು.

ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ನಾಡು ಕಂಡ ಶಕ್ತಿವಂತ ಶ್ರೀಗಳು ಸಿದ್ದಗಂಗಾಮಠದ ಶ್ರೀಗಳು, ಅವರು ನಡೆದಾಡುವ ದೇವರಾಗಿ ಮಠದ ಮಕ್ಕಳಲ್ಲಿ ಸಾಕ್ಷತ್ ಶಿವನನ್ನು ಕಂಡವರು ಎಂದರು.

ಭರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಶ್ರೀಗಳು ಅಗಲಿಲ್ಲ ನಮ್ಮ ಜೊತೆಯಲ್ಲಿಯೇ ಇದ್ದಾರೆ ಅವರು ಶ್ರೇಷ್ಟ ಪೂಜ್ಯರು ಅವರ ಶ್ರೇಷ್ಟತೆಗೆ ನಾವೆಲ್ಲರೂ ಗೌರವ ಸಿಗುವಂತಹ ಕಾರ್ಯ ಮಾಡಬೇಕು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ಜನತೆ ಯಾವಾಗಲೋ ಕೊಟ್ಟಿದ್ದಾರೆ ಎಂದರು.

ಕಾಂಗ್ರೇಸ್ ಮುಖಂಡ ಗುರುನಗೌಡ ಪಾಟೀಲ ಮಾತನಾಡಿ ವೈದ್ಯಕೀಯ ಕ್ಷೇತ್ರಕ್ಕೆ ಸವಾಲೊಡ್ಡಿದ ದೇವರು ಶ್ರೀಗಳು ಎಂದು ಮಾಮರ್ಿಕವಾಗಿ  ಮಾತನಾಡಿದರು.

ಪುರಸಭೆ ಉಪಾದ್ಯಕ್ಷ ಪರಶುರಾಮ ಸೊನ್ನದ್, ಹಡಪದ ಸಮಾಜದ ಮುಖಂಡ ಮಲ್ಲಿಕಾಜರ್ುನ ಹಡಪದ ಮಾತನಾಡಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಪ್ರಮುಖರಾದ ತಿಪ್ಪಣ್ಣ ಸಾತಣ್ಣವರ, ವಿಶ್ವನಾಥ ವಾಲಿಶೇಟ್ಟರ್, ಪಾಲಾಕ್ಷಪ್ಪ ಹಾವಣಗಿ, ಸುಬಾಸ್ ಚೌಹಾಣ್, ನಾಗರಾಜ ಹಾವೇರಿ, ಬಸವರಾಜ ಶಿಗ್ಗಾವಿ, ಶಂಕರ್ ಅರ್ಕಸಾಲಿ, ರಮೇಶ ಸಾತಣ್ಣವರ, ಬಸವರಾಜ ಗೊಬ್ಬಿ, ನಿಂಗಣ್ಣ ಹರಿಜನ, ಸಂತೋಷ ಪಾಟೀಲ, ಬಸಲಿಂಗಪ್ಪ ನರಗುಂದ, ಅಶೋಕ ಕಾಳೆ, ಬಸವರಾಜ ಜೇಕಿನಕಟ್ಟಿ, ಮುತ್ತುರಾಜ ಕ್ಷೌರದ, ಬಸವರಾಜ ಹಂಚಿಮನಿ, ಸುರೇಶ ಹರಿಜನ, ಯಲ್ಲಪ್ಪ ಬಗಾಡೆ, ಶಂಕ್ರಗೌಡ ಪಾಟೀಲ, ಬಸಲಿಂಗಪ್ಪ ಮಲ್ಲೂರ, ಮಾಲತೇಶ ಸಾಲಿ, ಪ್ರಕಾಶ ಕ್ಯಾಲಕೊಂಡ, ಬಸವರಾಜ ವಾಲ್ಮೀಕಿ, ಮಾರುತಿ ತಳವರ ಸೇರಿದಂತೆ ವಿವಿಧ ಸಮಾಜದ ಸಂಸ್ಥೆಗಳ ಪಧಾಧಿಕಾರಿಗಳು ಇದ್ದರು.

ಸುದ್ದಿ ಓದಿ