ರಾಷ್ಟ್ರೀಯ ಮತದಾನ ದಿನಾಚರಣೆ ಪ್ರಯುಕ್ತ ವಿದ್ಯಾಥರ್ಿಗಳಿಗೆ ಜಿಲ್ಲಾ ಮಟ್ಟದ ಸ್ಪಧರ್ೆ
ಲೋಕದರ್ಶನ ವರದಿ
ಬಳ್ಳಾರಿ 03:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ತನ್ನದೇ ಆದ ಮಹತ್ವವಿದ್ದು, ಮತದಾನದ ಅನುಪಾತವನ್ನು ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತ ಸಕರ್ಾರವು ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ 25ರಂದು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನವರಿ 1ರಂದೇ ರಾಷ್ಡ್ರೀಯ ಮತದಾನ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್ವತಿಯಿಂದ ಮತದಾನವನ್ನು ಕುರಿತಂತೆ ಕಾಲೇಜು ವಿದ್ಯಾಥರ್ಿಗಳಿಗೆ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.
ಬಳ್ಳಾರಿಯ ಸರಳಾದೇವಿ ಕಾಲೇಜು ಸೇರಿದಂತೆ ಎಲ್ಲ ಸಕರ್ಾರಿ ಪ್ರಥಮ ದಜರ್ೆ ಕಾಲೇಜುಗಳು, ಅನುದಾನಿತ, ಅನುದಾನರಹಿತ, ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಅಂತರ ಕಾಲೇಜು ಮಟ್ಟದಲ್ಲಿ ಯುವ ವಿದ್ಯಾಥರ್ಿಗಳಿಗೆ ಪ್ರಬಂಧ ಸ್ಪಧರ್ೆ, ಭಿತ್ತಿ ಚಿತ್ರ ರಚಿಸುವುದು, ಭಾಷಣ ಸ್ಪಧರ್ೆ, ರಸ ಪ್ರಶ್ನೆ ಮತ್ತು ಕೋಲೆಜ್ ಮೇಕಿಂಗ್ ಬಗ್ಗೆ ಸ್ಪಧರ್ೆಗಳನ್ನು ನಡೆಸಲಾಗಿದೆ ಎಂದು ಸ್ವೀಪ್ ಮುಖ್ಯಸ್ಥರು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ., ಸ್ವೀಪ್ ಸಮಿತಿಯ ಸದಸ್ಯರಾದ ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಯು.ಅಬ್ದುಲ್ ಮುತಾಲಿಬ್ ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಾದ್ಯಂತ ಕಾಲೇಜು ಮಟ್ಟದಲ್ಲಿ ವಿಭಿನ್ನ ಸ್ಪಧರ್ೆಗಳನ್ನು ನಿರ್ವಹಿಸಿ ವಿಜೇತರ ಪಟ್ಟಿಯನ್ನು ಜಿಲ್ಲಾ ಸ್ವೀಪ್ ಸಮಿತಿ ಬಂದಿದ್ದು, ಆ ಪಟ್ಟಿಯಲ್ಲಿ ಅತ್ಯುತ್ತಮವಾಗಿ ತಮ್ಮ ಪ್ರತಿಭೆಯನ್ನು ತೋರಿದ ವಿದ್ಯಾಥರ್ಿಗಳನ್ನು ಆಯ್ಕೆ ಮಾಡಿ ಅವರಲ್ಲಿ ಪ್ರತಿಯೊಂದು ಪ್ರಕಾರದಲ್ಲಿ ಮೂವರನ್ನು ಆಯ್ಕೆಮಾಡಲಾಗಿದೆ. ವಿಜೇತರ ಪಟ್ಟಿ ಈ ಕೆಳಗಿನಂತಿದೆ
ಪ್ರಬಂಧ ಸ್ಪಧೆಯಲ್ಲಿ ಅತಿಯಾ ಬೇಗಂ, ಪ್ರಥಮ, ಎಸ್ಯುಬಿಎನ್. ಥಿಯೋಸಾಫಿಕಲ್ ಕಾಲೇಜು, ಹೊಸಪೇಟೆ, ರಂಜಿತ ಎನ್, ದ್ವಿತೀಯ ಸ್ಥಾನ, ಬಿ.ಇ, ಮೊದಲ ವರ್ಷ, ಆರ್.ವೈ.ಎಂ.ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ, ಅನಿತ.ಕೆ. ತೃತೀಯ ಸ್ಥಾನ, ಸರಳಾದೇವಿ ಕಾಲೇಜು, ಬಳ್ಳಾರಿ,
ಎಲೋಕೇಷನ್ ಸ್ಪಧರ್ೆ,ಯಲ್ಲಿ ಪೂಜಿತ. ಎನ್. ಪ್ರಥಮ ಸ್ಥಾನ, ಬಳ್ಳಾರಿ ಸರಳಾದೇವಿ ಕಾಲೇಜು, ಪ್ರವೀಣ್ ಕುಮಾರ್ ದ್ವಿತೀಯ ಸ್ಥಾನ ಹೊಸಪೇಟೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜು, ವಿಶಾಲ್ ವಿನಾಯಕ್ ಕಾಮತ್, ತೃತೀಯ ಸ್ಥಾನ ವಿ.ವಿ.ಎಸ್. ಕಾಲೇಜು ಬಳ್ಳಾರಿ,
ಭಿತ್ತಿ ಚಿತ್ರ ರಚನೆ ಸ್ಪಧರ್ೆಯಲ್ಲಿ ಶ್ರೀಕಾಂತ್, ಪ್ರಥಮ ಸ್ಥಾನ, ಕೆ.ಅನಿತ, ದ್ವೀತಿಯ ಸ್ಥಾನ, ಅವಿನಾಶ್ ಇ. ತೃತೀಯ ಸ್ಥಾನ, ಈ ಮೂವರು ಸರಳಾದೇವಿ ಕಾಲೇಜಿನ ವಿದ್ಯಾಥರ್ಿಗಳಾಗಿದ್ದಾರೆ.
ಕೊಲೇಜ್ ಮೇಕಿಂಗ್ ಸ್ಪಧರ್ೆಯಲ್ಲಿ ಶ್ರೀಕಾಂತ ಪ್ರಥಮ, ಸ್ನೇಹ ಹೆಚ್.ಸಿ, ದ್ವಿತೀಯ, ರಾಜಶೇಖರ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ರಸಪ್ರಶ್ನೆ ಸ್ಪಧರ್ೆಯಲ್ಲಿ ಸರಳಾದೇವಿ ಕಾಲೇಜಿನ ಸ್ನಾತಕೋತ್ತರ ವಿದ್ಯಾಥರ್ಿಗಳಾದ ತಿಪ್ಪೇಸ್ವಾಮಿ ಪ್ರಥಮ, ಗೋಪಾಲ್ ದ್ವಿತೀಯ ಹಾಗೂ ಬಿಎಸ್.ಸಿ ವಿದ್ಯಾಥರ್ಿ ಗೋವರ್ಧನ ಎನ್. ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಹಾಗೂ ವಿಜೇತ ವಿದ್ಯಾಥರ್ಿಗಳಿಗೆ ಜನವರಿ 25ರಂದು ರಾಷ್ಟ್ರೀಯ ಮತದಾನ ದಿನಾಚರಣೆಯ ಸಮಾರಂಭದಲ್ಲಿ ಗಣ್ಯರಿಂದ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸ್ವೀಪ್ ಸಮಿತಿಯ ಸದಸ್ಯರಾದ ಪ್ರೊ.ಯು.ಅಬ್ದುಲ್ ಮುತಾಲಿಬ್ ಅವರು ತಿಳಿಸಿದ್ದಾರೆ.