ಜಿಲ್ಲಾ ಮಟ್ಟದ ಕವಿಗೋಷ್ಟಿ ಕಾರ್ಯಕ್ರಮ
ಬಳ್ಳಾರಿ 01: ನಮ್ಮ ಭಾವನೆಗಳನ್ನು ಬಾಷೆಯ ಮೂಲಕ ಅರ್ಥಪೂರ್ಣವಾಗಿ ಅಭಿವ್ಯೆಕ್ತ ಪಡಿಸುವ ಮಾದ್ಯಮವೇ ಕಾವ್ಯವಾಗಿದೆ ಎಂದು ಲೋಹಿಯ ಪ್ರಕಾಶನದ ಸಿ.ಚನ್ನಬಸ್ಸಣ್ಣ ಅಭಿಪ್ರಾಯಪಟ್ಟರು. ನಗರದ ಕೊಟ್ಟುರುಸ್ವಾಮಿ ಶಿಕ್ಷಣ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕವಿಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಬಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಪಂಪ. ರಣ್ಣ, ಸೇರಿದಂತೆ ಅವರ ಸಮಕಾಲಿನವರು ಸರ್ವಕಾಲಿಕರು ಎಂದರು. ಅಕ್ಷರವಂಚಿತ ಸಮೂದಾಯಗಳ ಮನದಾಳದಿಂದ ತೆರೆದುಕೊಂಡಿದ್ದು ಜನಪದ ಕಾವ್ಯ ಜಗತ್ತು ಎಂದ ಅವರು ಕಾವ್ಯಅಭ್ಯಾಸ ಮಾಡಲು ತಾಳ್ಮೆ ಬೇಕು. ಜ್ಞಾನ ಶಕ್ತಿಗಾಗಿ ಆಧ್ಯಯನ ಮಾಡಿದರೆ ಮಾತ್ರ ಒಬ್ಬ ಉತ್ತಮ ಕಾವ್ಯ ಆಸ್ಪಾದನೆಯ ವ್ಯೆಕ್ತಿ ಆಗಲು ಸಾದ್ಯ ಎಂದರು. ಕುವೆಂಪು ಒಬ್ಬ ದಾರ್ಷನಿಕ ಪ್ರಗತಿ ಶೀಲ ಕ್ರಾಂತಿಕಾರಿ ಬಂಡಾಯ ಕವಿಯಾಗಿದ್ದಾರೆ.
ಯಾರು ದಲಿತ ಕವಿಯಾಗಲು ಸಾದ್ಯವಿಲ್ಲ. ದಲಿತಪರ ಖಾಳಜಿ ಮಾಡಬಹುದು. ಅವರು ಕಂಡ ನೋವನ್ನು ಅವರೇ ವ್ಯೆಕ್ತ ಪಡಿಸಿದರೇ ಮಾತ್ರ ಸಾದ್ಯ. ಪದ್ಯ ರಚನೆಕಾರರೆಲ್ಲಾ ಕವಿಗಳಾಗುವುದಿಲ್ಲ. ಕವಿಗಳೆಲ್ಲಾ ಪದ್ಯ ರಚನೆಕಾರರು ಎಂದರು. ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ 21ನೇ ಶತಮಾನದ ಕಾವ್ಯ, ಎಲ್ಲಾ ಅಕ್ಷರವಂಚಿತ ಸಮೂದಾಯಗಳು ಅಕ್ಷರಲೋಕಕ್ಕೆ ಪ್ರವೇಶ ಮಾಡುತ್ತಿರುವ ಸಂದರ್ಭ ಮತ್ತು ಅವರ ಸಾಹಿತ್ಯ ಕೃತಿಗಳನ್ನು ನೋಡಬಹುದು. ಕಾವ್ಯ ಪರಂಪರೆ ಸಮೃದ್ದವಾಗಿದೆ. ಕಾವ್ಯ ಹಂತರಂಗದ ಪಿಸುಮಾತು. ನಮ್ಮ ಜನರು ಬದುಕಿನ ಹಲವು ಆಯಾಮಾನಗಳನ್ನು ಜನಪದ ಹುಡುಕಾಟದಲ್ಲಿ ಕಟ್ಟಿಕೊಡಲಾಗಿದೆ. ಸಾಹಿತಿ ಎ.ವೃಷವೇಂದ್ರ ಆಚಾರ ಅಧ್ಯಕ್ಷತೆ ವಹಿಸಿದ್ದರು. ಕುಡ್ಲಿಗೆಯ ಜಿ.ಟಿ.ಸಂಗಮ್, ಎನ್.ಎಂ ವಾಮದೇವಯ್ಯ, ಎ.ಯರಿಸ್ವಾಮಿ, ಹೊಸಪೇಟೆಯ ದಯಾನಂದಪುರಿ ಕಿನ್ನಾಳ, ಜಿ.ವಿ ಸುಬ್ಬರಾವ್, ಕುರುಗೋಡಿನ ಎಂ.ಬಿ.ಹುಲಿಗೇಶ, ಎಂ.ಎಲ್.ಮಂಗಳ, ಹೆಚ್.ಬಿ.ಹಳ್ಳಿಯ ನಗರಾಜ, ತಮ್ರಳ್ಳಿಯ ಶೈಲಾ.ಪಿ ಹಾಡುರು ಶಟ್ಟರ್, ಹಡಗಲಿಯ ಪುಟ್ಟಪ್ಪ ತಂಬೂರಿ, ಆಲಪ್ಪ ಚಿಟಗೇರಿ, ಬಿ.ಮಂಜಣ್ಣ, ಸೊಂಡುರಿನ ವೀಣಾ ಮಹೇಶ, ಕೊಟ್ಟುರಿನ ಸಿದ್ದು ದೇವರಮನೆ,
ಈ ಕವಿಗೋಷ್ಟಿಯಲ್ಲಿ ಭಾಗವಹಿಸಿ ಕವನವಚನ ಮೂಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯಕ ನಿಧರ್ೇಶಕ ಬಿ.ನಾಗರಾಜ ಮತ್ತು ವಾತರ್ಾ ಇಲಾಖೆಯ ಹಿರಿಯ ಸಹಾಯಕ ನಿಧರ್ೇಶಕ ಬಿ.ಕೆ.ರಾಮಲಿಂಗಪ್ಪ, ಎ.ಸತೀಶ್ ಹಿರೆಮಠ, ಆಮಾತಿ ಬಸವರಾಜ ಸೇರಿದಂತೆ ನೂರಾರು ಕವಿಗಳು, ಸಾಹಿತಿಗಳು ಕವಿಗೋಷ್ಟಿ ಹಿತಾಸಕ್ತರು ವಿದ್ಯಾಥರ್ಿಗಳು ಭಾಗವಹಿಸಿದ್ದರು.