ಜಮಖಂಡಿ

ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ ಮನವಿ

ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ ಮನವಿ

ಲೋಕದರ್ಶನ ವರದಿ,

ಜಮಖಂಡಿ22: ತಾಲೂಕಿನಲ್ಲಿನರುವ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ, ಸಾವಳಗಿ ಭಾಗದ ನೂರಾರು ರೈತರು ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಅವರಿಗೆ ಮನವಿ ಸಲ್ಲಿಸಿದರು.

ಈ ವರ್ಷ ಮುಂಗಾರು ಮಳೆ ಬಾರದೇ ಇರುವದರಿಂದ ಬಬಲೇಶ್ವರ ಮತಕ್ಷೇತ್ರ ಹಾಗೂ ಜಮಖಂಡಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಹಿಂದಿನ ವರ್ಷ ಸಕಾಲದಲ್ಲಿ ಕಾಲುವೆಗೆ ನೀರು ಹರಿಸಿರುವದರಿಂದ ದ್ರಾಕ್ಷಿ ಬೆಳೆಯಲು ಅನುಕೂಲವಾಗಿದ್ದು, ಈ ವರ್ಷ ಮುಂಗಾರು ವೈಪಲ್ಯದಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈಗ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ಸುಮಾರು 60 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಕೂಡಲೇ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಬೇಕೆಂದು ದ್ರಾಕ್ಷಿ ಬೆಳೆಗಾರರಾದ ಅಭಯಕುಮಾರ ನಾಂದ್ರೇಕರ, ಟ.ಎನ್.ಪವಾರ, ಅರ್ಜುನ ದಳವಾಯಿ, ಮಹಾದೇವ ಚವ್ಹಾಣ, ಶಾಂತಿನಾಥ ನ್ಯಾಮಗೌಡ, ಪರಪ್ಪ ಮಾಳಿ ಅನೇಕರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ