ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು: ಶ್ರೀಶೈಲಗೌಡ ಮಾಗಣಗೇರಿ
ಸಿಂದಗಿ29: ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಪಂದ್ಯದಲ್ಲಿ ಸೋತವರು ಕುಗ್ಗಬೇಡಿ. ಗೆದ್ದವರು ಹಿಗ್ಗಬೇಡಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಬಿಜೆಪಿಯ ಮುಖಂಡ ಶ್ರೀಶೈಲಗೌಡ. ಮಾಗಣಗೇರಿ. ಹೇಳಿದರು.
ತಾಲೂಕಿನ ಯರಗಲ್ಲ ಬಿಕೆ ಗ್ರಾಮದ. ಕಾಳಿಕಾ ದೇವಿಯ ದೇವಸ್ಥಾನದ ಮ್ಯದಾನದಲ್ಲಿ ನಡೆದ ಟೆನ್ನಿಸ್ ಬಾಲ ಕ್ರಿಕೇಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆ ಎಂಬುದು ಯಾರೊಬ್ಬರ ಸೊತ್ತಲ್ಲ ಪ್ರತಿಯೊಂದು ರಂಗದಲ್ಲಿ ಪ್ರತಿಭಾವಂತರು ಇದ್ದೆಇರುತ್ತಾರೆ. ಆದರೆ ಅಂತಹ ಪ್ರತಿಭೆ ಗಳನ್ನು ಗುರತಿಸವ ಕಾರ್ಯ ಮಾಡುವುದು ಅವಶ್ಯಕವಾಗಿದೆ. ಅಂತಹ ಕೆಲಸವನ್ನು ಯರಗಲ್ ಗ್ರಾಮದ ಯುವಕರು ಮಾಡುತ್ತಿದ್ದು. ಅವರ ಈ ಕಾರ್ಯ ಶ್ಲಾಗನೀಯ ಎಂದರು.
ಮತ್ತು ಪಂದ್ಯದಲ್ಲಿ ಭಾಗವಹಿಸಿ ಪ್ರತಮ ಸ್ಥಾನ ಪಡೆದ ತಂಡಕ್ಕೆ 55 ಸಾವಿರ ರೂ, ಎರಡನೇಯ ಸ್ಥಾನಕ್ಕೆ ರೂ 25ಸಾವಿರ ಮತ್ತು ತೃತೀಯ ಸ್ಥಾನಕ್ಕೆ ರೂ 15ಸಾವಿರ ನಗದು ಬಹುಮಾನ ಕೊಡಲಾಗುವದು ಎಂದರು.
ಜಿಪಂ ಸದಸ್ಯ ಮಹಾಂತಗೌಡ ಎಸ್.ಪಾಟೀಲ. ಯಂಕಂಚಿ ಮಾತನಾಡಿ ಪ್ರತಿಯೊಬ್ಬ ಕ್ರೀಡಾ ಸದಸ್ಯರು ಅತ್ಯಂತ ಜಾಗ್ರತೆಯಿಂದ ಪಂದ್ಯಗಳನ್ನು ಆಡಿ. ಮುಂದಿನ ದಿನಗಳಲ್ಲಿ ನಿಮ್ಮನ್ನು ರಾಜ್ಯಮಟ್ಟದ ಪಂದ್ಯಗಳಲ್ಲಿ ನೋಡುವಂತಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಸಾಪ. ತಾಲೂಕ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ. ಪ್ರತಿಯೊಬ್ಬ ಕ್ರೀಡಾ ಪಟುಗಳು ಪಂದ್ಯಾವಳಿಯ ನಿಯಮಕ್ಕೆ ಬದ್ದರಿರಬೇಕು. ಮತ್ತು. ನಿಣರ್ಾಯಕರು ಕೊಡುವ ಪ್ರತಿಯೊಂದು ತೀರ್ಪುಗೆ ಸಹಕರಿಸಬೇಕು ಎಂದರು.
ಕಾಳಿಕಾ ದೇವಸ್ಥಾನದ ಅರ್ಚಕರಾದ ಮಲ್ಲಯ್ಯ ಮುತ್ಯಾ ಪುಜಾರಿ, ಬಸಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡ ಮಹಿಬೂಬಸಾಬ ತಾಂಬೋಳಿ, ಪ್ರವಿಣ ಕಂಠಿಗೊಂಡ, ಗುರುಲಿಂಗಪ್ಪಗೌಡ ಪಾಟೀಲ ಸೇರಿದಂತೆ ಇನ್ನೂ ಅನೇಕರು ಗಣ್ಯಮಾನ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಗುರುಲಿಂಗಪ್ಪಗೌಡ ಪಾಟೀಲ, ಶಿವು ಬದರಿ, ರವಿಗೌಡ ಬಿರಾದಾರ, ಈರಯ್ಯ ಮಠ, ಶಂಕರಲಿಂಗ ಕಡಲಗೊಂಡ, ದೇವು ಪಾರಗೊಂಡ, ಸೈಪನ ಜಮಾದಾರ, ಖಾದಿರ ಬಂಕಲಗಿ, ಸೇರಿದಂತೆ ಅನೇಕ ಊರಿನ ಗ್ರಾಮಸ್ಥರು ಪಂದ್ಯಾವಳಿಯನ್ನು ವಿಕ್ಷಿಸಿದರು.
ಪೋಟೋ : ಬಿಜೆಪಿಯ ಮುಖಂಡ ಶ್ರೀಶೈಲಗೌಡ. ಮಾಗಣಗೇರಿರವರು ಯರಗಲ್ಲ ಬಿಕೆ ಗ್ರಾಮದ. ಕಾಳಿಕಾ ದೇವಿಯ ದೇವಸ್ಥಾನದ ಮ್ಯದಾನದಲ್ಲಿ ನಡೆದ ಟೆನ್ನಿಸ್ ಬಾಲ ಕ್ರಿಕೇಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು