ದಾಸ ಶ್ರೇಷ್ಠ ಕನಕದಾಸರ ಜಯಂತಿ ಸಮ ಪಾಲು, ಸಮ ಬಾಳು ಎಂಬ ನೀತಿ ನಮ್ಮ ಜೀವನ ಸಿದ್ದಾಂತವಾಗಬೇಕು: ಎಂ.ಎಸ್.ದಿವಾಕರ
ದಾಸ ಶ್ರೇಷ್ಠ ಕನಕದಾಸರ ಜಯಂತಿ ಸಮ ಪಾಲು, ಸಮ ಬಾಳು ಎಂಬ ನೀತಿ ನಮ್ಮ ಜೀವನ ಸಿದ್ದಾಂತವಾಗಬೇಕು: ಎಂ.ಎಸ್.ದಿವಾಕರ
ವಿಜಯನಗರ (ಹೊಸಪೇಟೆ) 18: ಮಹಾನ್ ಕವಿ, ದಾರ್ಶನಿಕ, ಹಾಗೂ ಹರಿದಾಸ ಪರಂಪರೆಯ ಪ್ರಸಿದ್ಧ ಸಂಗೀತಗಾರರಾದ ಕನಕದಾಸರ ಪುತ್ಥಳಿಗೆ ನವಂಬರ್ 18 ರಂದು ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಮಾಲಾರೆ್ಣ ಮಾಡಿದರು.
ನಂತರ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ನಡೆದ ಕನಕದಾಸರ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ ಆಧ್ಯಾತ್ಮಿಕ ತವರೂರು. ಅದಕ್ಕೆ ಕಾರಣ ದಾಸ ಶ್ರೇಷ್ಠ ಕನಕದಾಸರು. ಸಮ ಪಾಲು, ಸಮ ಬಾಳು ಎಂಬ ನೀತಿಯನ್ನು ಜಗತ್ತಿಗೆ ಸಾರಿದವರು ಕನಕದಾಸರು. ಬಾಗೇನಹಳ್ಳಿಯಲ್ಲಿ ತಿಮ್ಮಪ್ಪನಾಯಕ ನಾದ ಅವರು ವಿಜಯನಗರದಲ್ಲಿ ಪುರಂದರದಾಸರ ಕೃಪೆಗೆ ಪಾತ್ರರಾಗಿ ಕನಕದಾಸರಾಗುತ್ತಾರೆ. ಅವರು ಸಂತನಾಗಿ ಸಾಹಿತ್ಯಗಳನ್ನು, ದಾರ್ಶನಿಕ ಕಾವ್ಯಗಳನ್ನು ರೂಪಿಸಿಸುತ್ತಾ, ಅದರ ಜೊತೆಗೆ 78 ಗ್ರಾಮಗಳನ್ನು ಆಡಳಿತ ಮಾಡುತ್ತಿದ್ದರು ಎಂಬುದು ವಿಶೇಷ ಎಂದರು.
ಕನಕದಾಸರು ಭಕ್ತಿಯ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರಿದರು. ಕನಕದಾಸರ ಜೀವನ ಮತ್ತು ಕಾವ್ಯಗಳು ನಮ್ಮನ್ನು ಸತ್ಪಥದಲ್ಲಿ ನಡೆಸುತ್ತವೆ, ಏಕತೆ ಮತ್ತು ದಯೆ ನಮ್ಮ ಜೀವನದ ಪ್ರಮುಖ ಅಂಶಗಳಾಗಿರಬೇಕು ಎಂಬುದನ್ನು ತೋರಿಸುತ್ತವೆ. ಈ ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಈಗೆ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕನಕದಾಸರ ಸಾಹಿತ್ಯಗಳನ್ನು ಓದುತ್ತಾ ಆಧ್ಯಾತ್ಮ ಚಿಂತನೆಗಳು ಬೆಳೆಸಿಕೊಳ್ಳಬೇಕು ಎಂದ ಹೇಳಿದರು.
ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್. ಅವರು, ಕನಕದಾಸರು ಕರ್ನಾಟಕದ ಪ್ರಸಿದ್ಧ ಸಂತ, ಕವಿ, ಮತ್ತು ದಾರ್ಶನಿಕರು. ಅವರ ಜೀವನ ಮತ್ತು ಸಾಹಿತ್ಯವು ನಮ್ಮ ಜೀವನಕ್ಕೆ ಅತ್ಯಂತ ಪ್ರೇರಣಾದಾಯಕವಾಗಿದೆ. ಅವರು ತಮ್ಮ ಕಾವ್ಯಗಳಲ್ಲಿ ಮಾನವತೆ, ಧರ್ಮ, ನ್ಯಾಯ, ಮತ್ತು ಶ್ರದ್ಧೆಗಳನ್ನು ಪ್ರೋತ್ಸಾಹಿಸಿದ್ದಾರೆ. ಇವರ ಆದರ್ಶ ಮಾತುಗಳು ನಮ್ಮ ಜೀವನವನ್ನು ಮಾರ್ಗದರ್ಶನ ಮಾಡುತ್ತವೆ. ಕನಕದಾಸರು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ಕನ್ನಡದಲ್ಲಿ ಕೀರ್ತನೆಗಳು, ಸಾಹಿತ್ಯಗಳು ಹಾಗೂ ದಾರ್ಶನಿಕ ಕಾವ್ಯಗಳು ರೂಪಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಭೀಮಪ್ಪ ಲಾಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್, ಹೊಸಪೇಟೆ ತಹಶೀಲ್ದಾರರಾದ ಶೃತಿ ಎಂ.ಎಂ., ನಗರಸಭೆಯ ಪೌರಾಯುಕ್ತರಾದ ಚಂದ್ರ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ ರಂಗಣ್ಣವರ ಹಾಗೂ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಯ್ಯಾಳಿ ತಿಮ್ಮಪ್ಪ ಸೇರಿದಂತೆ ಹಲವು ಸಮಾಜದ ಮುಖಂಡರು ಉಪಸ್ಥಿತರಿದ್ದರು.