ಸಜಾ ಬಂಧಿಗಳಿಂದ ದನಕಾಯೋರ ದೊಡ್ಡಾಟ ಹಾಸ್ಯ ನಾಟಕ ಪ್ರದರ್ಶನ

ಸಜಾ ಬಂಧಿಗಳಿಂದ ದನಕಾಯೋರ ದೊಡ್ಡಾಟ ಹಾಸ್ಯ ನಾಟಕ ಪ್ರದರ್ಶನ

ಲೋಕದರ್ಶನ ವರದಿ

ಬಳ್ಳಾರಿ,ಜ.13: ನಾನಾ ಅಪರಾಧಗಳನ್ನು ಮಾಡಿ ಜೈಲು ಸೇರಿದ ಸಜಾ ಬಂಧಿಗಳಲ್ಲಿ ಅಡಗಿರುವ ಕಲೆಯನ್ನು ಹೊರ ತರುವ ನಿಟ್ಟಿನಲ್ಲಿ ಕಲಾವಿದ ಪುರುಷೋತ್ತಮ ಹಂದ್ಯಾಳ್ ಪ್ರಯತ್ನಿಸಿ ಅವರಿಂದ ನಾಟಕ ಪ್ರದಶರ್ಿಸಿರುವುದು ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ.ಬಿ.ಸಿ.ಬಿರಾದಾರ ಹೇಳಿದರು. ನಗರದ ಕೇಂದ್ರ ಕಾರಗೃಹದಲ್ಲಿ ಸೋಮಸಮುದ್ರದ ಬಸವೇಶ್ವರ ಬಯಲಾಟ ನಾಟ್ಯ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಾದೇವತಾತಾ ಕಲಾ ಸಂಘದ ಅಧ್ಯಕ್ಷರು ಹಾಗೂ ರಂಗ ಕಲಾವಿದರಾದ ಪುರುಷೋತ್ತಮ ಹಂದ್ಯಾಳ ನಿದರ್ೆಶಿಸಿದ ದನಕಾಯೋರ ದೊಡ್ಡಾಟ ಹಾಸ್ಯ ನಾಟಕ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಕೈದಿಗಳಿಗೆ ನಿರಂತರವಾಗಿ ಒಂದು ತಿಂಗಳಿಂದ ತರಬೇತಿ ನೀಡಿ ನಾಟಕವನ್ನು ಯಶಸ್ವಿ ಪ್ರದರ್ಶನಗೊಳಿಸಿರುವುದು ಸಂತಸ ತಂದಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಬಿ.ಹಂದ್ರಾಳ್ ಮಾತನಾಡಿ, ಕೈದಿಗಳು ಜೈಲಿನಲ್ಲಿ ಪುಸ್ತಕ ಓದುವ ಹವ್ಯಾಸ, ಬರೆಯುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಸಾಹಿತ್ಯಾಸಕ್ತಾತ್ಮಕ ವಾತಾವರಣವನ್ನು ಬೆಳೆಸಬೇಕು. 

ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಕ್ರೀಯಾಶೀಲರಾಗಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕ ಬಿ.ನಾಗರಾಜ ಮಾತನಾಡಿ, ಶ್ರೀ ಮಹಾದೇವತಾತಾ ಕಲಾ ಸಂಘದ ಕಲಾವಿದ ಪುರುಷೋತ್ತಮ ಹಂದ್ಯಾಳ ಕೇವಲ ಪೌರಾಣಿಕ ನಾಟಕಗಳಿಗೆ ಮಾತ್ರ ಸೀಮಿತವಾಗದೇ ಒಂದು ಹೆಜ್ಜೆ ಮುಂದಾಗಿ ಕೈದಿಗಳಿಂದ ಸಹ ಹಾಸ್ಯ ನಾಟಕ ಪ್ರದಶರ್ಿಸಿರುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈದಕ್ಕೆ ಇಲಾಖೆಯಿಂದ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದರು. 

ಕೇಂದ್ರ ಕಾರಗೃಹದ ಅಧೀಕ್ಷಕ ಪಿ.ರಂಗನಾಥ ಅಧ್ಯಕ್ಷತೆವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳು ಅವಕಾಶ ನೀಡಿದಲ್ಲಿ ಸಜಾ ಬಂಧಿಗಳಿಂದ ನಾಟಕ ಪ್ರದರ್ಶನದಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ತಾಪಂ ಇಒ ಜಾನಕಿರಾಮ್, ಶ್ರೀ ಬಸವೇಶ್ವರ ಬಯಲಾಟ ನಾಟ್ಯ ಕಲಾ ಸಂಘದ ಅಧ್ಯಕ್ಷ ಡಿ.ಪುರುಷೋತ್ತಮ ಗೌಡ ಇತರರಿದ್ದರು. ನಾಟಕ ಪ್ರದರ್ಶನ: ಪುರುಷೋತ್ತಮ ಹಂದ್ಯಾಳ ಸಜಾ ಬಂಧಿಗಳಿಂದ ನಡೆದ ದನಕಾಯೋರ ದೊಡ್ಡಾಟ ಹಾಸ್ಯ ನಾಟಕ ನೆರೆದಿದ್ದ ನ್ಯಾಯಾದೀಶರ, ಕೈದಿಗಳನ್ನು ನಗೆಕಡಲಲ್ಲಿ ತೇಲಾಡಿಸಿತ್ತು. ನಾಟಕದಲ್ಲಿ ನಿದರ್ೇಶನ ಪುರುಷೋತ್ತಮ ಮಾಸ್ತರ್ ಅಭಿನಹಿಸಿದರು, ಸಜಾ ಬಂಧಿಗಳಾದ ಜಯದೇವಪ್ಪ(ದುಯರ್ೊದನ), ದುರ್ಗಪ್ಪ(ದುಶ್ಯಾಸನ), ಗೌಡರ ತಿಪ್ಪೇಶ(ಭೀಮ), ಪರಮೇಶ್(ನಕುಲ), ಗಣೇಶ ಭಜಂತ್ರಿ(ಸಹದೇವ), ನೀಲಕಂಠ(ಕೃಷ್ಣ), ಕೆಕೆ ಹಾಳ್ ಮಲ್ಲಯ್ಯ(ಗೌಡ್ರು), ಯು.ಹುಲುಗಪ್ಪ(ಗಣೇಶ), ಸಿದ್ಧರೂಢ(ದ್ರೌಪತಿ), ಪರಸಪ್ಪ(ಅಗಸ) ಪಾತ್ರಧಾರಿಗಳಾಗಿ ಕಾರ್ಯನಿರ್ವಹಿಸಿದರು. ತಬಲ ಮತ್ತು ಹಾರಮರ್ೊನಿಯಂ ಗಣೇಶ, ಅಂದಾನಪ್ಪ ತಬಲ, ಪ್ರಸಾದನ, ವಸ್ತ್ರಾಲಂಕಾರ ಪಾರ್ವತೀಶ್, ಜಡೆಪ್ಪ, ಸುಂಕಪ್ಪ ಸಾಥ್ ನೀಡಿದರು.


ಸುದ್ದಿ ಓದಿ