ನ.27ರಂದು ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮ

ನ.27ರಂದು ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮ

ಬಳ್ಳಾರಿ24: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಂಗಭೂಮಿ ಕಲಾವಿದೆ ಶ್ರೀಮತಿ ಪಿ.ಪದ್ಮಾ ಕೂಡ್ಲಿಗಿ ಅವರ ಜೀವನ ಸಾಧನೆ ಕುರಿತು ನ.27 ರಂದು ಬಳ್ಳಾರಿಯ ಬಾಲಕಿಯರ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಬಿ.ನಾಗರಾಜ ಅವರು ತಿಳಿಸಿದ್ದಾರೆ.

ಹಿರಿಯ ರಂಗಭೂಮಿ ಕಲಾವಿದರಾದ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ರಂಗಭೂಮಿ ಮತ್ತು ತೊಗಲುಗೊಂಬೆ ಕಲಾವಿದರಾದ ನಾಡೋಜ ಬೆಳಗಲ್ ವೀರಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

     ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಕನರ್ಾಟಕ ನಾಟಕ ಅಕಾಡೆಮಿಯ ಸದಸ್ಯೆ   ಬಿ.ಶಿವಕುಮಾರಿ, ಬಾಲಕಿಯರ ಸಕರ್ಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರರಾದ ಕೆ.ಎಂ.ಮಹಾಲಿಂಗನಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

   ಜೀವನ ಮತ್ತು ಸಾಧನೆಯ ವಿಷಯದ ಕುರಿತು ಹಗರಿಬೊಮ್ಮನಹಳ್ಳಿಯ ಎ.ವಿರುಪಾಕ್ಷಪ್ಪ ಮೊರಗೇರಿ ಮತ್ತು ರಂಗಭೂಮಿ ಕ್ಷೇತ್ರದ ಕೊಡುಗೆಗಳ ವಿಷಯ ಕುರಿತು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ವಿಚಾರ ಸಂಕಿರಣ ನಡೆಸಲಿದ್ದಾರೆ.

      ರಮೇಶ ಗೌಡ ಪಾಟೀಲ್, ಎ.ವರಲಕ್ಷ್ಮೀ, ಎನ್.ಡಿ.ವೆಂಕಮ್ಮ, ಎಂ.ಅಹಿರಾಜ್ ಮತ್ತು ಅಣ್ಣಾಜಿ ಕೃಷ್ಣಾ ರೆಡ್ಡಿ ಅವರು ಸಂವಾದ ನಡೆಸಲಿದ್ದಾರೆ. ಕೆ.ಕಲ್ಯಾಣಿ ಅವರು ರಂಗ ಗೀತೆಗಳ ಗಾಯನ ಹಾಡಲಿದ್ದಾರೆ ಎಂದು ತಿಳಿಸಿದ್ದಾರೆ.


ಸುದ್ದಿ ಓದಿ