ನಿಯಮಾನುಸಾರ ಲೇಔಟ್ ನಿರ್ಮಾಣ ಮಾಡಿ ಫಲಾನುಬವಿಗಳಿಗೆ ನೀಡಿ : ಗಾಲಿ ಜನಾರ್ದನ ರೆಡ್ಡಿ
ಗಂಗಾವತಿ :ಕಾನೂನು ಗಿಂತ ಇಲ್ಲಿ ಯಾರು ದೊಡ್ಡವರಿಲ್ಲ, ಎಲ್ಲರೂ ಸಂವಿಧಾನಕ್ಕೆ ತಲೆ ಬಾಗಲೇಬೇಕು. ನಿಯಮಾನುಸಾರ ಆಟೋ ನಗರದ ಲೇಔಟ್ ನಿರ್ಮಾಣ ಮಾಡಿ ಫಲಾನುಬವಿಗಳಿಗೆ ನೀಡಿ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಪೌರಾಯುಕ್ತ ವಿರುಪಾಕ್ಷ್ ಮೂರ್ತಿ ಅವರಿಗೆ ಸೂಚಿಸಿದರು.
ಸೋಮವಾರದಂದು ಗಂಗಾವತಿ ನಗರದ ಆಟೋ ನಗರಕ್ಕೆ ಭೇಟಿ ನೀಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಲ್ಲಿಯ ಕೈಗಾರಿಕಾ ಉದ್ಯಮಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಲವತ್ತು ವರ್ಷಗಳ ಹಿಂದೆ ನಗರದ ಆಟೊ ನಗರದ ಲೇಔಟನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಲೋಪದೋಷಗಳು ಇದ್ದ ಕಾರಣ ನಿಮಗೆಲ್ಲರಿಗೂ ಸಮಸ್ಯೆ ಆಗಿದೆ. ಇದೀಗ ನಿಯಮಾನುಸಾರ ಲೇಔಟ್ ನಿರ್ಮಾಣ ಮಾಡಿ ಫಲಾನುಬವಿಗಳಿಗೆ ಹಂಚಿಕೆ ಮಾಡಲು ಸೂಚಿಸುತ್ತೇನೆ ಎಂದು ಸ್ಥಳದಲ್ಲೇ ಇದ್ದ ಪೌರಾಯುಕ್ತರಿಗೆ ಸೂಚಿಸಿದರು. ನೀವು ಹೇಳುವ ರೀತಿಯಲ್ಲಿ ನಿಯಮ ಬಿಟ್ಟು ಮಾಡಲು ಅವಕಾಶ ಇಲ್ಲ. ಕಾನೂನಿನ ಅಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ನಿಯಮಗಳ ಅಡಿಯಲ್ಲಿ ನಿಮಗೆ ನಾನು ಸಹಾಯ ಮಾಡುತ್ತೇನೆ ಎಂದರು.ಇದಕ್ಕೂ ಮೊದಲು ಆಟೋ ನಗರದ ಫಲಾನುಬವಿ ಶಿವಣ್ಣ ಮಾತನಾಡಿ ತಮಗಾದ ಅನ್ಯಾಯದ ಕುರಿತು ಶಾಸಕರ ಗಮನಕ್ಕೆ ತಂದರು, ನಲವತ್ತು ವರ್ಷಗಳಿಂದ ನಾವು ಇಲ್ಲಿ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ಆರಂಭದಲ್ಲಿ ನಮ್ಮಲ್ಲಿ ಹಣ ಪಡೆದು ನಿವೇಶನ ಕೊಡುವುದಾಗಿ ಹೇಳಿ ಅದರ ಪ್ರಕಾರ ನಿವೇಶನ ಹಂಚಿಕೆ ಮಾಡಿದ್ದರು, ಆದರೆ ಕಾನೂನಿನ ಪ್ರಕಾರ ಯಾವುದೇ ದಾಖಲಾತಿಗಳನ್ನು ನೀಡಿರಲಿಲ್ಲ, ಇದೀಗ ನಮ್ಮ ಹಕ್ಕಿಗೆ ತೊಂದರೆ ಒದಗಿ ಬಂದಿದೆ ಎಂದು ಶಾಸಕರ ಗಮನಕ್ಕೆ ತಂದರು.ಸಾರ್ವಜನಿಕರ ದೂರಿಗೆ ಸಂಬಂದಿ ಸಿದಂತೆ ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ ಮಾತನಾಡಿ ಆಟೋ ನಗರದ ಲೇಔಟ್ ವಿಷಯದಲ್ಲಿ ನ್ಯಾಯಾಲಯದಿಂದ ಕಂಟೆಂಪ್ಟ್ ಆಫ್ ಕೋರ್ಟ್ ಅಡಿಯಲ್ಲಿ ನೋಟೀಸ್ ಬಂದಿದೆ. ಈ ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿಗೆ ಮತ್ತು ನಿಯಮಗಳನ್ನು ಮೀರದ ಹಿನ್ನೆಲೆ ಆಟೋ ನಗರದ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಹೊಸದಾಗಿ ಲೇಔಟ್ ವಿನ್ಯಾಸ ಮಾಡಲಾಗಿ, ಆ ಪ್ರಕಾರ ಯೋಜನೆ ರೂಪಿಸಿ ಅರ್ಹ ಫಲಾನುಬವಿಗಳಿಗೆ ನೀಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥ್ , ಮನೋಹರ ಗೌಡ ಹೇರೂರು, ಭೀಮಾಶಂಕರ್, ಯಮನೂರು ಚೌಡಕಿ, ಹುಸನ್ ಭಾಷ, ಸೈಯದ್ ಅಲಿ, ಎಂ ಡಿ ಗೌಸ್, ಶಿವಣ್ಣ, ನಗರಸಭೆ ಪೌರಾಯುಕ್ತ ವಿರುಪಾಕ್ಷ್ ಮೂರ್ತಿ ಸೇರಿದಂತೆ ಆಟೋ ನಗರ ನಿವಾಸಿಗಳು ಉಪಸ್ಥಿತರಿದ್ದರು.