ವಾಹನ ಚಾಲನೆ ಮಾಡುವಾಗ ಜಾಗೃತ ವಹಿಸಿ: ಹಂದ್ರಾಳ್
ಬಳ್ಳಾರಿ 12: ವಾಹನ ಚಾಲನೆ ಮಾಡುವಾಗ ಅತಿ ಜಾಗೃತೆಯಿಂದ ನಡೆಸಿ ಇತರರ ಪ್ರಾಣದ ಜೊತೆಗೆ ಚೆಲ್ಲಾಟವಾಡಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಬಿ.ಹಂದ್ರಾಳ್ ಅವರು ಹೇಳಿದರು.
ನಗರದ ನಲ್ಲುಚೆರವು ಪ್ರದೇಶದಲ್ಲಿರುವ ಜಿಲ್ಲಾ ಈಜುಕೊಳ ಸಭಾಂಗಣದಲ್ಲಿ ಮಂಗಳವಾರ ಕಾಮರ್ಿಕ ಇಲಾಖೆ, ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ ಕಾಮರ್ಿಕರ ಸಹಾಯಹಸ್ತ ಯೋಜನೆಯಡಿಯಲ್ಲಿ ಖಾಸಗಿ ವಾಣಿಜ್ಯ ಚಾಲಕರಿಗೆ ಅಪಘಾತ ಜೀವ ರಕ್ಷಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಸ್ತೆಯಲ್ಲಿ ವಾಹನ ಚಾಲನೆ ಮಾಡಬೇಕಾದರೆ ಸ್ವಯಂ ಜಾಗೃತಿ ಜೊತೆಗೆ ಅಪಘಾತ ರಹಿತ ವಾಹನೆ ಚಾಲನೆ ರೂಡಿಸಿಕೊಳ್ಳಬೇಕೆಂದು ವಾಹನ ಚಾಲಕರಿಗೆ ಹೇಳಿದ ಅವರು ಜಿಲ್ಲಾ ಕಾಮರ್ಿಕ ಇಲಾಖೆಯ ಅಸಂಘಟಿತ ಕಾಮರ್ಿಕರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಅನೇಕ ಕಾಮರ್ಿಕರಿಗೆ ಜೀವನ ಕೌಶಲ್ಯ ಬದಲಾವಣೆಯಿಂದ ಕೌಶ್ಯಲದಲ್ಲಿ ಸದೃಢರಾಗಿದ್ದಾರೆ ಅದೇ ರೀತಿ ಖಾಸಗಿ ವಾಹನ ಚಾಲಕರು ಸಹ ಇದರ ತರಬೇತಿಯನ್ನು ಪಡೆದುಕೊಂಡು ತಮ್ಮ ಜೀವನ ಕೌಶಲ್ಯ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಮರ್ಿಕ ಇಲಾಖೆ ಅಧಿಕಾರಿ ಚಂದ್ರಶೇಖರ.ಎನ್.ಐಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಸಂಘಟಿತ ಕಾಮರ್ಿಕ ವಲಯಗಳಿಗೆ ಅಂಬೇಡ್ಕರ ಕಾಮರ್ಿಕ ಸಹಾಯಹಸ್ತ ಯೋಜನೆಯಡಿ ಖಾಸಗಿ ವಾಣಿಜ್ಯ ಚಾಲಕರಿಗೆ ಜೀವರಕ್ಷಕ ತರಬೇತಿಯಿಂದ ಖಾಸಗಿ ವಾಣಿಜ್ಯ ಚಾಲಕರಿಗೆ ಸಕರ್ಾರದ ಸವಲತ್ತುಗಳು ನೀಡಲಾಗುತ್ತಿದ್ದು, ಇದನ್ನು ಚಾಲಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮಾತನಾಡಿ, ಖಾಸಗಿ ವಾಣಿಜ್ಯ ಚಾಲಕರು ಚಾಲನೆ ಮಾಡಬೇಕಾದರೆ ಟ್ರಾಫಿಕ್ಸ್ ನಿಭಂದನೆಗಳನ್ನು ಪಾಲಿಸಬೇಕು ಎಂದರು.
ಜಿಲ್ಲಾ ಕಾಮರ್ಿಕ ಇಲಾಖೆಯ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ್ ಅವರು ಸ್ವಾಗತಿಸಿ ವಂದಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧಾಕ್ಷ ಮಹಿಪಾಲ್, ಕಾರ್ಯದಶರ್ಿ ಎಂ.ಷಕೀಬ್, ಕಾಮರ್ಿಕ ನಿರೀಕ್ಷಕರಾದ ಎಮ್.ರವಿದಾಸ್. ಬಾಲಕಾಮರ್ಿಕ ಯೋಜನೆ ನಿದರ್ೇಶಕ ಎ.ಮೌನೇಶ್ ಹಾಗೂ ನಡ್ಲಿಕೇರಿ ನಾಗರಾಜ್, ರಮೇಶ್, ಹೊನ್ನೂರಪ್ಪ, ಮಲ್ಲಯ್ಯ, ಕೋಟ್ರೇಶ್, ವಿಷ್ಣುಕುಮಾರ್ ಸೇರಿದಂತೆ ಇತರರು ಇದ್ದರು. ಈ ಸಂದರ್ಭದಲ್ಲಿ ಖಾಸಗಿ ವಾಣಿಜ್ಯ ಚಾಲಕರಿಗೆ ಕಿಟ್ ವಿತರಣೆ ಮಾಡಿದರು.