ಅಥಣಿ

ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ

ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ

ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ

ಅಥಣಿ.ರಾಜ್ಯದ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಭವಿಷ್ಯ ನುಡಿದರು. ಅವರು ಕಾಗವಾಡ ಮತಕ್ಷೇತ್ರದ 4 ಕೋಟಿ ರೂ.ಅನುದಾನದಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.       ರಾಜ್ಯದಲ್ಲಿ ಸಿಎಮ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪಂಚ ಗ್ಯಾರಂಟಿಗಳು ಯಶಸ್ವಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲಪುತ್ತಿದ್ದು ಇದರಿಂದ ಆರ್ಥಿಕವಾಗಿ ಹಿಂದುಳಿದ  ಕುಟುಂಬಗಳು ಆರ್ಥಿಕವಾಗಿ ಸಧೃಢವಾಗಿವೆ ಎಂದ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಸರಕಾರದ ವಿರುದ್ಧ ಅಪ ಪ್ರಚಾರ ಮಾಡಿ ಮತದಾರರನ್ನು ಒಲೈಸಿಕೊಳ್ಳುವ ಅವರ ಪ್ರಯತ್ನ ಸಫಲವಾಗುವುದಿಲ್ಲ ಎಂದರು.       ಕಾಗವಾಡ ಮತಕ್ಷೇತ್ರದ ಜುಗೂಳ, ಕುಸನಾಳ, ಮೊಳವಾಡ, ಉಗಾರ ಬಿ.ಕೆ, ಮೋಳೆ ಮತ್ತು ಕೃಷ್ಣಾ ಕಿತ್ತೂರ ಗ್ರಾಮಗಳಲ್ಲಿ 4 ಕೋಟಿ ಮೊತ್ತದ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಸಿಎಮ್ ಸಿದ್ಧರಾಮಯ್ಯ ರಾಜ್ಯದ ಪ್ರತಿ ಕ್ಷೇತ್ರಕ್ಕೆ 20 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದು, ಕೆಲವೇ ದಿನಗಳಲ್ಲಿ ಈ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುವುದು ಎಂದರು.     ಈ ಸಂದರ್ಭದಲ್ಲಿ ಅಭಿಯಂತರ ವೀರಣ್ಣಾ ವಾಲಿ, ಗುತ್ತಿಗೆದಾರರಾದ ಅನೀಲಕುಮಾರ ಸತ್ತಿ, ಅಮಸಿದ್ಧ ಮಂಗಳೂರ, ಸಿದ್ಧಾರೂಡ ನೇಮಗೌಡ, ಶಿವಪುತ್ರ ನಾಯಿಕ, ಮುಖಂಡರಾದ ಅಣ್ಣಾಸಾಹೇಬ ಪಾಟೀಲ, ಕಾಕಾ ಪಾಟೀಲ, ಅನೀಲ ಕಡೋಲಿ, ರಾಜು ಕಡೋಲಿ, ಉಮೇಶ ಪಾಟೀಲ, ಸುರೇಶ ಪಾಟೀಲ, ಶೀತಲಗೌಡ ಪಾಡೀಲ, ರಾಹುಲ ಶಹಾ, ವಿಪುಲ ಪಾಟೀಲ, ವಸಂತ ಖೋತ, ವಿಶ್ವನಾಥ ಪಾಟೀಲ, ರಾಜು ಮದನೆ, ಯಮನಪ್ಪ ಪಾಟೀಲ, ರಾಜು ಹುದ್ದಾರ, ಮಾರುತಿ ಕೊಕಣೆ, ರಾಜು ನಾಂದಣೆ , ಅಜಿತ ಗಡೆಣ್ಣವರ, ಮಲಗೌಡ ಪಾಟೀಲ, ಶಂಕರ ನಿಂಗನೂರೆ, ರವಿ ಜಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ