ಬಣ್ಣದ ಲೋಕ ಚಿತ್ರಕಲಾ ಪ್ರದರ್ಶನ

ಬಣ್ಣದ ಲೋಕ ಚಿತ್ರಕಲಾ ಪ್ರದರ್ಶನ

ಲೋಕದರ್ಶನ ವರದಿ

ಬಳ್ಳಾರಿ16: ಪ್ರತಿ ವರ್ಷ ನಡೆಯುವಂತೆ ಈ 2018-19 ರ ಶೈಕ್ಷಣಿಕ ವರ್ಷದಲ್ಲಿ ದಿ.16ರಂದು ಸಂತ ಜೋಸೆಫರ ಬಾಲಕರ ಪ್ರೌಢ ಶಾಲೆಯಲ್ಲಿ ಬಣ್ಣದ ಲೋಕ ಚಿತ್ರಕಲಾ ಪ್ರದರ್ಶನವು ಉದ್ಫಾಟಿಸಲಾಯಿತು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ವಂ. ಫಾದರ್. ಭಗವಂತ್ ರಾಜ್ ರವರು ವಹಿಸಿಕೊಂಡಿದ್ದರು. 

 ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು,ಸುಮಲತರರ ಪೀಠಿಕೆಯೊಂದಿಗೆ ಇದರ ರೂವಾರಿ ಶಾಲಾ ಚಿತ್ರ ಕಲಾಶಿಕ್ಷಕರಾದ ಎಫ್ ಜಯರಾಜ್ ರವರು ಭೂಮಿಯೆಂಬ ಕ್ಯಾನ್ವಾಸಿನ ಮೇಲೆ ದೇವರ ಕೈಯ ಕುಂಚದಲ್ಲಿ ರಂಗು ರಂಗಿನ ಬಣ್ಣಗಳ ನರ್ತನವೇ ಈ ಸೃಷ್ಟಿ ಎಂದು ತಿಳಿಸುತ್ತಾ ಬಂದಂತಹ ಗಣ್ಯರನ್ನು ಸ್ವಾಗರತಿಸಿದರು. 

ಕಾರ್ಯಕ್ರಮದ ಉದ್ಘಾಟಕರಾದ ಖೈರುನ್ನಿಸಾ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇವರು ಮಾತನಾಡುತ್ತಾ ತಾವುಕೂಡ 25 ವರ್ಷ ಶೀಕ್ಷಕ ವೃತ್ತಿಯಲ್ಲಿ ಮಕ್ಕಳೊಂದಿಗೆ ಕಳೆದ ನೆನಪುಗಳನ್ನು ನೆನಪಿಸಿಕೊಂಡರು.

   ಶಿಕ್ಷಕರು ಮಕ್ಕಳಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ರಸಪ್ರಶ್ನೆ, ವಸ್ತು ಪ್ರದರ್ಶನಾಲಯಗಳ ಮೂಲಕ ಮಾರ್ಗದರ್ಶನ ನೀಡಿ ಎಂದು ತಿಳಿಸುತ್ತಾ "ಬೋಧಿಸುವುದಕ್ಕಿಂತಲೂ ಕಾರ್ಯರೂಪದಲ್ಲಿ ತೋರುವುದು ಉತ್ತಮ" ಎಂದು ಸ್ವಚ್ಛತೆ ಬಗ್ಗೆ ಚಿತ್ರಗಳ ಮೂಲಕ ಹೆಚ್ಚಿನ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಹಾಗೂ ದೇಹದ ಅಂಗಾಂಗ ದಾನದಿಂದ ಇನ್ನೋಂದು ಜೀವವನ್ನು ಉಳಿಸಬಹುದು ಎಂದು ಮಕ್ಕಳಿಗೆ ತಿಳಿಸುತ್ತಾ ಜಯರಾಜ್ ರವರನ್ನು ಅಭಿನಂದಿಸಿದರು. 

ವಂ. ಫಾದರ್ ಪೌಲ್ ರಾಜ್,  ಶ್ರೇಷ್ಟ ಗುರುಗಳು ಹಾಗೂ ಸಂತ ಅಂತೋಣಿ ಪ್ರಧಾನಾಲಯದ ಪ್ರಧಾನ ಗುರುಗಳು ಮಾತನಾಡುತ್ತಾ ದೇವರು ಜಗತ್ತಿನ ಅತಿ ಶ್ರೇಷ್ಟ ಚಿತ್ರಗಾರರಾಗಿದ್ದಾರೆ. 

  ನಮ್ಮನೆಲ್ಲ ಸೃಷ್ಟಿಸಿದ್ದಾರೆ ನಾವು ಚಿತ್ರಗಳನ್ನು ಜೀವ ತುಂಬುವಂತೆ ಚಿತ್ರಿಸಿದರೆ ನಮ್ಮ ಚಿತ್ರಗಳಿಗೆ ಘನತೆ ಗೌರವ ಸಿಗುತ್ತದೆಂದು ಜಯರಾಜ್ ರವರನ್ನು ಅಭಿನಂದಿಸಿದರು. 

ಈ ಕಾಯಕ್ರಮದ ಅಧ್ಯಕ್ಷರಾದ ವಂ. ಫಾದರ್ ಭಗವಂತ್ ರಾಜ್ ರವರು ಮಾತನಾಡುತ್ತಾ  ಮಕ್ಕಳಿಗೆ ತಮಗೆ  ಕೊಟ್ಟ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಗಳನ್ನು ಹೊರತರಬೇಕು, ತಮ್ಮ ಚಿತ್ರಗಳ ಮೂಲಕ ಸಂದೇಶವನ್ನು ರವಾನಿಸುವಂತಿರಬೇಕು ಅವು ಸಮಾಜಕ್ಕೆ ಒಳಿತಾಗುವಂತಿರಬೇಕು, ಎಂದು ಜಯರಾಜ್ ರವರನ್ನು ಅಭಿನಂದಿಸಿದರು. 

ಡಾ. ಕೆ. ಹನುಮಂತಪ್ಪ, ಕ.ರಾ.ಅ.ಪ್ರಾ.ಶಾ.ಶಿ.ಸ. ಅಧ್ಯಕ್ಷರು, ಮಾತನಾಡುತ್ತಾ ಮಕ್ಕಳಿಗೆ ಗುರಿ, ಛಲ, ಆತ್ಮಸೈರ್ಯವನ್ನು ಮೂಡಿಸಿಕೊಂಡು ಪ್ರತಿಯೊಬ್ಬರು ಬೆಳೆಯಬೇಕು ಎಂದು ಜಯರಾಜ್ ರವರನ್ನು ಅಭಿನಂದಿಸಿದರು. 

ಮರಿಯಮ್ಮ ರವರು ವಂದನಾರ್ಪಣೆಯನ್ನು ನಿಖತ್ ರವರು ನಿರೂಪಣೆಯನ್ನು ಮಾಡಿದರು ವೇದಿಕೆಯಲ್ಲಿ ವಂ. ಫಾದರ್ ಲೂದರ್ು ರಾಜ್, ಸಹಾಯಕ ವ್ಯವಸ್ಥಾಪಕರು, ಹಾಗೂ ಮೂರು ವಿಭಾಗಗಳ ಮುಖ್ಯ ಶಿಕ್ಷಕಿಯರು ಉಪಸ್ಥಿತರಿದ್ದರು. ಕಾಯಕ್ರಮಕ್ಕೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಶಾಲೆ ಶಿಕ್ಷಕ, ಶಿಕ್ಷಕಿ, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.

ಸುದ್ದಿ ಓದಿ