ಜಮಖಂಡಿ

ಸಾಹಿತ್ಯ ರಚನೆಗೆ ಶಬ್ದ ಸಂಗ್ರಹ ಅಗತ್ಯ: ಸಾಹಿತಿ ಯಡಹಳ್ಳಿ

ಸಾಹಿತ್ಯ ರಚನೆಗೆ ಶಬ್ದ ಸಂಗ್ರಹ ಅಗತ್ಯ: ಸಾಹಿತಿ ಯಡಹಳ್ಳಿ

ಲೋಕದರ್ಶನ ವರದಿ,

ಜಮಖಂಡಿ  20: ಸಾಹಿತ್ಯ ರಚನೆ ಅಷ್ಟು ಸುಲಭವಲ್ಲ ಎಲ್ಲರಿಂದಲೂ ಸಾಧ್ಯವಿಲ್ಲ. ಒಂದು ಸಾಹಿತ್ಯ ರಚನೆಗೆ ಕಠಿಣ ಶ್ರಮ ಸಂಯಮ, ಶಬ್ದ ಸಂಗ್ರಹ, ತಾಳ್ಮೆ, ಶೃದ್ಧೆ ಸಾಹಿತ್ಯಾಸಕ್ತಿ ಅಗತ್ಯವಾಗಿಬೇಕು ಎಂದು ಸಾಹಿತಿ ಬಸವರಾಜ ಯಡಹಳ್ಳಿ ಹೇಳಿದರು.

ನಗರದ ಸಿದ್ದರಾಮೇಶ್ವರ ಕಾಲನಿಯ ಉತ್ತರಾದಿ ಮಠದಲ್ಲಿ ನಿವೃತ ಪ್ರಧ್ಯಾಪಕ ಕೃಷ್ಣ ಕುಲಕರ್ಣಿ ವಿರಚಿತ ಚೊಚ್ಚಲ ಕವನ ಸಂಕಲನ ಹೂವಿನ ಹಾರ ಬಿಡುಗಡೆ ಗೊಳಿಸಿ ಮಾತನಾಡಿದರು.

 ಒಂದು ಕವನ ಸಂಕಲನ ಹೊರತರಬೇಕಾದರೆ ಸಾಕಷ್ಟು ಪರಿಶ್ರಮವಿದೆ. ಕೃಷ್ಣ ಕುಲಕರ್ಣಿಯವರು ನಾವು ಸಹೋದ್ಯೋಗಿ ಶಿಕ್ಷಕರು. ಅವರೊಬ್ಬ ವಿಜ್ಞಾನ ಶಿಕ್ಷಕರಾಗಿ ನಿವೃತ್ತಿ ಹೊಂದಿ ಸಾಹಿತ್ಯ ರಚನೆ ಮಾಡುತ್ತಾರೆ ಅವರಲ್ಲಿದ್ದ ಸಾಹಿತ್ಯಸಕ್ತಿಯೇ ಕಾರಣ ಇವರು ಓರ್ವ ಅದ್ಭುತ ಸಂಗೀತಕಾರರೂ ಸಹ ಆಗಿದ್ದಾರೆ ಎಂದರು.

ಸಾಹಿತಿ ಮಲ್ಲಿಕಾರ್ಜುನ ಇಂಡಿ. ಪ್ರವೀಣ ಕುಲಕರ್ಣಿಕೃತಿ ಪರಿಚಯ ಮಾಡಿದರು. ಕೃತಿ ಕತೃ ಕೃಷ್ಣಾ ಕುಲಕರ್ಣಿ, ವಂದನಾ ಶುಕ್ಲೆ ಮಾತನಾಡಿದರು. ಪಂಡಿತ ಸುಶಮೀಂದ್ರಾಚಾರ್ಯ ಮನಗೂಳಿ ಆಶಿರ್ವಚನ ನೀಡಿದರು.

ರಾಜೇಂದ್ರ ಹುಲ್ಯಾಳಕರ ಸ್ವಾಗತಿಸಿ, ನಿರೂಪಿಸಿದರು, ರಾಘವೇಂದ್ರ ಉಮರ್ಜಿ ವಂದಿಸಿದರು. ವೇದಿಕೆಯಲ್ಲಿ ಶ್ರೀಪೂರ್ಣಬೋಧಾಚಾರ್ಯ ಬೀಡಕರ,ಅನಿಲ ಶುಕ್ಲೆ, ಪ್ರಲ್ಹಾದ ಉಪಾಧ್ಯೆ, ಸುರೇಶ ಶುಕ್ಲೆ, ವಾದಿರಾಜ ಗಲಗಲಿ, ಎನ್.ಕೆ ಕುಲಕರ್ಣಿ, ಸೇರಿದಂತೆ ಅನೇಕರಿದ್ದರು.



ಸುದ್ದಿ ಓದಿ